ಜಿಲ್ಲಾ ಪೊಲೀಸ್ ಕ್ರೀಡಾಕೂಟ: ಗೆಲುವಿಗಾಗಿ ಬೆವರಿಳಿಸಿದ ಪೊಲೀಸರು-ಕಹಳೆ ನ್ಯೂಸ್
ಮಡಿಕೇರಿ: ಇಲ್ಲಿನ ಜಿಲ್ಲಾ ಸಶಸ್ತ್ರ ದಳದ ಕವಾಯತು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಗುರುವಾರ ಸಂಭ್ರಮದ ತೆರೆ ಬಿತ್ತು. ಪ್ರಭಾರ ಜಿಲ್ಲಾಧಿಕಾರಿ ಆನಂದ್ಪ್ರಕಾಶ್ ಮೀನಾ ಅವರು ಮಂಗಳವಾರ ಉದ್ಘಾಟಿಸಿದ್ದ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ನೂರಾರು ಮಂದಿ ಪೊಲೀಸರು ಕಳೆದ 3 ದಿನಗಳಿಂದ ಭಾಗಿಯಾದರು. ಸದಾ ಕಳ್ಳರ ಹಿಂದೆ ಓಡುತ್ತಿದ್ದ ಪೊಲೀಸರು ಗೆಲುವಿಗಾಗಿ ಮೈದಾನದಲ್ಲಿ ಕೊರೆಯುವ ಚಳಿಗಾಲದಲ್ಲೂ ಬೆವರಿಳಿಸಿದರು. ಗೆಲುವು ಕಂಡಾಗ ಸಂಭ್ರಮದ ನಗೆ...