ಕೊಡಗಿನಲ್ಲಿ ಕಾಂಗ್ರೆಸ್ ಗೆ ಶಾಕ್ – 26ರಂದು ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ಚಲೋ – ಕೊಡಗಿನಲ್ಲಿ 4 ದಿನಗಳ ಕಾಲ 144 ಸೆಕ್ಷನ್ ನಿಷೇಧಾಜ್ಞೆ ; ಮದ್ಯ ಮಾರಾಟ ನಿಷೇಧ – ಕಹಳೆ ನ್ಯೂಸ್
ಮಡಿಕೇರಿ: ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಮೇಲಾಟ, ಕಿತ್ತಾಟದ ನಡುವೆ ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಕೊಡಗಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದು, 2 ಪಕ್ಷಗಳು ಪ್ರತಿಭಟನೆಯನ್ನು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ನಾಳೆಯಿಂದ ಆ.27ರವರೆಗೆ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಜಾರಿಗೊಳಿಸಿದ್ದು, ಈ...