ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮ- ಕಹಳೆ ನ್ಯೂಸ್
ಕಡಬ:ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನ (ಬೀಳ್ಕೊಡುಗೆ) ಕಾರ್ಯಕ್ರಮವು ಯಾದವ ಶ್ರೀ ಸಭಾಂಗಣ ಹನುಮಾನ್‌ನಗರ ಕೇವಳದಲ್ಲಿ ಮಾರ್ಚ್ 7ರಂದು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೇಶವ ಅಮೈ ಮಾಲಕರು ಎಸ್.ಆರ್.ಕೆ ಲ್ಯಾರ‍್ಸ್ ಪುತ್ತೂರು ಇವರು ದೀಪ ಪ್ರಜ್ವಲವನ್ನು ನೆರವೇರಿಸಿ, ಪ್ರೌಢಶಾಲಾ ಶಿಕ್ಷಣ ಮರೆಯಲಾಗದ ಶಿಕ್ಷಣ, ಇಂದು ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು ಈ ದೇವಾಲಯದಿಂದ ದೇವತೆ ದೇವರುಗಳಾಗಿ ಹೊರ ಹೋಗುತ್ತಿದ್ದಾರೆ. ಅಂಕಗಳ ಜೊತೆ ಕೌಶಲ್ಯಗಳು ಅಗತ್ಯ ಎಂದು...