ಸಾಹಿತ್ಯ ಲೋಕದಲ್ಲಿ ಅಂತರ್ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಸಮ್ಯಕ್ತ್ ಜೈನ್ – ಕಹಳೆ ನ್ಯೂಸ್
ಕಡಬ: ತನ್ನ ವಿಭಿನ್ನ ಬರಹ ಶೈಲಿಯ ಮೂಲಕ ಸಾಹಿತ್ಯ ಲೋಕದ ವಿವಿಧ ಮಜಲುಗಳಲ್ಲಿ ಹೆಜ್ಜೆಯನ್ನಿಡುತ್ತಾ ಧ್ವನಿಸುತ್ತಿರುವ ದಕ್ಷಿಣ ಕನ್ನಡ ,ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಯುವ ಪ್ರತಿಭೆ ಇದೀಗ ಚುಟುಕು ಸಾಹಿತ್ಯದಲ್ಲೂ ತನ್ನ ಬರವಣಿಗೆ ತೋರ್ಪಡಿಸಿ ಸೈ ಎನಿಸಿಕೊಂಡಿದ್ದಾರೆ . ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ ) ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಜಿಲ್ಲಾ ಘಟಕ ಯಾದಗಿರಿಯ ಪ್ರಾಯೋಜಕತ್ವದಲ್ಲಿ ನವೆಂಬರ್ 22 , 23 ಮತ್ತು 24 ರಂದು...