ಉಳ್ಳಾಲ : ‘ನಾನು ಮಾಡುವ ಅಭಿವೃದ್ಧಿ ಕೆಲಸ ಓಟಿಗಾಗಿ ಅಲ್ಲ, ಮುಂದಿನ ತಲೆಮಾರಿಗಾಗಿ’ ; ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ – ಕಹಳೆ ನ್ಯೂಸ್
ಉಳ್ಳಾಲ, ನ.29 : ನಾನು ಮಾಡುವ ಯಾವುದೇ ಅಭಿವೃದ್ಧಿ ಕೆಲಸ ಓಟಿಗಾಗಿ ಅಲ್ಲ, ಮುಂದಿನ ತಲೆಮಾರಿಗಾಗಿ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಯ ವಿಚಾರ ಬಂದಾಗ ಯಾವುದೇ ರಾಜಿಯಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗೆ ಹಾಗೂ ಅಸೈಗೋಳಿಯಿಂದ ನಡುಪದವು ತನಕ ನಿರ್ಮಾಣ ಆಗಲಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ತೊಕ್ಕೊಟ್ಟಿನಲ್ಲಿ ಶಂಕು ಸ್ಥಾಪನಾ ಕಾರ್ಯಕ್ರಮ ನಡೆಯಿತು. ಈ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಷ್ಟು ವರ್ಷ ಯಾವುದೇ ವ್ಯಾಪಾರಿಗಳಿಗೆ...