ಖ್ಯಾತ ಯಕ್ಷಗಾನ ಕಲಾವಿದ ರಾಜೇಂದ್ರಕೃಷ್ಣ ಪಂಜಿಗದ್ದೆ ರಸ್ತೆ ಅಪಘಾತ – ಕಹಳೆ ನ್ಯೂಸ್
ಪುತ್ತೂರು : ಖ್ಯಾತ ಯಕ್ಷಗಾನ ಚಕ್ರತಾಳ ಕಲಾವಿದ ರಾಜೇಂದ್ರಕೃಷ್ಣ ಪಂಜಿಗದ್ದೆಯವರಿಗೆ ರಸ್ತೆ ಅಪಘಾತ ಸಂಭವಿಸಿದೆ. ಕೊಣಾಜೆಯ ಇರಾ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ, ಎಡ ಕಾಲು ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳಾಗಿ ಸದ್ಯ ದೇರಳೆಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಇವರ ಸಂಯೋಜನೆಯಲ್ಲಿ ಇದೇ ತಿಂಗಳು 20 ನೇ ತಾರೀಖಿನಂದು ಕಶೆಕೋಡಿಯಲ್ಲಿ ಮಳೆಕಾಲದ ಭರ್ಜರಿ ಯಕ್ಷಗಾನ ಪ್ರದರ್ಶನ ಸಂಯೋಜನೆಗೊಂಡಿತ್ತು....