ಎಂಸಿಸಿ ಬ್ಯಾಂಕ್ ಗೆ ದಾಖಲೆಯ 10.45 ಕೋಟಿ ರೂ. ನಿವ್ವಳ ಲಾಭ: ಶೇ.10 ಡಿವಿಡೆಂಡ್ ಘೋಷಣೆ – ಕಹಳೆ ನ್ಯೂಸ್
ಮಂಗಳೂರು, ಸೆ.23: ಎಂ.ಸಿ.ಸಿ. ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕೆಥೊಲಿಕ್ ಕೋ-ಆಪರೇಟಿವ್ ಬ್ಯಾಂಕ್ ಅತ್ಯುತ್ತಮ ಪ್ರಗತಿ ಸಾಧಿಸಿದ್ದು 2023-24ನೇ ವಿತ್ತೀಯ ವರ್ಷದಲ್ಲಿ ಶೇ.10 ಲಾಭಾಂಶ ಘೋಷಿಸಿದೆ. ಜೊತೆಗೆ ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭ.10.45 ಕೋಟಿ ರೂ. ಆಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲೇ ಅತ್ಯಂತ ಹೆಚ್ಚಿನ ಲಾಭ ಎಂದು ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ತಿಳಿಸಿದ್ದಾರೆ. ಅವರು ರವಿವಾರ ಸಂತ...