ಮಂಗಳೂರಿನಲ್ಲಿ ಹೈ ಬೀಮ್ ಲೈಟ್ ವಿರುದ್ಧ ಭರ್ಜರಿ ಕಾರ್ಯಾಚರಣೆ ; 5.86 ಲಕ್ಷ ರೂ. ದಂಡ ಸಂಗ್ರಹ – ಕಹಳೆ ನ್ಯೂಸ್
ಮಂಗಳೂರು, ಜುಲೈ 25: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೈ ಬೀಮ್ ಹಾಗೂ ಅತಿ ಹೆಚ್ಚು ಪ್ರಖರವಾಗಿ ಬೆಳಗುವ ಅಥವಾ ಕಣ್ಣುಕುಕ್ಕುವ ಎಲ್ಇಡಿ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಜುಲೈ 15 ರಿಂದ 23 ರವರೆಗೆ 1170 ಪ್ರಕರಣಗಳು ದಾಖಲಾಗಿದ್ದು, 5.86 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 1989 ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾರ್ವಜನಿಕರು ವಾನಹಗಳಲ್ಲಿ...