ಬೊಳಿಯಾರ್ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ : ಕಾಂಗ್ರೆಸ್‍ನ ಸೌಹಾರ್ಧತೆಯ ಭಾಷಣಕ್ಕೆ ಕವಡೆ ಕಿಮ್ಮತ್ತಿಲ್ಲ : ಶಾಸಕ ಡಾ.ಭರತ್ ಶೆಟ್ಟಿ ವೈ – ಕಹಳೆ ನ್ಯೂಸ್
ಕಾವೂರು : ಸೌಹಾರ್ಧತೆ ಎಂಬುದು ರಕ್ತದಲ್ಲಿ ಬರಬೇಕು. ಕಾಂಗ್ರೆಸ್‍ನ ರಾಜಕೀಯ ಓಲೈಕೆಯ ಸೌಹಾರ್ಧತೆಗೆ ಕವಡೆ ಕಿಮ್ಮತ್ತನ್ನು ಕಿಡಿಗೇಡಿಗಳು ನೀಡುವುದಿಲ್ಲ.ಭಾರತ್ ಮಾತಾಕಿ ಜೈ ಎಂದು ಹೇಳಿದ ಮಾತ್ರಕ್ಕೆ ಚೂರಿ ಇರಿತದ ಘಟನೆ ನಡೆದಿದ್ದು,ಭಾರತ ಎಂದರೆ ಎಷ್ಟು ಅಸಹನೆ ಹೆಚ್ಚುತ್ತಿದೆ ಎಂಬುದು ಮುಡಿಪು ಘಟನೆಯಿಂದ ಸಾಬೀತಾಗಿದೆ. ಸರಕಾರ ಹಾಗೂ ಪೊಲೀಸರು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಆಕ್ರೋಶಿತ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಖಡಕ್ಕಾಗಿ...