ಗೋವು ರಾಷ್ಟ್ರೀಯ ಪ್ರಾಣಿಯಾನ್ನಾಗಿ ಘೋಷಣೆ ಮಾಡಬೇಕು :ರಮಿತಾ ಶೈಲೇಂದ್ರ ಅಭಿಪ್ರಾಯ-ಕಹಳೆ ನ್ಯೂಸ್
ಬಂಟ್ವಾಳ:ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳ ಪೈಕಿ ಗೋವು ಶ್ರೇಷ್ಟ ಪ್ರಾಣಿಯಾಗಿದ್ದು ,ದಿನನಿತ್ಯ ಗೋಮಾತೆಗೆ ಗೋಪೂಜೆ ಮಾಡುವುದರಿಂದ ಪ್ರತ್ಯಕ್ಷ ಲಕ್ಷ್ಮೀಗೆ ಪೂಜೆ ಮಾಡಿದಂತೆ ಇದರಿಂದ ಲಕ್ಷ್ಮೀಯು ಸುಲಭವಾಗಿ ಒಲಿಯುತ್ತಾಳೆ . ಗೋವುಗಳ ಸಂಖ್ಯೆ ಹೆಚ್ಚಾದಂತೆ ಸಮಾಜದಲ್ಲಿ ಶಾಂತಿಯು ನೆಲೆಸಿ ರಾಷ್ಟ್ರವು ಸಮೃದ್ದ ಭರಿತವಾಗುತ್ತದೆ. ಭಾರತವು ಗೋಮಾತೆಗೆ ವಿಶೇಷವಾಗಿ ತಾಯಿಯ ಸ್ಥಾನ ನೀಡಿರುವುದರಿಂದ ಭಾರತ ಸಂಪದ್ಬರಿತ ರಾಷ್ಟ್ರವಾಗಿರುವುದನ್ನು ಮನಗಂಡ ಆಗಿನ ಕಾಲದ ಬ್ರಿಟಿಷರು ಭಾರತದಲ್ಲಿನ ಗೋವುಗಳ ಸಂಖ್ಯೆ ಕಡಿಮೆ ಮಾಡುವ ದುರುದ್ದೇಶದಿಂದ ಕಸಾಯಿಖಾನೆಯನ್ನು ತೆರೆಯುವ...