ಬಂಟ್ವಾಳ: ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಿಎನ್ಜಿ ಬಸ್ ನ ಓಡಾಟ- ಕಹಳೆ ನ್ಯೂಸ್
ಬಂಟ್ವಾಳ: ಪೆಟ್ರೋಲ್-ಡೀಸೆಲ್ಗೆ ಪರ್ಯಾಯ ಇಂಧನವಾಗಿ ವಾಹನಗಳಿಗೆ ಸಿಎನ್ಜಿ (ಕಂಪ್ರಸ್ಡ್ ನ್ಯಾಚುರಲ್ ಗ್ಯಾಸ್) ಬಳಕೆ ಮಾಡಲಾಗುತ್ತಿದ್ದು, ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಿಎನ್ಜಿ ಇಂಧನ ಬಳಕೆಯ ಬಸ್ಸೊಂದು ಶನಿವಾರ ರಸ್ತೆಗಿಳಿದಿದೆ. ಉಪ್ಪಿನಂಗಡಿ- ಮಂಗಳೂರು ಮಾರ್ಗದಲ್ಲಿ ಈ ಹೊಸ ಬಸ್ ಓಡಾಟ ಆರಂಭಿಸಿದೆ. ಈ ಬಸ್ಸನ್ನು ಟಾಟಾ ಮೋಟಾರ್ಸ್ ಕಂಪೆನಿ ತಯಾರಿಸಿದ್ದು, ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಿಎನ್ಜಿ ಆಧಾರಿತ ಮೊಟ್ಟಮೊದಲ ಬಸ್ ಎಂದು ಖಾಸಗಿ ಬಸ್ ಮಾಲಕರ ಸಂಘದವರು ತಿಳಿಸಿದ್ದಾರೆ. ಕಂಪೆನಿಯವರ ಮಾಹಿತಿ ಪ್ರಕಾರ...