Sunday, November 24, 2024

ಬಂಟ್ವಾಳ

ಬಂಟ್ವಾಳ

ಕೊಡಾಜೆಯಲ್ಲಿ ಮತ್ತೆ ಸರಣಿ ಅಪಘಾತ ; ಇಬ್ಬರಿಗೆ ಗಂಭೀರ ಗಾಯ-ಕಹಳೆ ನ್ಯೂಸ್

ಬಂಟ್ವಾಳ : ಮಾಣಿ - ಮಠ ರಸ್ತೆಯ ಕೊಡಾಜೆಯಲ್ಲಿ ಇಂದು ಬೆಳಗ್ಗೆ ಮತ್ತೆ ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮತ್ತು ಮಾಣಿಯಿಂದ ಪುತ್ತೂರಿಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಈ ವೇಳೆ ಟಾಟಾ ಏಸ್ ವಾಹನದ ಹಿಂದಿನಿಂದ ಬರುತ್ತಿದ್ದ ಬೈಕ್ ನಿಯಂತ್ರಣ ಕಳೆದು ಟಾಟಾ ಏಸ್ ಗೆ ಢಿಕ್ಕಿಯಾಗಿದೆ. ಈ ಘಟನೆಯಿಂದ...
ಬಂಟ್ವಾಳ

ನಿಯಮ ಉಲ್ಲಂಘಿಸಿ ಮದುವೆಗೆ ಅವಕಾಶ ನೀಡಿದರೆ ಕಾನೂನು ಕ್ರಮ ; ಬಂಟ್ವಾಳ ಪೊಲೀಸರ ಸಭೆಯಲ್ಲಿ ಹಾಲ್ ಮಾಲಕರಿಗೆ ಎಚ್ಚರಿಕೆ –ಕಹಳೆ ನ್ಯೂಸ್

ಬಂಟ್ವಾಳ : ಕೊರೋನ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರಕಾರ ರೂಪಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಮದುವೆ ಕಾರ್ಯ ನಡೆಸಬೇಕು ಎಂದು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಮದುವೆ ಹಾಲ್ ಗಳ ಮಾಲಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬಂಟ್ವಾಳ ನಗರ ಠಾಣೆಯ ಇನ್‍ಸ್ಪೆಕ್ಟರ್ ಚೆಲುವರಾಜ್, ಗ್ರಾಮಾಂತರ ಠಾಣೆಯ ಎಸ್ಸೈ ಪ್ರಸನ್ನ, ಅಪರಾಧ ವಿಭಾಗದ ಎಸ್ಸೈ ಸಂಜೀವ ನೇತೃತ್ವದಲ್ಲಿ ಮಂಗಳವಾರ ನಡೆದ...
ಬಂಟ್ವಾಳ

ಕೋರೋನಾ ರೋಗಿಗಳಿಗೆ ಮೀಸಲಿರುವ ಬೆಡ್, ಆಕ್ಸಿಜನ್, ಔಷಧಿ ವ್ಯವಸ್ಥೆಯ ಬಗ್ಗೆ ವಿಚಾರಿಸಲು ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ -ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ಸರಕಾರಿ ಆಸ್ಪತ್ರೆಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕೋರೋನಾ ರೋಗಿಗಳಿಗೆ ಮೀಸಲಿರುವ ಬೆಡ್, ಆಕ್ಸಿಜನ್, ಔಷಧಿ ವ್ಯವಸ್ಥೆಯ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಷ್ಪಲತಾರವರಿಂದ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಯುವಮೋರ್ಚಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಪಂಚಾಯತ್ ಸದಸ್ಯ ಕಾರ್ತಿಕ್ ಬಳ್ಳಾಲ್ ಉಪಸ್ಥಿತರಿದ್ದರು....
ಬಂಟ್ವಾಳ

ಬಂಟ್ವಾಳ ತಾಲೂಕಿನ ಬಬ್ಬರಬೈಲು ದೈವಸ್ಥಾನದಲ್ಲಿ ಕೊರಗಜ್ಜ ದೈವದ ನೇಮೋತ್ಸವ ; ದೈವಕ್ಕೆ ಹೂಮಳೆ ಸುರಿಸುವ ಆಕರ್ಷಕ ದೃಶ್ಯವನ್ನು ಭ್ರಾಮರಿ ಸ್ಟುಡಿಯೋ ಛಾಯಾಗ್ರಾಹಕ ಸತೀಶ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಭಕ್ತರು-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಈಚೆಗೆ ನಡೆದ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ನಡೆಯಿತು. ಈ ನೇಮೋತ್ಸವದಲ್ಲಿ ಭಕ್ತರು ದೈವಕ್ಕೆ ಹೂಮಳೆ ಸುರಿಸುವ ಆಕರ್ಷಕ ದೃಶ್ಯವನ್ನು ಭ್ರಾಮರಿ ಸ್ಟುಡಿಯೋ ಛಾಯಾಗ್ರಾಹಕ ಸತೀಶ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು....
ಬಂಟ್ವಾಳ

ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 37ನೇ ಸಂಭ್ರಮಾಚರಣೆಯ ಪ್ರಯುಕ್ತ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ-ಕಹಳೆ ನ್ಯೂಸ್

ಬಂಟ್ವಾಳ : ಕಳೆದ 36 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 37ನೇ ಸಂಭ್ರಮಾಚರಣೆಯ ಪ್ರಯುಕ್ತ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಎ.25ರಂದು ಇಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ. ಪುಂಜಾಲಕಟ್ಟೆ ಯಲ್ಲಿ ಎ.18ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ವಿವರ ನೀಡಿದರು....
ಬಂಟ್ವಾಳ

ಬಿ.ಸಿ.ರೋಡು : ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ, ಹಿಂದುತ್ವ ಎಂದರೆ ರಾಷ್ಟ್ರಪ್ರೇಮದ ಸಂಕೇತ ; ರಾಧಾಕೃಷ್ಣ ಅಡ್ಯಂತಾಯ-ಕಹಳೆ ನ್ಯೂಸ್

ಬಂಟ್ವಾಳ : ಬಹು ಭಾಷೆ ಮತ್ತು ವಿವಿಧ ಧರ್ಮಗಳಿಂದ ಕೂಡಿದ ಈ ದೇಶದಲ್ಲಿ ಹಿಂದುತ್ವ ಎಂದರೆ ನೈಜ ರಾಷ್ಟ್ರಪ್ರೇಮದ ಸಂಕೇತವಾಗಿದೆ. ಆದರೆ ಲವ್ ಜಿಹಾದ್, ಮತಾಂತರ ಮತ್ತು ಗೋಹತ್ಯೆ ಮತ್ತಿತರ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಯುವವಾಹಿನಿ ವತಿಯಿಂದ ಶನಿವಾರ...
ಬಂಟ್ವಾಳ

ಮೀನು ಸಾಕಾಣಿಕೆಯಲ್ಲಿ ತೊಡಗಿ ಯಶಸ್ಸನ್ನು ಸಾದಿಸಿದವರು ಬಂಟ್ವಾಳದ ಅಮ್ಟೂರು ಪ್ರಜ್ವಲ್ ಪ್ರತೀಕ್ ಪಿಂಟೊ-ಕಹಳೆ ನ್ಯೂಸ್

ಬಂಟ್ವಾಳ : ವಿದೇಶದಲ್ಲಿ ಉತ್ತಮ ಸಂಪಾದನೆಯ ವೃತ್ತಿ ನಿರ್ವಹಿಸುತ್ತಿದ್ದ ಯುವಕನೋರ್ವ ಕಳೆದ 2 ವರ್ಷಗಳ ಹಿಂದೆ ಸ್ವದೇಶಕ್ಕೆ ಆಗಮಿಸಿ, ಇದೀಗ ತನ್ನ ಆಸಕ್ತಿಯ ಕ್ಷೇತ್ರ ಮೀನು ಸಾಕಾಣಿಕೆಯಲ್ಲಿ ಯಶಸ್ಸನ್ನು ಸಾದಿಸಿದ್ದಾರೆ. ಬಯೋಫ್ಲಾಕ್ ವಿಧಾನದ ಮೂಲಕ ಮೀನು ಕೃಷಿಯಲ್ಲಿ ತೊಡಗಿದ್ದು, ವಿದೇಶಿ ಸಂಪಾದನೆಗಿಂತಲೂ ಈ ಉದ್ಯಮದಲ್ಲಿ ಹೆಚ್ಚಿನ ಸಂಪಾದನೆಯ ವಿಶ್ವಾಸವನ್ನು ಹೊಂದಿದ್ದಾರೆ. ಬಂಟ್ವಾಳದ ಅಮ್ಟೂರು ಪ್ರಜ್ವಲ್ ಪ್ರತೀಕ್ ಪಿಂಟೊ ಅವರು ಮೀನು ಸಾಕಾಣಿಕೆಯಲ್ಲಿ ತೊಡಗಿರುವ ಯುವಕ. ಕೊಚ್ಚಿಯಲ್ಲಿ ಫಯರ್ ಆ್ಯಂಡ್ ಸೇಫ್ಟಿಯಲ್ಲಿ...
ಬಂಟ್ವಾಳ

ಎಪ್ರಿಲ್ 17ರಂದು ಬಿ.ಸಿ.ರೋಡಿನಲ್ಲಿ ದ.ಕ. ಜಿಲ್ಲಾ ಮಟ್ಟದ ‘ಜಾಗರಣ ಟ್ರೋಫಿ’ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್

ಬಂಟ್ವಾಳ : ಹಿಂದು ಜಾಗರಣ ವೇದಿಕೆ, ಹಿಂದು ಯುವವಾಹಿನಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 'ಜಾಗರಣ ಟ್ರೋಫಿ - 2021' ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಎಪ್ರಿಲ್ 17ರಂದು ಬಿ.ಸಿ.ರೋಡ್ ಗಾಣದಪಡ್ಪು ಮೈದಾನದಲ್ಲಿ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ತಿಳಿಸಿದರು. ಬಂಟ್ವಾಳ ಪ್ರೆಸ್...
1 123 124 125 126 127 147
Page 125 of 147