Sunday, November 24, 2024

ಬಂಟ್ವಾಳ

ಬಂಟ್ವಾಳ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಇದರ ವತಿಯಿಂದ ಬಿಜೆಪಿ ಸಂಸ್ಥಾಪನ ದಿನದ ಆಚರಣೆ-ಕಹಳೆ ನ್ಯೂಸ್

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಇದರ ವತಿಯಿಂದ ಬಿಜೆಪಿ ಸಂಸ್ಥಾಪನ ದಿನವನ್ನು ಆಚರಿಸಲಾಯಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಮದಾಸ್ ಬಂಟ್ವಾಳ ಇವರು ಬಿಜೆಪಿಯ ಹುಟ್ಟು ಹಾಗೂ ಬೆಳೆದು ಬಂದ ದಾರಿಯ ಬಗ್ಗೆ ಪ್ರಸ್ತಾವಿಕ ಭಾಷಣ ಮಾಡಿದರು. ಮತ್ತು ಬಿಜೆಪಿ ಪಕ್ಷವನ್ನು ಬೆಳೆಸಲು, ಪಕ್ಷಕೋಸ್ಕರ ದುಡಿದ ಎಲ್ಲಾ ಕಾರ್ಯಕರ್ತರಿಗೆ ಮತದಾರ ಬಂಧುಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು...
ಬಂಟ್ವಾಳ

ಏಪ್ರಿಲ್ 10 ರಂದು ನಡೆಯಲಿದೆ ಶ್ರೀ ರಾಮ ಕ್ರಿಕೆಟರ‍್ಸ್, ಅಲ್ಲಿಪಾದೆ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಶ್ರೀ ರಾಮ ಟ್ರೋಫಿ-2021-ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ರಾಮ ಕ್ರಿಕೆಟ ರ‍್ಸ್, ಅಲ್ಲಿಪಾದೆ ಬಂಟ್ವಾಳ ತಾಲೂಕು ದ.ಕ ಇದರ ಆಶ್ರಯದಲ್ಲಿ 8 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಶ್ರೀ ರಾಮ ಟ್ರೋಫಿ-2021 ಜರಗಲಿರುವುದು. ಈ ಪಂದ್ಯಾಟವು ಏಪ್ರಿಲ್ 10 ರಂದು ರಾತ್ರಿ 9 ಗಂಟೆಗೆ ಶ್ರೀ ರಾಮ ಕ್ರೀಡಾಂಗಣ ಅಲ್ಲಿಪಾದೆಯಲ್ಲಿ ನಡೆಯಲಿದೆ....
ಬಂಟ್ವಾಳ

ವಿಟ್ಲದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ದಾನಿಗಳಿಗೆ ಜ್ಯೂಸ್ ಬದಲಾಗಿ ಸಿಕ್ಕಿತು ಪೆಟ್ರೋಲ್-ಕಹಳೆ ನ್ಯೂಸ್

ಬಂಟ್ವಾಳ : ಏಪ್ರಿಲ್ 4 ರಂದು ಒಕ್ಕೆತ್ತೂರು ಸರ್ಕಾರಿ ಶಾಲೆಯಲ್ಲಿ ಬಂಟ್ವಾಳದ ವಿಟ್ಲ ವಲಯದ ಬೆಳಕು ಹಾಗೂ ಧ್ವನಿ ವಿತರಕರ ಒಕ್ಕೂಟ, ಮಂಗಳಪದವು ಐಡಿಯಲ್ ಫ್ಯೂಲ್ಸ್, ವಿಟ್ಲ ಲಯನ್ಸ್ ಕ್ಲಬ್ ಮತ್ತು ಮಂಗಳೂರು ಕೆಎಂಸಿ ಆಸ್ಪತ್ರೆಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಆದರೆ ವಿಟ್ಲದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ, ದಾನಿಗಳಿಗೆ ಜ್ಯೂಸ್ ಬದಲಾಗಿ ಪೆಟ್ರೋಲ್ ನೀಡಲಾಗಿದೆ. ಈ ರಕ್ತದಾನ ಕಾರ್ಯಕ್ರಮದಲ್ಲಿ ಮೊದಲ 50 ರಕ್ತದಾನಿಗಳಿಗೆ, ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್...
ಬಂಟ್ವಾಳ

ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಂದ ಯುವಕನ ಮೇಲೆ ಹಲ್ಲೆ- ಕಹಳೆ ನ್ಯೂಸ್‍

ಬಂಟ್ವಾಳ : ದ.ಕ. ಜಿಲ್ಲೆಯ ಬಿಸಿರೋಡ್ ನಲ್ಲಿ ಭಾನುವಾರ ರಾತ್ರಿ ಯುವಕನ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧದಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಬಂಟ್ವಾಳ ತಾಲೂಕು ಬ್ರಹ್ಮರಕೂಟ್ಲು ಸಮೀಪದ ಉಮ್ಮಣ್ಣಗುಡ್ಡೆ ನಿವಾಸಿ 30ವರ್ಷದ ಮನೋಜ್ ಹಲ್ಲೆಗೊಳಗಾದವರು. ಮನೋಜ್, ಭಾನುವಾರ ರಾತ್ರಿ ಅಜ್ಜಿಬೆಟ್ಟು ಕ್ರಾಸ್‍ನ ಬಳಿ ಗಾಡಿ ನಿಲ್ಲಿಸಿ ಅಂಗಡಿ ಮುಂಭಾಗ ನಿಂತಿದ್ದ ಸಂದರ್ಭದಲ್ಲಿ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳಿಬ್ಬರು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ....
ಬಂಟ್ವಾಳ

ಕಲೆ, ಸಾಹಿತ್ಯ ಕ್ಷೇತ್ರದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕೆಲಸ ನಿರಂತರ ಆಗಬೇಕಾಗಿದೆ; ಡಾ. ಪ್ರಭಾಕರ ಭಟ್-ಕಹಳೆ ನ್ಯೂಸ್

ಬಂಟ್ವಾಳ : ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು, ಕಲೆ, ಸಾಹಿತ್ಯ ಕ್ಷೇತ್ರದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕೆಲಸ ನಿರಂತರ ಆಗಬೇಕಾಗಿದ್ದು, ಇಂತಹಾ ಕೆಲಸ ವಿಜಯಕುಮಾರ್ ಕೊಡಿಯಾಲ್ ಬೈಲ್ ರಂತಹಾ ರಂಗನಿರ್ದೇಶಕರಿಂದ ಸಾಧ್ಯವಾಗುತ್ತಿದೆ ಎಂದು ಹೇಳಿದರು. ಅವರು ಮೈತ್ರಿ ಕಲ್ಲಡ್ಕದ ಆಶ್ರಯದಲ್ಲಿ ಕಲ್ಲಡ್ಕದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶಿವದೂತೆ ಗುಳಿಗ ನಾಟಕದ ಸಂದರ್ಭದಲ್ಲಿ ನಡೆದ ತ್ರಿಮೂರ್ತಿ ಕಲಾವಿದರ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು....
ಬಂಟ್ವಾಳ

ಕಲ್ಲಡ್ಕ-ಕಾಂಞಂಗಾಡು ಹೆದ್ದಾರಿಯಲ್ಲಿ ಸರಣಿ ಅಪಘಾತ; ದ್ವಿಚಕ್ರ ಸವಾರನಿಗೆ ಗಾಯ-ಕಹಳೆ ನ್ಯೂಸ್

ಬಂಟ್ವಾಳ : ಕಲ್ಲಡ್ಕ-ಕಾಂಞಂಗಾಡು ಹೆದ್ದಾರಿಯ ಉಕ್ಕುಡ-ಅಪ್ಪೆರಿಪಾದೆ ಮಧ್ಯೆ ಟಿಪ್ಪರ್, ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ದ್ವಿಚಕ್ರ ಸವಾರ ಗಾಯಗೊಂಡಿದ್ದು, ಗಾಯಾಳುವನ್ನು ದ್ವಿಚಕ್ರ ವಾಹನ ಸವಾರ ಮುಳಿಯ ತಾಳಿಪಡ್ಪು ನಿವಾಸಿ 43 ವರ್ಷದ ರತ್ನಾಕರ ಶೆಟ್ಟಿ ಎಂದು ತಿಳಿದುಬಂದಿದೆ. ಪೆರ್ಲ ಕಡೆಯಿಂದ ವಿಟ್ಲಕ್ಕೆ ಹೋಗುತ್ತಿದ್ದ ಬೆಲೆನೊ ಕಾರೊಂದು ಟಿಪ್ಪರ್ ಅನ್ನು ಹಿಂದಿಕ್ಕಲು ಹೋದ ಸಂದರ್ಭದಲ್ಲಿ ಮುಂಭಾಗದಿಂದ ರತ್ನಾಕರ ಶೆಟ್ಟಿ ಅವರು ದ್ವಿಚಕ್ರ ಅವರು ದ್ವಿಚಕ್ರವಾಹನ...
ಬಂಟ್ವಾಳ

ಕೊರೊನಾ ಭೀತಿ ಇರುವ ಕಾರಣ ಶ್ರೀ ಕ್ಷೇತ್ರ ಪೊಳಲಿ ಜಾತ್ರೆ ಸಾಂಕೇತಿಕವಾಗಿ ಆಚರಿಸಲು ನಿರ್ಧಾರ-ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಮಾರ್ಚ್ 14ರಿಂದ ಏಪ್ರಿಲ್ 12 ರವರೆಗಿನ ಜಾತ್ರಾ ಮಹೋತ್ಸವ ಇರಲಿದ್ದು, ಕೊರೊನಾ ಭೀತಿ ಇರುವ ಕಾರಣ ದ.ಕ. ಜಿಲ್ಲಾಧಿಕಾರಿ ಡಾ.ಬಿ ರಾಜೇಂದ್ರ ಅವರ ಆದೇಶಕ್ಕೆ ಅನುಗುಣವಾಗಿ ಈ ಬಾರಿ ಶ್ರೀ ಕ್ಷೇತ್ರ ಪೊಳಲಿಯ ಜಾತ್ರೆಯನ್ನು ಸಾಂಕೇತಿಕವಾಗಿ ಆಚರಿಸಿದರೆ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಭಕ್ತರು ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ದೇಗುಲದ ಜಾಗದಲ್ಲಿ ಸಂತೆ/ಅಂಗಡಿ ಇಡಲು ಅವಕಾಶವಿರುವುದಿಲ್ಲ ಎಂದು ಶ್ರೀ...
ಬಂಟ್ವಾಳ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮವೊಂದರಲ್ಲೇ 33 ಮನೆಗಳನ್ನು ಜಖಂಗೊಳಿಸಿದ ಬಿರುಗಾಳಿ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಹಲವೆಡೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಸಿಡಿಲಿನ ಆರ್ಭಟದ ಜೊತೆಗೆ ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿ.ಮೂಡ ಗ್ರಾಮದ ಕಾಮಾಜೆ, ಮೈರಾನ್ ಪಾದೆ, ದೈಪಲ ಎಂಬಲ್ಲಿ ರಾತ್ರಿ ಬೀಸಿದ ಭಾರಿ ಗಾಳಿ, ಮಳೆಗೆ ಒಟ್ಟು 33 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 2 ಮನೆಗಳಿಗೆ ತೀವ್ರ ಹಾನಿಯುಂಟಾಗಿದ್ದು, ಸುಮಾರು 3,53,000 ರೂ ನಷ್ಟವುಂಟಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ. ಬಂಟ್ವಾಳ...
1 126 127 128 129 130 147
Page 128 of 147