Sunday, November 24, 2024

ಬಂಟ್ವಾಳ

ಬಂಟ್ವಾಳ

ಬೆಂಗಳೂರಿನಿಂದ ಪಾರ್ಸೆಲ್ ತರುತ್ತಿದ್ದ ಲಾರಿಯಿಂದ ಟಿವಿ, ಏರ್ ಕೂಲರ್ ಕಳವು ಮಾಡಿದ ಚಾಲಕ-ಕಹಳೆ ನ್ಯೂಸ್

ಬಂಟ್ವಾಳ : ಮಾರ್ಚ್ 25ರಂದು ಬೆಂಗಳೂರಿನಿಂದ ಪಾರ್ಸೆಲ್ ತರುತ್ತಿದ್ದ ಲಾರಿಯನ್ನು ಅದರ ಚಾಲಕ ಮೆಲ್ಕಾರ್ ನಲ್ಲಿ ನಿಲ್ಲಿಸಿ ಅದರಲ್ಲಿ 96 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿದ ಘಟನೆ ನಡೆದಿದೆ. ಈ ಕುರಿತು ಲಾರಿ ಮಾಲಕ ಬೆಂಗಳೂರು ಮೂಲದ ಹೆಚ್. ಆರ್. ಲೋಕೇಶ್ ಅವರು ದೂರು ನೀಡಿದ್ದು, ಲಾರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪಾರ್ಸೆಲ್ ಸಾಗಿಸಲಾಗುತ್ತಿತ್ತು. ಲಾರಿ ಚಾಲಕ ತುಮಕೂರು ಮೂಲದ ಮಂಜುನಾಥ್ ಮೆಲ್ಕಾರ್ ನಲ್ಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ. ಲಾರಿಯನ್ನು...
ಬಂಟ್ವಾಳ

ಕಾಸರಗೋಡಿನ ಮಾಜಿ ಸಂಸದರು ದಿ. ಐ.ರಾಮ ರೈಯವರ ಇಚ್ಲಂಪ್ಪಾಡಿಯ ಮನೆಗೆ ಭೇಟಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್-ಕಹಳೆ ನ್ಯೂಸ್

ಬಂಟ್ವಾಳ : ಕಾಸರಗೋಡಿನ ಮಾಜಿ ಸಂಸದರು ದಿ. ಐ.ರಾಮ ರೈಯವರ ಇಚ್ಲಂಪ್ಪಾಡಿಯ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಮತ್ತು ದಿ.ರಾಮ ರೈಯವರ ಧರ್ಮಪತ್ನಿ ಉಮಾವತಿ ರೈಯವರ ಆಶೀರ್ವಾದ ಪಡೆದು ಮಂಜೇಶ್ವರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಬೆಂಬಲಿಸುವಂತೆ ಮನವಿ ಮಾಡಿದರು....
ಬಂಟ್ವಾಳ

ಕಕ್ಯಪದವುನಲ್ಲಿ ನಡೆದ ಕಂಬಳದಲ್ಲಿ ಮತ್ತೆ ದಾಖಲೆ ಬರೆದ ಮಿಜಾರು ಶ್ರೀನಿವಾಸಗೌಡ-ಕಹಳೆ ನ್ಯೂಸ್

ಬಂಟ್ವಾಳ : ಭಾನುವಾರ ಕಕ್ಯಪದವುನಲ್ಲಿ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಮಿಜಾರು ಅವರು ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳದಲ್ಲಿ 8.89 ಸೆಕೆಂಡ್ ಗಳಲ್ಲಿ 100 ಮೀಟರ್ ಕ್ರಮಿಸಿ ಅವರು ದಾಖಲೆ ಬರೆದಿದ್ದರು. ಮತ್ತು ಕಕ್ಯಪದವು ಮೈರಾ ಸತ್ಯ - ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ತಮ್ಮ ದಾಖಲೆಯನ್ನು ಭಾನುವಾರ...
ಬಂಟ್ವಾಳ

ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನ ಕಾಪುಮಜಲು ವಿಟ್ಲ ಪಡ್ನೂರು, ಕೊಡಂಗಾಯಿ ಇಲ್ಲಿ ಮಾರ್ಚ್ 27 ರಿಂದ ಮಾರ್ಚ್ 31 ವರೆಗೆ ಕಾಲಾವಧಿ ಜಾತ್ರೆ-ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನ ಕಾಪುಮಜಲು ವಿಟ್ಲ ಪಡ್ನೂರು, ಕೊಡಂಗಾಯಿ ಇಲ್ಲಿ ಮಾರ್ಚ್ 27 ರಿಂದ ಮಾರ್ಚ್ 31 ವರೆಗೆ ಕಾಲಾವಧಿ ಜಾತ್ರೆ ನಡೆಯಲಿದೆ. ಮಾರ್ಚ್ 27 ಬೆಳಿಗ್ಗೆ ಗಣಹೋಮ, ತಂಬಿಲ ಮತ್ತು ರಾತ್ರಿ ಧ್ವಜಾರೋಹಣ ನಡೆಯಲಿದ್ದು, ಮಾರ್ಚ್ 28 ರಂದು ಸಂಜೆ 7ಗಂಟೆಯಿಂದ ಶ್ರೀ ಮಲರಾಯ ಭಜನಾ ಮಂಡಳಿ(ರಿ) ಕಾಪುಮಜಲು ಇವರಿಂದ ವಾರ್ಷಿಕ ಭಜನೆ ಮತ್ತು ಆಹ್ವಾನಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ಹಾಗೂ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಬೆಳ್ಳಂ ಬೆಳಗ್ಗೆ ಕರ್ತವ್ಯದಲ್ಲಿದ್ದ ವಿಟ್ಲ ಎಸ್ಐ ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು..! – ಕಹಳೆ ನ್ಯೂಸ್

ವಿಟ್ಲ: ಕರ್ತವ್ಯದಲ್ಲಿದ್ದ ಎಸ್.ಐ.ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ ದುಷ್ಕರ್ಮಿ ಪೋಲೀಸರ ಅತಿಥಿಯಾದ ಘಟನೆ ವಿಟ್ಲ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಇಂದು ಮುಂಜಾನೆ ವೇಳೆ ನಡೆದಿದೆ. ವಿಟ್ಲ ಎಸ್ ಐ ವಿನೋದ್ ರೆಡ್ಡಿ ಮೇಲೆ ದುಷ್ಕರ್ಮಿಯಿಂದ ಗುಂಡಿನ ದಾಳಿ ನಡೆದಿದೆ. ವಿಟ್ಲ ಸಮೀಪದ ಸಾಲೆತ್ತೂರು ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ವಿಟ್ಲ ಎಸ್ಐ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ...
ಬಂಟ್ವಾಳ

ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖ್ದೇವ್ ಬಲಿದಾನದ ಸ್ಮರಣಾರ್ಥ, ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಸಾರ್ವಜನಿಕ ಸಭೆ-ಕಹಳೆ ನ್ಯೂಸ್

ಬಂಟ್ವಾಳ : ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖ್ದೇವ್ ಬಲಿದಾನದ ಸ್ಮರಣಾರ್ಥ ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಕೈಕಂಬದಿಂದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಸ್ಪರ್ಶ ಕಲಾಮಂದಿರದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ವಕೀಲ ಹಾಗೂ ಹಿರಿಯ ಆರೆಸ್ಸೆಸ್ ಮುಖಂಡ ಪ್ರಸಾದ್ಕುಮಾರ್ ರೈ ಮಾತನಾಡಿ, ಪ್ರಾಣವನ್ನು ಅರ್ಪಿಸಿದ ಭಗತ್ ಸಿಂಗ್ ರಕ್ತದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇತ್ತು ಎಂದರು. ಮಂಗಳೂರು ಕಾಲೇಜು...
ಬಂಟ್ವಾಳ

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದ ಶಾಸಕ ರಾಜೇಶ್ ನಾಯ್ಕ್-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕೋವಿಡ್ ಲಸಿಕೆ ಪಡೆದುಕೊಂಡರು. ಲಸಿಕೆ ಪಡೆದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕರು, ತಾನು ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಖಾಯಿಲೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ಬಂಟ್ವಾಳದ ಜನತೆ ಕೋವಿಡ್ ಲಸಿಕೆ ಪಡೆಯುವಂತೆ ಮನವಿ ಮಾಡಿದರು. ಅಲ್ಲದೇ ಇದರಿಂದ ತಮಗೆ ಹಾಗೂ ಸಮಾಜಕ್ಕೆ ಒಳತಾಗುತ್ತದೆ. ಕೊರೊನಾದ...
ಬಂಟ್ವಾಳ

ಪಂಜಿಕಲ್ಲು ಬಾಲೇಶ್ವರ ಗರಡಿ ಬಳಿ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿಕರ ಜಾಗೃತಿ ಸಮಾವೇಶ-ಕಹಳೆ ನ್ಯೂಸ್

ಬಂಟ್ವಾಳ : ಉಚಿತ ಅಕ್ಕಿ ವಿತರಣೆಗೆ ಬದಲಾಗಿ ಶಾಶ್ವತ ಆಹಾರ ಭದ್ರತೆ ನೀಡುವ ಭತ್ತದ ಬೇಸಾಯಕ್ಕೆ ಯುವಜನತೆ ಸೆಳೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪ್ರಶಸ್ತಿ ವಿಜೇತ ಭತ್ತದ ತಳಿ ಸಂರಕ್ಷಕ ಬಿ.ಕೆ.ದೇವರಾವ್ ಹೇಳಿದ್ದಾರೆ. ಇಲ್ಲಿನ ಪಂಜಿಕಲ್ಲು ಬಾಲೇಶ್ವರ ಗರಡಿ ಬಳಿ ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಕೈಕಂಬ ದಿಶಾ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿಕರ ಜಾಗೃತಿ ಸಮಾವೇಶ ಉದ್ಘಾಟಿಸಿ...
1 127 128 129 130 131 147
Page 129 of 147