ಕಲ್ಲಡ್ಕ ನರಹರಿ ನಗರ ಜಗದೀಶ್ ಸುವರ್ಣ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 18 ರ ಕಾರ್ಯಕ್ರಮ : ಜ್ಞಾನದ ಬೆಳಕು ಹರಿಸಿದ ಮಹಾನ್ ಸಂತ ನಾರಾಯಣಗುರುಗಳು : ಹರೀಶ್ ಎಸ್ ಕೋಟ್ಯಾನ್- ಕಹಳೆ ನ್ಯೂಸ್
ಕಲ್ಲಡ್ಕ : ಜ್ಞಾನದ ಬೆಳಕು ಮನವನ್ನು ಬೆಳಗಿದರೆ, ದೀಪದ ಬೆಳಕು ಮನೆಯನ್ನು ಬೆಳಗುವುದು, ಶಿಕ್ಷಣದಿಂದ ಮಾತ್ರ ಬಡತನ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಸಾಧ್ಯ ಎಂದು ಪ್ರತಿಪಾದಿಸಿದ ನಾರಾಯಣಗುರುಗಳು ಜ್ಞಾನದ ಬೆಳಕು ನೀಡಿದ ಮಹಾನ್ ಸಂತ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಹರೀಶ್ ಎಸ್ ಕೋಟ್ಯಾನ್ ತಿಳಿಸಿದರು. ಅವರು ಬಂಟ್ವಾಳ ತಾಲೂಕಿನ ಕಲ್ಲಡ್ಕ ನರಹರಿ ನಗರ ಜಗದೀಶ್ ಸುವರ್ಣ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 18 ರ...