ಬಂಟ್ವಾಳ : ಇಲ್ಲಿನ ಬೋಳಂತೂರು ನಿವಾಸಿ, ಕಾಂಗ್ರೆಸ್ ಮುಖಂಡ ಬೋಳಂತೂರು ಚಂದ್ರಹಾಸ ಶೆಟ್ಟಿ (66) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಬೀಡಿ ಉದ್ಯಮಿಯಾಗಿ, ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಬಿ.ಸಿ.ರೋಡು ಪೆÇಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸಮಾಜಮುಖಿ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದ್ದರು....
ಬಂಟ್ವಾಳ : ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ರೂ 2 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಇಂದು ದೇವಿಗೆ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಗಂಟೆ 8.16ರ ಶುಭ ಸುಮುಹೂರ್ತ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಗಣಪತಿ, ಶ್ರೀ ಶಾಸ್ತಾರ, ಪರಿವಾರ ದೈವ,...
ಬಂಟ್ವಾಳ : ಕಾಂಗ್ರೇಸ್ ಮುಖಂಡ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಬೋಳಂತೂರು ಅವರು ಇಂದು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿಯೇ ಇದ್ದು, ಇಂದು ಅವರು ಮೃತರಾಗಿದ್ದಾರೆ. ಇವರು ಸಾಮಾಜಿಕವಾಗಿ ರಾಜಕೀಯ ವಾಗಿ, ಶೈಕ್ಷಣಿಕವಾಗಿ ಜೊತೆಗೆ ಧಾರ್ಮಿಕವಾಗಿ ಹೆಚ್ಚುಗುರುತಿಸಿ ಕೊಂಡಿದ್ದರು. ಬಿಸಿರೋಡಿನ ಪೋಲೀಸ್ ಲೇನ್‍ನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದ ನಿರ್ಮಾಣ ಹಾಗೂ ಬ್ರಹ್ಮ ಕಲಶದ ಉಸ್ತುವಾರಿ ವಹಿಸಿದ್ದ ಇವರು, ಬೋಳಂತೂರು ಕೊಡಿಯಡ್ತಾಯಿ...
ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಮೇಲ್ದರ್ಜೆಗೊಂಡ ಬಳಿಕ ಪ್ರಥಮ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಚೆಲುವರಾಜು ಅವರು ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಕೋಮುಸೂಕ್ಮ ಹಾಗೂ ಜನಸಂಖ್ಯೆ ಯ ಆಧಾರ ದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ನ್ನು ಪೊಲೀಸ್ ಇನ್ಸ್ ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೇರಿಸುವಂತೆ ಹಲವಾರು ವರ್ಷಗಳಿಂದ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದರಂತೆ ಈ ಬಾರಿ ರಾಜ್ಯದಲ್ಲಿ ಒಟ್ಟು 86...
ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಉರುವಾಲು ಎಂಬಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ಪ್ರಕರಣದಡಿ ಆರೋಪಿಯನ್ನ ಬಂಧಿಸಲಾಗಿದೆ. ಸಮದ್ ನೆಕ್ಕಿಲ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಉರುವಾಲು ಗ್ರಾಮದ ಕುಪ್ಪೆಟ್ಟಿಯ ನೆಕ್ಕಿಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಬಾಲಕಿಯು ತನ್ನ ತಾಯಿ, ಅಜ್ಜಿ, ತಮ್ಮನ ಜೊತೆ ವಾಸ್ತವ್ಯವಿದ್ದು, ಕಳೆದ 3 ತಿಂಗಳ ಹಿಂದೆ ಬಾಡಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಸಮದ್...
ಬಂಟ್ವಾಳ : ಕುಕ್ಕಿಪಾಡಿ ಒಕ್ಕೂಟ ಅಧ್ಯಕ್ಷೆ ಹಾಗೂ ಕುಕ್ಕಿಪಾಡಿ ಪಂಚಾಯತ್ ನೂತನ ಅಧ್ಯಕ್ಷೆ ಸುಜಾತ ರಾಜು ಪೂಜಾರಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಸಿದ್ಧಕಟ್ಟೆ ವಲಯದ 2021-2022ರ ಸಂಪೂರ್ಣ ಸುರಕ್ಷಾ ವಿಮಾ ನೋಂದಣಿ ಅಭಿಯಾನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಧರ್ಮಸ್ಥಳ ಕ್ಷೇತ್ರದ ಜನಹಿತ ಕಾರ್ಯಕ್ರಮಗಳಲ್ಲಿ ಒಂದಾದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮವು ಎಲ್ಲರ ಆರೋಗ್ಯಕ್ಕೂ ರಕ್ಷಾ ಕಚವವಾಗಲಿ ಎಂದು ಶುಭ ಹಾರೈಸಿದರು. ವಲಯ ಮೇಲ್ವಿಚಾರಕಿ ಶ್ರೀಮತಿ ಹರಿಣಾಕ್ಷಿ ರೈ...