Sunday, November 24, 2024

ಬಂಟ್ವಾಳ

ಬಂಟ್ವಾಳ

ಪುರಸಭೆಗೆ ಸಂಬಂಧಿಸಿ ತ್ಯಾಜ್ಯ ಸಂಸ್ಕರಣೆಗೆ ನೂತನ ಕಂಪಾಕ್ಟ್ ವಾಹನವನ್ನು ಸೇವೆಗೆ ಅರ್ಪಿಸಿದ; ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್-ಕಹಳೆ ನ್ಯೂಸ್

ಬಂಟ್ವಾಳ : ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಅವರು ಬಂಟ್ವಾಳ ಇಲ್ಲಿನ ಪುರಸಭೆಗೆ ಸಂಬಂಧಿಸಿ ತ್ಯಾಜ್ಯ ಸಂಸ್ಕರಣೆಗೆ ನೂತನ ಕಂಪಾಕ್ಟ್ ವಾಹನವನ್ನು ಸೇವೆಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕೆ ಜೆಸಿಂತಾ ಡಿ’ಸೋಜ, ಸದಸ್ಯರಾದ ರಾಮಕೃಷ್ಣ ಆಳ್ವ, ಗಂಗಾಧರ, ಲೋಲಾಕ್ಷ ಶೆಟ್ಟಿ, ಜನಾರ್ಧನ ಚೆಂಡ್ತಿಮಾರ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮೂನಿಶ್ ಅಲಿ, ಹಸೈನಾರ್ ತಾಳಿಪಡ್ಪು, ಇದ್ರೀಸ್ ಪಿ ಜೆ, ಶಂಶಾದ್ ಗೂಡಿನಬಳಿ, ಆರೋಗ್ಯ ವಿಭಾಗಾಧಿಕಾರಿ ರವಿಕೃಷ್ಣ, ಮ್ಯಾನೇಜರ್ ಲೀಲಾವತಿ, ಇಂಜಿನಿಯರ್ ಡೊಮೆನಿಕ್...
ಬಂಟ್ವಾಳ

ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಕೃಷಿ ಉತ್ಸವ ಹಾಗೂ ಕರಾವಳಿ ಕಲೋತ್ಸವದ ಪ್ರಯುಕ್ತ ಭೂಮಿ ಪೂಜೆ-ಕಹಳೆ ನ್ಯೂಸ್

ಬಂಟ್ವಾಳ : ಚಿಣ್ಣರಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ವತಿಯಿಂದ ಫೆಬ್ರವರಿ 11 ರಿಂದ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಕೃಷಿ ಉತ್ಸವ ಹಾಗೂ ಕರಾವಳಿ ಕಲೋತ್ಸವ ಕಾರ್ಯಕ್ರಮ ನಡೆಯಲಿದೆ. ಇದರ ಭೂಮಿ ಪೂಜೆ ಕಾರ್ಯಕ್ರಮ ಗುರುವಾರ ನಡೆಯಿತು. ಕೃಷಿ ಉತ್ಸವ ಹಾಗೂ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಸ್ಥಳದಾನಿ ಅಜಿತ್ ಕುಮಾರ್ ಬರಿಮಾರ್ ಚಿಣ್ಣರ ಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ, ಮೋಹನಾದಾಸ್...
ಬಂಟ್ವಾಳ

ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವೃತ್ತಿ ಸಾಹಿತ್ಯ ಮಾರ್ಗದರ್ಶನ ಸಭೆ-ಕಹಳೆ ನ್ಯೂಸ್

ಬಂಟ್ವಾಳ : ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವೃತ್ತಿ ಸಾಹಿತ್ಯ ಮಾರ್ಗದರ್ಶನ ಸಭೆ ನಡೆಯಲಿದೆ. ಈ ಕಾರ್ಯಕ್ರಮ ಮಂಗಳೂರು ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಆಶ್ರಯದಲ್ಲಿ ನಡೆಯಲಿದೆ ಎಂದು ಪ್ರಿನ್ಸಿಪಾಲ್ ಸೌಮ್ಯ ತಿಳಿಸಿದ್ದಾರೆ....
ಬಂಟ್ವಾಳ

ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡ್ ಆಶ್ರಯದಲ್ಲಿ ನಾಳೆ ಸಂಜೆ 12ನೇ ವರ್ಷದ ಯಕ್ಷಗಾನ; ಹನುಮಗಿರಿ ಮೇಳದಿಂದ ಪ್ರದರ್ಶನ-ಕಹಳೆ ನ್ಯೂಸ್

ಬಂಟ್ವಾಳ : ಯಕ್ಷಮಿತ್ರರು ಕೈಕಂಬ ಬಿ.ಸಿ.ರೋಡ್ ಆಶ್ರಯದಲ್ಲಿ 12ನೇ ವರ್ಷದ ಯಕ್ಷಗಾನ ಕಾರ್ಯಕ್ರಮ ನಾಳೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯ ಹೊರಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಹನುಮಗಿರಿ ಮೇಳದಿಂದ ಶ್ರೀಕೃಷ್ಣ ತುಲಾಭಾರ, ಶೂರ್ಪನಖಾ ವಿವಾಹ, ಅಹಿರಾವಣ, ಮಹಿರಾವಣ ಎಂಬ ಕಥಾಭಾಗ ಪ್ರದರ್ಶನ ಇರಲಿದೆ. ಹಾಗೇ ಹಿರಿಯ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರನ್ನು ಉದ್ಯಮಿ ಮನೋಹರ ಶೆಟ್ಟಿ...
ಬಂಟ್ವಾಳ

ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿ ಇದೇ 30 ರಂದು ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ 'ವೀರ-ವಿಕ್ರಮ' ಜೋಡುಕರೆ ಬಯಲು ಕಂಬಳ ಇದೇ 30ರಂದು ಶನಿವಾರ ನಡೆಯಲಿದ್ದು, ಆ ಮೂಲಕ ಜಿಲ್ಲೆಯ ಪ್ರಥಮ ಕಂಬಳಕ್ಕೆ ಭಾರೀ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಸ್ಥಳೀಯ ಎಲಿಯನಡುಗೋಡು, ಆರಂಬೋಡಿ ಮತ್ತಿತರ ಗ್ರಾಮಸ್ಥರು ಮತ್ತು ಕಂಬಳಾಸಕ್ತರು ಶ್ರಮದಾನ ಮೂಲಕ ಕಂಬಳ ಕರೆ ದುರಸ್ತಿಗೊಳಿಸಿದ್ದಾರೆ. ಇಲ್ಲಿನ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಈ ಕಂಬಳ ಕೂಟಕ್ಕೆ ಸ್ಥಳೀಯ...
ಬಂಟ್ವಾಳ

ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕøತಿಕ ಸಂಘದ ಉದ್ಘಾಟನೆ-ಕಹಳೆ ನ್ಯೂಸ್

ಬಂಟ್ವಾಳ : ಜನವರಿ 26 ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ಖ್ಯಾತ ಯಕ್ಷಗಾನ ಹಾಸ್ಯಕಲಾವಿದ ದಿನೇಶ್ ಕೊಡಪದವು ಇವರು ಉದ್ಘಾಟಿಸಿದರು. ನಿಜವಾದ ಸಂಸ್ಕೃತಿ, ಸಾಂಸ್ಕೃತಿಕ ವೈಭವವನ್ನು ನೋಡಲು ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರಬೇಕು ಎಂದವರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ್ ಇರಾ, ಶ್ರೀಮತಿ ಲಕ್ಷ್ಮಿ ರಘುರಾಜ್ ಹಾಗೂ ಪ್ರಾಚಾರ್ಯರಾದ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಇವರು ಉಪಸ್ಥಿತರಿದ್ದರು. ಇದಾದ ಬಳಿಕ...
ಬಂಟ್ವಾಳ

ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣಪತ್ರ ಬಿಡುಗಡೆ, ಭಕ್ತಿ ಜೊತೆಗೆ ಸಂಸ್ಕಾರ ಅಗತ್ಯ: ಮಾಣಿಲಶ್ರೀ-ಕಹಳೆ ನ್ಯೂಸ್

ಬಂಟ್ವಾಳ: ವೇಣೂರು ಅಜಿಲ ಸೀಮೆ ಮಾಗಣೆಯ ಏಳು ಗ್ರಾಮದ ಭಕ್ತರು ಒಟ್ಟಾಗಿ ಭಕ್ತಿ ಮತ್ತು ಪ್ರೀತಿಯಿಂದ ಸಂಘಟಿತರಾಗಿ ಧಾರ್ಮಿಕತೆ ಜೊತೆಗೆ ಸಮಸ್ತ ಭಕ್ತರಿಗೆ ಸಂಸ್ಕಾರ ನೀಡಲು ಶ್ರಮಿಸಬೇಕು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಾನುವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಮಂತ್ರಣಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಸಂಕುಚಿತ ಮನೋಭಾವ ತೊರೆದು ಆದಾಯ ಸದುಪಯೋಗಪಡಿಸಬೇಕು ಎಂದರು. ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ್...
ಬಂಟ್ವಾಳ

ಬಿ.ಸಿ.ರೋಡಿನಲ್ಲಿ ಬಲಾತ್ಕಾರವಾಗಿ ಸಾಲ ವಸೂಲಿ ಮಾಡುವವರ ವಿರುದ್ಧ ಪ್ರತಿಭಟನೆ –ಕಹಳೆ ನ್ಯೂಸ್

ಬಂಟ್ವಾಳ : ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ, ಸಿ.ಐ.ಟಿ.ಯು, ಜನವಾದಿ ಮಹಿಳಾ ಸಂಘಟನೆ ವತಿಯಿಂದ ಖಾಸಗಿ ಫೈನಾನ್ಸ್‍ಗಳು ಬಲಾತ್ಕಾರವಾಗಿ ಸಾಲ ವಸೂಲಿ ಹಾಗೂ ಕಿರುಕುಳ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಪ್ರಮುಖರಾದ ರಾಮಣ್ಣ ವಿಟ್ಲ, ಶೋಭಾ ಕೊಯ್ಲ, ಜಯಂತಿ ಶೆಟ್ಟಿ, ಶೇಖರ ಲಾಯ್ಲ, ಮಹಮ್ಮದ್ ಇಕ್ಬಾಲ್ ಹಳೆಮನೆ, ಮಹಮ್ಮದ್ ಅಲ್ತಾಫ್ ತುಂಬೆ ಇದ್ದರು....
1 133 134 135 136 137 147
Page 135 of 147