Saturday, November 23, 2024

ಬಂಟ್ವಾಳ

ಬಂಟ್ವಾಳ

ಪೊಳಲಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಡಿಸೆಂಬರ್ 28 ರಿಂದ ಫೆಬ್ರವರಿ 17ರವರೆಗೆ ದೇವರ ದರ್ಶನ ಇಲ್ಲ- ಕಹಳೆ ನ್ಯೂಸ್

ಬಂಟ್ವಾಳ: ಡಿಸೆಂಬರ್ 28 ರಿಂದ ಫೆಬ್ರವರಿ 17ರವರೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಅಂಗವಾಗಿ ದೃಡಕಲಶ ಆಗಬೇಕಿರುವ ಕಾರಣದಿಂದ ಸಾರ್ವಜನಿಕರಿಗೆ ದೇವರ ದರ್ಶನ ಇರುವುದಿಲ್ಲ. ಕೊರೋನಾ ಹಿನ್ನೆಲೆ ಬ್ರಹ್ಮಕಲಶೋತ್ಸವ ನಡೆದ ಬಳಿಕ ಜೀರ್ಣೋದ್ಧಾರದ ನಂತರದ ಕಾರ್ಯಗಳು ಆಗಿರಲಿಲ್ಲ, ದೃಡಕಲಶ ಬಾಕಿ ಉಳಿದಿತ್ತು. ಹಾಗಾಗಿ ಪ್ರಸ್ತುತ ಸಾನಿಧ್ಯದಲ್ಲಿ ಸಣ್ಣ ಪುಟ್ಟ ಜೀರ್ಣೋದ್ಧಾರದ ಕೆಲಸ ನಡೆಸಿ, ದೃಡಕಲಶ ಮಾಡಬೇಕಾಗಿದೆ.ಹೀಗಾಗಿ ಈ‌‌ ಸಂದರ್ಭದಲ್ಲಿ ದೇವರ ದರ್ಶನ ಇರುವುದಿಲ್ಲ.ಈ ಅವಧಿಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೀಮೆಯ...
ಬಂಟ್ವಾಳ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರ ಸಂಘಟನೆಗಳಿಂದ ಕೊರಗಜ್ಜ ಕ್ಷೇತ್ರದಲ್ಲಿ ಶ್ರಮದಾನ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ‌ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಇದೇ 15 ರಂದು ಚಂಡಿಕಾಯಾಗ ನಡೆಯಲಿರುವ ಕಾರಣದಿಂದ ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರ ಸಂಘಟನೆಯ ಸದಸ್ಯರು ಭಾನುವಾರ ಶ್ರಮದಾನ ನಡೆಸಿದರು. ಈ ಶ್ರಮದಾನದಲ್ಲಿ ಕ್ಷೇತ್ರದ ಧರ್ಮದರ್ಶಿ ಲೋಕೇಶ್ , ಯೋಜನೆಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಹಾಗೂ ಮಾಜಿ ವಲಯಾಧ್ಯಕ್ಷ ಚಂದಪ್ಪಪೂಜಾರಿ ಸೇರಿದಂತೆ ಅನೇಕರು ಇದ್ದರು....
ಬಂಟ್ವಾಳ

ಫರಂಗಿಪೇಟೆಯಲ್ಲಿ ಭೀಕರ ಅಪಘಾತ; ವಿಟ್ಲದ ವ್ಯಕ್ತಿ ಕಾಂತಡ್ಕ ಶಂಕರನಾರಾಯಣ ಭಟ್ ಸಾವು- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ವಿಡ್ ಆಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಗುರುವಾರ ಇಳಿಸಂಜೆ ನಡೆದಿದೆ. ಇವರು ವಿಟ್ಲದ ಜನಪ್ರಿಯ ಬಾಣಸಿಗರಾದ 55 ವರ್ಷದ ಕಾಂತಡ್ಕ ಶಂಕರನಾರಾಯಣ ಭಟ್ ಎಂದು ತಿಳಿದು ಬಂದಿದೆ.ಈ ಘಟನೆ ಮಂಗಳೂರು ಕಡೆಯಿಂದ ಬೈಕ್ ನಲ್ಲಿ ವಿಟ್ಲ ಕಡೆಗೆ ಆಗಮಿಸುತ್ತಿದ್ದ ಅವರ ಬೈಕ್ ಫರಂಗಿಪೇಟೆಯ ಮೀನು ಮಾರುಕಟ್ಟೆಯ ಬಳಿ ಪಲ್ಟಿಯಾಗಿ‌ ಅಪಘಾತ ಸಂಭವಿಸಿದ್ದು, ಸಾವನ್ನಪ್ಪಿದ್ದಾರೆ. ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ...
ಬಂಟ್ವಾಳ

ಮಹಿಳೆಯರ ಮತ್ತು ಮಕ್ಕಳ ಕುತ್ತಿಗೆಯಿಂದ ಚಿನ್ನಾಭರಣ ಕಳವು ಮಾಡುವ ಮಹಿಳೆಯ ಬಂಧನ-ಕಹಳೆ ನ್ಯೂಸ್

ಬಂಟ್ವಾಳ: ಮದುವೆ ಹಾಲ್ ಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಕುತ್ತಿಗೆಯಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಮಹಿಳೆಯೋರ್ವಳನ್ನು ಬಂಟ್ವಾಳ ನಗರ ಠಾಣಾ ಪೋಲಿಸ್ ರು ಬಂಧಿಸಿದ್ದಾರೆ. ಆರೋಪಿ ಮುಡಿಪು ನಿವಾಸಿ ಸಿದ್ದೀಕ್ ಎಂಬವರ ಪತ್ನಿ ಫಾತಿಮಾ ಸಹಿನಾಜ್ ಎಂದು ತಿಳಿದು ಬಂದಿದೆ. ಇವರು ಮದುವೆ ಸಮಾರಂಭಗಳಲ್ಲಿ ಮದುವೆ ಹಾಲ್ ಗಳಲ್ಲಿ ಬ್ಯಾಗ್ ನಿಂದ ಮತ್ತು ಮಕ್ಕಳ, ಮಹಿಳೆಯರ, ಕುತ್ತಿಗೆಗೆ ಕೈ ಹಾಕಿ ಬಂಗಾರಗಳನ್ನು ಕಳವು ಮಾಡುತ್ತಿದ್ದರು. ಇವರು ಮದುವೆ ಹಾಲ್ ಗಳಲ್ಲಿರುವ...
ಬಂಟ್ವಾಳ

ಬಿಸಿರೋಡಿನ ಹೆಸರಾಂತ ಮೆಡಿಕಲ್ ಮತ್ತು ದಿನಸಿ ಅಂಗಡಿಯಲ್ಲಿ ಕಳ್ಳತನ- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಸ್ಟೇಷನ್ ನ ಕೂಗಳತೆಯ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಪೇಟೆಯ ಮಧ್ಯ ಭಾಗದಲ್ಲಿ ಹಲವಾರು ವರ್ಷಗಳಿಂದ ಜನರ ಸೇವೆಯಲ್ಲಿರುವ ಹೆಸರಾಂತ ಗಣೇಶ್ ಮೆಡಿಕಲ್ ಸೆಂಟರ್ ಗೆ ಮತ್ತು ಇಸುಬು ಬ್ಯಾರಿಯವರ ಮಗ ಯೂನಸ್ ಎಂಬವರ ದಿನಸಿ ಅಂಗಡಿಯ ಶಟರ್ ನ ಒಳಗೆ ನುಗ್ಗಿ ಡ್ರವರ್ ನೊಳಗೆ ಇದ್ದ ನಗದು ಹಣವನ್ನು ದೋಚಿದ ಘಟನೆ ಬುಧವಾರ ನಡೆದಿದೆ. ಲಾಕ್ ಡೌನ್ ಬಳಿಕ ವ್ಯಾಪಾರ ಇಲ್ಲದೆ ಜನಜೀವನ...
ಬಂಟ್ವಾಳ

ಬಂಟ್ವಾಳದ ಪುರಸಭೆಯ ಆರೋಗ್ಯ ಅಧಿಕಾರಿ‌ ಪತ್ರ ಬರೆದು ಆತ್ಮಹತ್ಯೆಗೆ ಯತ್ನ – ಕಹಳೆ ನ್ಯೂಸ್

ಬಂಟ್ವಾಳ: ಸರಕಾರಿ ಉದ್ಯೋಗಿಯೋರ್ವರು ಗುರುವಾರ ಬೆಳಿಗ್ಗೆ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇವರು ಬಂಟ್ವಾಳ ಪುರಸಭೆಯ ಹೆಲ್ತ್ ಆಫೀಸರ್, ವಿಟ್ಲ ಪುಣಚ ನಿವಾಸಿ ರವಿಕೃಷ್ಣ ಎಂದು ತಿಳಿದುಬಂದಿದೆ. ಇವರು ಸುಳ್ಯ ಪುರಸಭೆಯಿಂದ ಕಳೆದ 5 ತಿಂಗಳ ಹಿಂದೆಯಷ್ಟೆ ಬಂಟ್ವಾಳ ಪುರಸಭೆಗೆ ಆಗಮಿಸಿದ್ರು. ಮೇಲಾಧಿಕಾರಿಗಳ ಮಾನಸಿಕ ಹಿಂಸೆಯನ್ನು ತಾಳಲಾರದೆ ರವಿಕೃಷ್ಣ ಅವರು ಬೇಸರಗೊಂಡು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಪತ್ರ ಬರೆದಿಟ್ಟು, ಮೇಲ್ಕಾರ್ ನಲ್ಲಿ ವಿಷ ಪದಾರ್ಥ...
ಬಂಟ್ವಾಳ

ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರಕಾರದ ಕ್ರಮ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ- ಕಹಳೆ ನ್ಯೂಸ್

ಬಂಟ್ವಾಳ:  ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರಕಾರದ ಕ್ರಮ ವಿರೋಧಿಸಿ , ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಅಲೋಪಥಿ ವೈದ್ಯರು ಶುಕ್ರವಾರ ಹೊರರೋಗಿ ವಿಭಾಗ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಇವರು ನೀಡಿರುವ ಪ್ರತಿಭಟನೆ ಕರೆಗೆ ಬಂಟ್ವಾಳ ಐಎಂಎ  ಘಟಕದ ವೈದ್ಯರುಗಳು ಕಪ್ಪು ಪಟ್ಟಿ ಧರಿಸಿ ಸೇವೆ ನೀಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಹಾಗೆಯೇ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಹೊರರೋಗಿಗಳ...
ಬಂಟ್ವಾಳ

ಬಂಟ್ವಾಳ ಪುರಸಭೆಯ ಮೊದಲ ಸಾಮಾನ್ಯ ಸಭೆ ; ಸಭೆಯಲ್ಲಿ ಕುಡಿಯುವ ನೀರಿನ ಸರಬರಾಜುನದ್ದೆ ಸಮಸ್ಯೆ- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳದಲ್ಲಿ ನೇತ್ರಾವತಿ ನದಿ ಪಕ್ಕದಲ್ಲಿಯೇ ಹರಿಯುತ್ತಿದ್ದರೂ, ಕುಡಿಯುವ ನೀರಿನ ಸಮಸ್ಯೆ ಆಗಾಗ ಕಾಡುತ್ತಿದೆ. ಹಾಗಾಗಿ ಇಡೀ ಬಂಟ್ವಾಳಕ್ಕೆ ಪೂರೈಕೆಯಾಗುವ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಮೊದಲ ಹಂತದ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆ, ಪೈಪ್ ಲೈನ್ ಸಮಸ್ಯೆ, ಆದರಿಂದಾಗಿ ರಸ್ತೆ ಹಾಳಾಗಿರುವುದು, ಹಳೇ ಲೈನ್ ನಲ್ಲೂ ನೀರು ಹರಿಯುತ್ತಿರುವುದು, ನೀರಿನ ಬಿಲ್ ನ ಗೊಂದಲ, ಕಳೆದ ಕೆಲ ತಿಂಗಳುಗಳಿಂದ ಪುರಸಭೆಯ ಚುನಾಯಿತ ಪ್ರತಿನಿಧಿಗಳನ್ನು ಕಾಡುತ್ತಿದ್ದ ಈ ಸಮಸ್ಯೆಗಳೆಲ್ಲಾ...
1 138 139 140 141 142 147
Page 140 of 147