Saturday, November 23, 2024

ಬಂಟ್ವಾಳ

ಬಂಟ್ವಾಳ

ಬಂಟ್ವಾಳ ಸೇರಿದಂತೆ ಹಲವೆಡೆ ಗುಡುಗು ಸಿಡಿಲಿನ‌ ಮಳೆ-ಕಹಳೆ ನ್ಯೂಸ್

ಬಂಟ್ವಾಳ: ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡಿನ ಭಾಗ ಬೆಂಗಳೂರು, ಮಂಗಳೂರಿನಲ್ಲಿ ಮಂಗಳವಾರ ಸಂಜೆ ವೇಳೆ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದ್ದು, ಇಂದು ಸಂಜೆ ಸುಮಾರು 6ರ ಬಳಿಕ ತಾಲೂಕಿನ ಹಲವೆಡೆ ಗಾಳಿ, ಗುಡುಗು, ಸಿಡಿಲಿನ ಸಹಿತ ಮಳೆಯಾಗಿದೆ. ಭಾರಿ ಸೆಖೆ ಇದ್ದ ಪ್ರದೇಶಗಳಲ್ಲಿ ಈಗ ತಂಪಾದ ವಾತಾವರಣ ಮೂಡಿದ್ದರೆ,ಒಂದೆಡೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವವರು , ಬಸ್ ನಿಲ್ದಾಣಗಳಲ್ಲಿ ಕಾಯುವವರು, ಸಮಸ್ಯೆ...
ಬಂಟ್ವಾಳ

ಗ್ರಾಪಂಚಾಯಿತಿ ಚುನಾವಣೆ: ಬಂಟ್ವಾಳ ತಾಲೂಕಿನ 13, ಮಂಗಳೂರಿನ 4 ಸೇರಿ ಒಟ್ಟು 17 ಮತದಾನ ಕೇಂದ್ರ ಶಿಫ್ಟ್-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ 13 ಮತ್ತು ಮಂಗಳೂರು ತಾಲೂಕಿನ 4 ಮತದಾನ ಕೇಂದ್ರಗಳು ಸೇರಿ ಒಟ್ಟು 17 ಮತದಾನ ಕೇಂದ್ರಗಳನ್ನು ಸ್ಥಳಾಂತರ ಮಾಡಲು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಗ್ರಾಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿದಾಗ, ಮತಗಟ್ಟೆ ಕೇಂದ್ರಗಳು ಶಿಥಿಲಗೊಂಡಿರುವುದು, ಮತದಾರರಿಗೆ ದೂರವಾದ ಜಾಗ ಹಾಗೂ ಕೆಲ ಖಾಸಗಿ ಶಾಲಾ ಕಟ್ಟಡಗಳ ರಿಪೇರಿ ಇರುವ ಕಾರಣ, ಮತದಾನಕ್ಕೆ ಯೋಗ್ಯವಲ್ಲದ ಕಾರಣ ಬದಲಾವಣೆ ಮಾಡುವುದು ಸೂಕ್ತವೆಂದು ಹೊಸ...
ಬಂಟ್ವಾಳ

ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ರೈತರ ಸಭೆ, ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲಕ್ಕೆ ನಿರ್ಧಾರ-ಕಹಳೆ ನ್ಯೂಸ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ಸಭೆ ಭಾನುವಾರ ಬಂಟ್ವಾಳದ ಪ್ರವಾಸಿ ಮಂದಿರದಲ್ಲಿ ಸಿ.ಐ.ಟಿ.ಯು. ನ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಅದ್ಯಕ್ಷತೆಯಲ್ಲಿ ನಡೆಯಿತು. ಡಿ.8ರಂದು ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿ ಕರೆ ನೀಡಿದ ಭಾರತ ಬಂದ್ ಗೆ ಸಂಪೂರ್ಣ ಬೆಂಬಲವಾಗಿ ಜಿಲ್ಲೆಯ ಒಕ್ಕೂಟವು ಡಿ.8ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂತೂರು ಸರ್ಕಲ್ ನಲ್ಲಿ ರಾಸ್ತಾ ರೋಕೊ ಚಳುವಳಿ...
ಬಂಟ್ವಾಳ

ಎಬಿವಿಪಿ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಬಿ.ಸಿ ರೋಡಿನ ಶಿಶುಮಂದಿರದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ನಗರ ಅಧ್ಯಕ್ಷ ಹಾಗೂ ಉಪನ್ಯಾಸಕ ಡಾ.ರಮಾನಂದ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಂಬೇಡ್ಕರ್ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಮತ್ತು ಸಮಾಜದ ತೊಡಕುಗಳ ನಡುವೆ ಅದಮ್ಯ ಚೇತನವಾಗಿ ಬೆಳೆದು ಬಂದ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುಣ್ಯಸ್ಮರಣೆಯನ್ನು,...
ಬಂಟ್ವಾಳ

ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ ಸ್ವಾರಕ ಹುಟ್ಟೂರಲ್ಲಿ ಲೋಕಾರ್ಪಣೆ-ಕಹಳೆ ನ್ಯೂಸ್

ಬಂಟ್ವಾಳ: ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಹುಟ್ಟೂರು ಸಜೀಪದಲ್ಲಿ ಅವರ ಜನ್ಮದಿನವಾದ ಡಿ.6ರಂದು ಕುಟುಂಬದ ಸದಸ್ಯರು ಡಾ. ಕದ್ರಿ ಗೋಪಾಲನಾಥ್ ಅವರ ಪುಣ್ಯಭೂಮಿ ಸ್ಮಾರಕ ಲೋಕಾರ್ಪಣೆ ಮಾಡಿದರು. ಡಾ. ಕದ್ರಿ ಗೋಪಾಲನಾಥ್ ಅವರ ಸಮಾಧಿಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಅಲ್ಲಿ ಸಂಗೀತ ದೇಶ, ಧರ್ಮ ಮೀರಿದ ವಿಶ್ವಭಾಷೆ, ಹೃದಯ ಭಾಷೆ ಎಂದು ಬರೆದಿದ್ದು, ಕದ್ರಿಯವರ ಪುತ್ಥಳಿಯಿದೆ. ಅಪರಾಹ್ನ 3 ಗಂಟೆಯಿಂದ ಅವರ ಶಿಷ್ಯರಾದ ಚಂದ್ರಶೇಖರನಾಥ...
ಬಂಟ್ವಾಳ

ಕೈತ್ರೋಡಿ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಚಂಡಿಕಾಯಾಗ, ಆನಂದ ಗುರೂಜಿ ಭಾಗಿ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಕೊಯ್ಲದ ಕೈತ್ರೋಡಿಯಲ್ಲಿರುವ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.15ರಂದು ರಾಧಾಕೃಷ್ಣ ಭಟ್ ಪೆದಮಲೆ ನೇತೃತ್ವದಲ್ಲಿ ವೇ.ಮೂ.ಸುಬ್ರಹ್ಮಣ್ಯ ಪರಾಡ್ಕರ್ ಗುಂಡ್ಯಡ್ಕ ಪೌರೋಹಿತ್ಯದಲ್ಲಿ ಶ್ರೀಚಂಡಿಕಾಯಾಗ ನಡೆಯಲಿದೆ. ಈ ಸಂದರ್ಭ ಪೂರ್ಣಾಹುತಿ ವೇಳೆ ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ವೇ.ಮೂ.ಕಮಲಾದೇವಿ ಆಸ್ರಣ್ಣ ಉಪಸ್ಥಿತರಿರುವರು ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೈತ್ರೋಡಿ ಕ್ವಾರ್ಟಸ್ ನ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ್ ತಿಳಿಸಿದರು....
ಬಂಟ್ವಾಳ

ಬಂಟ್ವಾಳ: ಭಾರಿ ಕುತೂಹಲದತ್ತ ಚುನಾವಣಾ ಕಣ; ‘ಕೈ’ ತೊರೆದು ‘ತಾವರೆ’ ಹಿಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯ; ಬಿಜೆಪಿಗೆ ಶಕ್ತಿಯಾಗಲಿದ್ದಾರಾ ಡಿ.ಕೆ. ಹಂಝ- ಕಹಳೆ ನ್ಯೂಸ್

ಬಂಟ್ವಾಳ: ಕಾಂಗ್ರೆಸ್ ನ ಮಾಜಿ ತಾಪಂ ಸದಸ್ಯ ಸಹಿತ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಹಾಗೂ ನಾಯಕರ ಅಸಮಾಧಾನ ದಿಂದ ಹಾಗೂ ಪಕ್ಷ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಬಂಟ್ವಾಳ ಬಿಜೆಪಿ ಪ್ರಕಟನೆ ತಿಳಿಸಿದೆ. ಮುಖ್ಯವಾಗಿ ಜಗದೀಶ್ ಶೆಟ್ಟಿ ಮವಂತೂರು,ಮಾಜಿ ತಾ.ಪಂ ಸದಸ್ಯ ಹಂಝ ಮಂಚಿ, ಚಂದ್ರಹಾಸ ಕರ್ಕೆರಾ ಅರಳ, ಮುಸ್ತಾಫ ಮೂಲರಪಟ್ಣ ಮತ್ತು ಹತ್ತಾರು ಕಾಂಗ್ರೆಸ್...
ಬಂಟ್ವಾಳಸುದ್ದಿ

ಬಂಟ್ವಾಳ: ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ಪಂಚಾಯತ್ ಮಾಜಿ ಸದಸ್ಯ ಡಿ.ಕೆ‌.ಹಂಝ ಸಹಿತ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಮ್ಮುಖದಲ್ಲಿ ತಾಪಂ ಮಾಜಿ ಸದಸ್ಯ ಹಂಝ ಮಂಚಿ, ಜಗದೀಶ್ ಶೆಟ್ಟಿ ಮವಂತೂರು, ಚಂದ್ರಹಾಸ ಕರ್ಕೆರ ಅರಳ, ಮುಸ್ತಫ ಮೂಲರಪಟ್ಣ ಮತ್ತು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಕೇಂದ್ರದಿಂದ ತೊಡಗಿ ಗ್ರಾಮ ಪಂಚಾಯತ್ ಹಂತದವರೆಗೂ ಬಿಜೆಪಿ ಪರ ಒಲವು ಇದೆ,...
1 140 141 142 143 144 147
Page 142 of 147