Sunday, January 19, 2025

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ ಹಿನ್ನಲೆ ಪೊಳಲಿ ಕ್ಷೇತ್ರದಲ್ಲಿ ಹರಕೆಹೊತ್ತ ಶಿಕ್ಷಣ ಸಚಿವರು ; ನಾಳೆ ಇತಿಹಾಸ ಪ್ರಸಿದ್ಧ ಪೊಳಲಿಗೆ ಸಚಿವ ಎಸ್ ಸುರೇಶ್ ಕುಮಾರ್ – ಕಹಳೆ ನ್ಯೂಸ್

ಬಂಟ್ವಾಳ, ಜು 09 : ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದ ಹಿನ್ನೆಲೆ ರಾಜ್ಯ ಶಿಕ್ಷಣ ಸಚಿವ ಎಸ್‌‌.ಸುರೇಶ್‌ ಕುಮಾರ್‌ ಅವರು ಜು 10ರಂದು ಬಂಟ್ವಾಳಕ್ಕೆ ಆಗಮಿಸಿ ಪೊಳಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಶಿಕ್ಷಣ ಸಚಿವರು ಈ ಹಿಂದೆ ಆಗಮಿಸಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದರೆ ಪೊಳಲಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು ಎಂದು ತಿಳಿಸಿದರು. ಕೊರೊನಾ ಹಿನ್ನೆಲೆ ಎಸ್ಸೆಸ್ಸೆಲ್ಸಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳದ ವಾಮದಪದವಿನಲ್ಲಿ ಕರ್ತವ್ಯನಿರತ ಆಶಾ ಕಾರ್ಯಕರ್ತೆ ಮೇಲೆ ದೊಣ್ಣೆಯಿಂದ ಹಲ್ಲೆ, ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಚೆನ್ನೈ ತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಮುಂಡೊಟ್ಟು ಎಂಬಲ್ಲಿ ವ್ಯಕ್ತಿಯೋರ್ವ ಕೊರೋನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಇಂದು ನಡೆದಿದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಿಂದ ಕಾರ್ಯ ನಿರ್ವಹಿಸುತ್ತಿರುವ ಮಮತಾ ಗಟ್ಟಿ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ, ಇಲ್ಲಿಗೆ ಸಮೀಪದ ಮಜಲು ನಿವಾಸಿ ಕಾಂತಪ್ಪ ಪೂಜಾರಿ ಹಲ್ಲೆ ನಡೆಸಿರುವ ವ್ಯಕ್ತಿ. ಇಂದು ಬೆಳಿಗ್ಗೆ ಎಂದಿನಂತೆ ಮಮತಾ ಅವರು...
ಬಂಟ್ವಾಳಸುದ್ದಿ

BREAKING NEWS:-ಕಲ್ಲಡ್ಕದ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ – ದ.ಕದಲ್ಲಿ 18ಕ್ಕೇರಿಕೆ ಸಾವಿನ ಸಂಖ್ಯೆ-ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಕ್ಕೆ ಜು.2 ರ ಗುರುವಾರ ಮತ್ತೊಂದು ಬಲಿಯಾಗಿದೆ. ಬಂಟ್ವಾಳ ತಾಲೂಕಿನ ಕಲ್ಕಡ್ಕ ನಿವಾಸಿಯಾಗಿರುವ 49 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿಕೆಯಾಗಿದೆ. ಕಳೆದ 20 ದಿನಗಳಿಂದ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ, ಟಿ.ಬಿ.ಹಾಗೂ ಲಿವರ್ ನ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ಸೊಂಕು ಪತ್ತೆಯಾಗಿತ್ತು.  ...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳ

ಪುತ್ತೂರಿನ ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ ಕಂಬಳಬೆಟ್ಟಿನ ಅಂಗಡಿ ಮಾಲೀಕನಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ವಿಟ್ಲ: ಕಂಬಳಬೆಟ್ಟು ಅಂಗಡಿ ಮಾಲಿಕನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮೊನ್ನೆ ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು, ಅವರ ಸಂಪರ್ಕದಿಂದ ಅವರ ಸಂಬಂಧಿ ಕಂಬಳಬೆಟ್ಟು ಕೊರೊನಾ ಸೊಂಕು ಪತ್ತೆ ಆಗಿದೆ. ಪುತ್ತೂರಿನಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆ ಅವರ ಸಂಬಂಧಿಗೆ ಸೇರಿದ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಬಳಿಕ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಇಂದು ಸೋಂಕು ದೃಢಪಟ್ಟಿದೆ. ಇವರ ಅಂಗಡಿಗೆ ಹಲವಾರು ಭೇಟಿ ನೀಡಿದ್ದು, ಸೋಂಕು ಹರಡಿರುವ ಸಾಧ್ಯಗಳಿದ್ದು,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೆ ಇಬ್ಬರು ಬಲಿ : ಸುರತ್ಕಲ್ ನ 31 ವರ್ಷದ ಯುವಕ, ಬಂಟ್ವಾಳದ 57 ವರ್ಷದ ವೃದ್ದೆ ಸಾವು – ಕಹಳೆ ನ್ಯೂಸ್

ಮಂಗಳೂರು : ಕರಾವಳಿಯಲ್ಲಿ ಡೆಡ್ಲಿ ಮಹಾಮಾರಿಯ ಅಬ್ಬರ ಜೋರಾಗುತ್ತಿದ್ದು, ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದೆ. ಈ ಮೂಲಕ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯ 12ಕ್ಕೆ ಏರಿಕೆಯಾಗಿದೆ. ಬಂಟ್ವಾಳದಲ್ಲಿ ಮತ್ತೆ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದ ಬಂಟ್ವಾಳದಲ್ಲಿ ಇದೀಗ ಮತ್ತೊಂದು ಬಲಿಯಾಗಿದೆ. 57 ವರ್ಷದ ಬಂಟ್ವಾಳದ ವೃದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಲಿವರ್ ಹಾಗೂ ಹೃದಯ ರೋಗದ...
ಬಂಟ್ವಾಳಸುದ್ದಿ

ಬೆಂಜನಪದವು ಎಂಬಲ್ಲಿ ಭೀಕರ ಅಪಘಾತದಲ್ಲಿ ಯುವತಿ ಸಾವು- ಕಹಳೆ ನ್ಯೂಸ್

ಮಂಗಳೂರು: ನಗರದ ಹೊರವಲಯದ ಬೆಂಜನಪದವು ದಿವ್ಯಜ್ಯೋತಿ ಅಂಗಡಿಯ ಎದುರುಗಡೆ ಸ್ವಿಪ್ಟ್ ಕಾರೊಂದು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿ ಆಕ್ಟಿವಾ ಸ್ಕೂಟರ್ ಮತ್ತು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಬೆಂಜನಪದವು ನಿವಾಸಿ ಯುವತಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದು, ಪಾದಾಚಾರಿ ಸಹಿತ ಇಬ್ಬರಿಗೆ ಗಾಯಗಳಾದ ಘಟನೆ ಇಂದು ರಾತ್ರಿ 9 ಗಂಟೆಯ ಸುಮಾರಿಗೆ ಸಂಭವಿಸಿದೆ. ಯುವತಿ ತನ್ನ ಸ್ನೇಹಿತೆಯ ಜೊತೆಗೆ ಮೊಬೈಲ್ ರಿಚಾರ್ಜ್ ಮಾಡಿಸಲು ಅಂಗಡಿಗೆ ಹೋಗುತ್ತಿದ್ದಾಗ ಕಾರ್ ಬಡಿದಿದೆ. ಮತ್ತೊಬ್ಬ...
ಬಂಟ್ವಾಳಸುದ್ದಿ

ಬಂಟ್ವಾಳದಲ್ಲಿ ಶಿವ ದೇವರ ಕಟ್ಟೆಯಲ್ಲಿ ಜಿಹಾದಿಗಳ ಟಿಕ್ ಟಾಕ್ ; ಹಿಂದೂ ರುದ್ರಭೂಮಿಯ ಶಿವ ಪೀಠದ ಶುದ್ಧೀಕರಣ ನಡೆಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ – ಕಹಳೆ ನ್ಯೂಸ್

ಬಂಟ್ವಾಳ : ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನ ಹಿಂದೂ ರುದ್ರ ಭೂಮಿ (ದೇವಭೂಮಿ)ಗೆ ಇತ್ತೀಚೆಗೆ ಮತಾಂಧ ಕಿಡಿಗೇಡಿ ದುಷ್ಕರ್ಮಿಗಳು ಅಕ್ರಮವಾಗಿ ಪ್ರವೇಶಿಸಿ ಶಿವ ದೇವರ ಮಹಾ ಮೂರ್ತಿಯ ಪೀಠದ ಮೇಲೆ ಚಪ್ಪಲಿ ಹಾಕಿ ಕುಣಿದು ಕುಪ್ಪಳಿಸಿ ವಿಕೃತ ಮೆರೆದು ದೇವರ ವಿಗ್ರಹ ಮತ್ತು ದೇವಭೂಮಿಯನ್ನು ಅಪವಿತ್ರ ಗೊಳಿಸಿದ್ದರು. ದೇವಭೂಮಿ ಮತ್ತು ಶಿವನ ಮಹಾ ಮೂರ್ತಿಯನ್ನು ಅಶುದ್ಧ ಗೊಳಿಸಿ ವಿಕೃತ ಮೆರೆದ ಮತಾಂದರಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಶ್ರೀ ಕ್ಷೇತ್ರ ಅನ್ನಪ್ಪಾಡಿ...
ಉಡುಪಿಕಾಸರಗೋಡುಜಿಲ್ಲೆದಕ್ಷಿಣ ಕನ್ನಡಪುತ್ತೂರುಪ್ರಾದೇಶಿಕಬಂಟ್ವಾಳಬೆಳ್ತಂಗಡಿವಾಣಿಜ್ಯಸುದ್ದಿಸುಬ್ರಹ್ಮಣ್ಯಸುಳ್ಯ

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ : ದಾಸ್ತಾನು ಕೊರತೆಯಿಂದ ಅಡಿಕೆ ಬೆಲೆ ಉತ್ತುಂಗಕ್ಕೆ ; ಕೆಜಿಗೆ 350ರೂ ನಿಂದ 400ರೂ – ಕಹಳೆ ನ್ಯೂಸ್

ಮಂಗಳೂರು : ಕರಾವಳಿ ಪ್ರಮುಖ ಬೆಳೆ ಅಡಿಕೆ, ಲಕ್ಷಾಂತರ ಕೃಷಿಕರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವ ನಡೆಸುತ್ತಿದ್ದಾರೆ, ಇಂತಹ ರೈತಾಪಿ ವರ್ಗಕ್ಕೆ ಲಾಕ್ ಡೌನ್ ನಂತರ ಗುಡ್ ನ್ಯೂಸ್ ಒಂದು ಬಂದಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆಯು ಕೆಜಿಗೆ 350, 400 ಆಗುವ ನಿರೀಕ್ಷೆ ಹೆಚ್ಚಾಗಿದೆ. ಲಾಕ್ ಡೌನ್ ನಿಂದ ಕಂಗೆಟ್ಟ ಕೃಷಿಕರ ಮುಖದಲ್ಲಿ‌ ಮಂದಹಾಸ ಮೂಡಿದೆ....
1 153 154 155
Page 155 of 155