ಬಂಟ್ವಾಳದ ವಗ್ಗದಲ್ಲಿ ಚುನಾವಣೆ ಬಹಿಷ್ಕಾರ ಮಾಡಲು ಮುಂದಾದ ಗ್ರಾಮಸ್ಥರು-ಕಹಳೆ ನ್ಯೂಸ್
ಬಂಟ್ವಾಳ: ರಾಜ್ಯದ ಹಲವೆಡೆ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿರುವ ಸುದ್ಧಿ ಕೇಳಿಬರುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಕೂಡ ಚುನಾವಣಾ ಬಹಿಷ್ಕಾರ ಬ್ಯಾನರ್ ಕಂಡು ಬಂದಿದೆ. ಈ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರವನ್ನು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ವಗ್ಗದ ಗ್ರಾಮಸ್ಥರು ಕೈಗೊಂಡಿದ್ದಾರೆ. ತಲೆ ತಲಾಂತರಗಳಿಂದ ಸುಮಾರು 12 ರಷ್ಟು ಮನೆಗಳಿಗೆ ಸಂಪರ್ಕಿಸುತ್ತಿದ್ದ ದಾರಿಗೆ ಅಡ್ಡಲಾಗಿ ಮಾಜಿ ಪಂಚಾಯತ್ ಉಪಾಧ್ಯಕ್ಷರು ತಡೆಗೋಡೆ...