ಗ್ರಾಪಂಚಾಯಿತಿ ಚುನಾವಣೆ: ಬಂಟ್ವಾಳ ತಾಲೂಕಿನ 13, ಮಂಗಳೂರಿನ 4 ಸೇರಿ ಒಟ್ಟು 17 ಮತದಾನ ಕೇಂದ್ರ ಶಿಫ್ಟ್-ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ತಾಲೂಕಿನ 13 ಮತ್ತು ಮಂಗಳೂರು ತಾಲೂಕಿನ 4 ಮತದಾನ ಕೇಂದ್ರಗಳು ಸೇರಿ ಒಟ್ಟು 17 ಮತದಾನ ಕೇಂದ್ರಗಳನ್ನು ಸ್ಥಳಾಂತರ ಮಾಡಲು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಗ್ರಾಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿದಾಗ, ಮತಗಟ್ಟೆ ಕೇಂದ್ರಗಳು ಶಿಥಿಲಗೊಂಡಿರುವುದು, ಮತದಾರರಿಗೆ ದೂರವಾದ ಜಾಗ ಹಾಗೂ ಕೆಲ ಖಾಸಗಿ ಶಾಲಾ ಕಟ್ಟಡಗಳ ರಿಪೇರಿ ಇರುವ ಕಾರಣ, ಮತದಾನಕ್ಕೆ ಯೋಗ್ಯವಲ್ಲದ ಕಾರಣ ಬದಲಾವಣೆ ಮಾಡುವುದು ಸೂಕ್ತವೆಂದು ಹೊಸ...