ಕಲ್ಲಡ್ಕ ಶಾರದಾ ಸೇವಾ ಪ್ರತಿಷ್ಠಾನದಿಂದ ರಮೇಶ್ ಕಲ್ಲಡ್ಕ ರಿಗೆ “ಶಾಂತಶ್ರೀ ಪ್ರಶಸ್ತಿ” ಪ್ರದಾನ-ಕಹಳೆ ನ್ಯೂಸ್
ಬಂಟ್ವಾಳ : ದೇವರ ಪ್ರಾರ್ಥನೆಯ ಮೂಲಕ ಮನಸ್ಸಿನ ಕ್ಲೇಶಗಳು ದೂರವಾದರೆ ಅದುವೆ ನಮ್ಮಬದುಕಿಗೆ ನಿಜವಾದ ಅಲಂಕಾರ ಎಂದು ಸುಳ್ಯ ರೋಟರಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ನಳಿನಾಕ್ಷಿ ವಿ.ಆಚಾರ್ಯ ಹೇಳಿದರು. ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಶಾರದಾ ಪೂಜಾ ಉತ್ಸವ ಸಮಿತಿಯ ನೇತೃತ್ಬದಲ್ಲಿ ಕಲ್ಲಡ್ಕ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಶಾಂತಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹಬ್ಬದ ಸಂತೋಷವನ್ನು ಹಂಚಿ ಸಾರ್ವಜನಿಕವಾಗಿ...