ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಪರಿಸರ ಮಾಲಿನ್ಯ!-ಕಹಳೆ ನ್ಯೂಸ್
ಬಂಟ್ವಾಳ: ಮಂಗಳೂರು-ಧರ್ಮಸ್ಥಳ ಮಧ್ಯೆ ಸಂಚರಿಸುವ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಸೇರಿದ ಬಸ್ಸೊಂದು ಮಂಗಳವಾರ ಸಂಪೂರ್ಣ ಕಪ್ಪು ಹೊಗೆಯನ್ನು ಹೊರ ಹಾಕುತ್ತಾ ಸಾಗಿದ್ದು, ಕೆಎಸ್‌ಆರ್‌ಟಿಸಿಯು ಇಂತಹ ಬಸ್ಸುಗಳನ್ನು ರಸ್ತೆಗಿಳಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಬಸ್ಸಿನ ತಾಂತ್ರಿಕ ದೋಷದಿಂದ ಹೊಗೆ ಈ ರೀತಿ ಕಪ್ಪು ಬಣ್ಣ ಹೊಂದಿರುವ ಸಾಧ್ಯತೆ ಇದ್ದು, ಸಾರ್ವಜನಿಕರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ....