Monday, November 25, 2024

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ(ರಿ.) ಮಾಣಿ ಘಟಕದ ವತಿಯಿಂದ “ಆಟಿದ ನೆಂಪು” ವಿಶೇಷ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಯುವವಾಹಿನಿ(ರಿ.) ಮಾಣಿ ಘಟಕದ ವತಿಯಿಂದ "ಆಟಿದ ನೆಂಪು" ವಿಶೇಷ ಕಾರ್ಯಕ್ರಮವು ದಿನಾಂಕ 21-07-2024 ನೇ ರವಿವಾರ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಮಾಣಿ ಇಲ್ಲಿ ವಿವಿಧ ಸ್ಪರ್ಧೆ ಹಾಗೂ ಸಭಾಕಾರ್ಯಕ್ರಮದೊಂದಿಗೆ ಜರುಗಲಿದೆ. ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ವಿವಿಧ ಸ್ಪರ್ಧೆ ನಡೆಯಲಿದೆ,ತದನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು,ಆಟಿ ತಿಂಗಳ ವಿಶೇಷತೆಯನ್ನು ಬಿಂಬಿಸುವ ವಿವಿಧ ಆಟಿಯ ತಿನಿಸುಗಳು ಇರಲಿದೆ. ಎಂದು ಮಾಣಿ ಘಟಕದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಂಟ್ವಳ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಅಧ್ಯಯನ ಪ್ರವಾಸ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಳ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿ ಕೊಳ್ಳಲಾಯಿತು. ವಿವಿಧ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಮಿಯಾಪಾದೆ ಸೌಮ್ಯ ರವರ ಮಲ್ಲಿಗೆ ನಾಟಿ,,ಬೊಳ್ಳುರು ಸತೀಶ್ ರವರ ಹೈನುಗಾರಿಕೆ ಹಾಗೂ ಓಲೆ ಬೆಲ್ಲ ತಯಾರಿ, ವಾಸು ನಾಯ್ಕರವರ ತಿಂಡಿ ಘಟಕ, ಅಲ್ಲಿಪಾದೆ ರಘು ಪೂಜಾರಿ ಯವರ ಜನನಿ ಪ್ರೊಡಕ್ಟ್, ನಾವುರ ಜಲಜಾಕ್ಷಿ ಯವರ ಬ್ಯಾಗ್ ತಯಾರಿ, ನಾವುರ ಹೇಮಲತಾ ರವರ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುಳ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆ: ಕುಸಿದು ಬಿದ್ದ ಕೋಳಿ ಸಾಕಾಣೆ ಶೆಡ್ : ಸಾವಿರಾರು ಕೋಳಿಗಳು ಸಾವು -ಕಹಳೆ ನ್ಯೂಸ್

ವಿಟ್ಲ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಕೋಳಿ ಸಾಕಾಣೆ ಮಾಡುವ ಶೆಡ್ ಒಂದು ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ  ತಡರಾತ್ರಿ ನಡೆದಿದೆ. ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಅದರಲ್ಲಿ ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು. ಕೋಳಿಗಳು ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಸುಮಾರು 700 ಕೋಳಿಗಳು ಮಾರಾಟವಾಗಿದ್ದವು....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಬಂಟ್ವಾಳ ಘಟಕದ ಆಶ್ರಯದಲ್ಲಿ ಶ್ರವಣ್ ಅಗ್ರಬೈಲ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 3 ಕಾರ್ಯಕ್ರಮ- ಕಹಳೆ ನ್ಯೂಸ್

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಬಂಟ್ವಾಳ ಘಟಕದ ಆಶ್ರಯದಲ್ಲಿ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನದ ಅಂಗವಾಗಿ ಪ್ರಚಾರ ನಿರ್ದೇಶಕ ಶ್ರವಣ್ ಅಗ್ರಬೈಲ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 3 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷ ಕೀರ್ತಿಶೇಷ ಚಂದಪ್ಪ ಪೂಜಾರಿಯವರ ಸಮಾಜ ಸೇವೆ ಅವರ ಆದರ್ಶಗಳು ಯುವ ಸಮುದಾಯಕ್ಕೆ ಪ್ರೇರಣೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ, ಉಪಾಧ್ಯಕ್ಷ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕೇಪು: ಸಿಡಿಲು ಬಡಿದು ಮನೆಗೆ ಹಾನಿ – ಕಹಳೆ ನ್ಯೂಸ್

ವಿಟ್ಲ : ಕೇಪು ಗ್ರಾಮದ ಚೆಲ್ಲಡ್ಕ ಎಂಬಲ್ಲಿನ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ. ಚೆಲ್ಲಡ್ಕ ಶಶಿಶೇಖರ ಭಂಡಾರಿ ಎಂಬವರ ಮನೆಗೆ ತಡರಾತ್ರಿ ಸಿಡಿಲು ಬಡಿದ ದುರ್ಘಟನೆ ಸಂಭವಿಸಿದೆ‌. ಘಟನೆಯಿಂದಾಗಿ ಮನೆಯೊಳಗಿದ್ದ ಫ್ರಿಡ್ಜ್, ಡ್ರೈಂಡ‌ರ್, ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ‌. ಸಿಡಿಲಿನ ಆಘಾತಕ್ಕೆ ಎಲೆಕ್ಟ್ರೋನಿಕ್ಸ್ ಉಪಕರಣಗಳಲ್ಲಿ ಬೆಂಕಿ ಉಂಟಾದ ಹಿನ್ನೆಲೆಯಲ್ಲಿ ಮನೆಯ ಒಂದು ಭಾಗ ಬೆಂಕಿಗಾಹುತಿಯಾಗಿದೆ‌. ಸ್ಥಳೀಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರಾದ ಬೆಂಕಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳದವರಿಗೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪುಂಜಾಲಕಟ್ಟೆ ಮಂದಿರದ ಬಳಿಯ ತಿರುವಿನಲ್ಲಿ ಶಾಮಿಯಾನ ಅಂಗಡಿಗೆ ಸೇರಿದ ಲಾರಿ ಪಲ್ಟಿ : ಒರ್ವ ಮೃತ್ಯು,ಇಬ್ಬರ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಬಂಟ್ವಾಳ: ಲಾರಿಯೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನು ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ಇದೀಗ ನಡೆದಿದೆ. ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬಾತ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇನ್ನುಳಿದಂತೆ ಗಾಯಗೊಂಡವರ ಹೆಸರು ಮಾಹಿತಿ ಲಭ್ಯವಾಗಿಲ್ಲ. ವಗ್ಗ ಸಮೀಪದ ಮದ್ವ ಎಂಬಲ್ಲಿನ ಶಾಮಿಯಾನ ಅಂಗಡಿಗೆ ಸೇರಿದ ಲಾರಿ ಇದಾಗಿದ್ದು, ಐಶರ್ ಲಾರಿಯಲ್ಲಿ ಸಾಮಿಯಾನದ ಸಾಮಾಗ್ರಿಗಳನ್ನು ಬೆಳ್ತಂಗಡಿ ಕಡೆಗೆ ಕೊಂಡುಹೋಗುತ್ತಿದ್ದ ವೇಳೆ ಪುಂಜಾಲಕಟ್ಟೆ ಮಂದಿರದ ಬಳಿ ತಿರುವಿನಲ್ಲಿ ಲಾರಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಸಿರು ನೈರ್ಮಲ್ಯ ಅಭ್ಯುದಯ ಶಾಲಾ ಪ್ರಶಸ್ತಿ – 2024 ಗೆ ಆಯ್ಕೆಯಾದ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆ- ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸರಕಾರಿ ಶಾಲೆಗಳ ಹಸಿರು, ಹಾಗೂ ನೈರ್ಮಲತೆ ಯನ್ನು ಗುರುತಿಸಿ ಕೊಡಮಾಡುವಂತಹ ಹಸಿರು ನೈರ್ಮಲ್ಯ ಅಭ್ಯುದಯ ಶಾಲಾ ಪ್ರಶಸ್ತಿ - 2024 ಗೆ ಬಂಟ್ವಾಳ ತಾಲೂಕಿನ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆ ಆಯ್ಕೆಯಾಗಿದೆ. ಸರಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವಚ್ಛತೆ ಮತ್ತು ಸುಸ್ಥಿರತೆಯಲ್ಲಿ ಉತ್ತಮ ಸಾಧನೆ ಮಾಡಿರುವ ಶಾಲೆಗಳನ್ನು ಆಯ್ಕೆ ಮಾಡಿ ಪ್ರತಿವರ್ಷ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ವತಿಯಿಂದ 56 ಮಂದಿ ಫಲಾನುಭವಿಗಳಿಗೆ ಸಂಪೂರ್ಣ ಸುರಕ್ಷಾ ವಿಮೆ ನೆರವಿನ ಚೆಕ್ ವಿತರಣೆ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ವತಿಯಿಂದ ಸಂಪೂರ್ಣ ಸುರಕ್ಷಾ ವಿಮೆ ಯೋಜನೆಯಿಂದ 56 ಮಂದಿ ಫಲಾನುಭವಿಗಳಿಗೆ 8,53,600 ರೂ.ಗಳ ಆರ್ಥಿಕ ನೆರವಿನ ಚೆಕ್ ವಿತರಣಾ ಸಮಾರಂಭ ಯೋಜನೆಯ ಬಂಟ್ವಾಳದ ಉನ್ನತಿ ಸೌಧ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಸುದರ್ಶನ್ ಜೈನ್ ಮಾತನಾಡಿ, ಬೆಳ್ತಂಗಡಿಯಲ್ಲಿ ಪ್ರಾರಂಭಗೊಂಡ ಯೋಜನೆಯು ಪ್ರಸ್ತುತ ಎಲ್ಲೆಡೆ ವಿಸ್ತರಣೆಗೊಂಡಿದ್ದು, ಶಿಕ್ಷಣ, ಆಕಸ್ಮಿಕ ಕಷ್ಟಗಳಿಗೆ ನೆರವು...
1 26 27 28 29 30 147
Page 28 of 147