ಪ್ರಾಥಮಿಕ ಶಾಲೆಗಳು ಶಿಸ್ತನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಸಾಧನೆ ದಾರಿಯನ್ನು ತೋರಿಸುತ್ತದೆ-ಸುತೇಶ್ ಕೆ ಪಿ -ಕಹಳೆ ನ್ಯೂಸ್
ಬಂಟ್ವಾಳ : ಪ್ರಾಥಮಿಕ ಶಾಲೆಗಳು ಶಿಸ್ತನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಸಾಧನೆ ದಾರಿಯನ್ನು ತೋರಿಸುತ್ತದೆ.ಜೀವನದಲ್ಲಿ ಶಿಸ್ತು ಮುಖ್ಯವಾಗಿದೆ ಶಿಸ್ತಿನಿಂದಲೇ ಸಾಧನೆ ಸಾಧ್ಯ, ಪೋಷಕರು ಖಾಸಗಿ ಶಾಲೆಗಳಿಗೆ ತೋರುವ ಆಸಕ್ತಿಯನ್ನು ಸರಕಾರಿ ಶಾಲೆಗಳಿಗೂ ತೋರಿಸಬೇಕು. ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಾ ಬೆಳೆಯುತ್ತಿದೆ. ಸರಕಾರಿ ಶಾಲೆಯನ್ನು ಕೀಳಾಗಿ ಕಾಣದೆ ಬದಲು ಹೆಮ್ಮೆ ಪಡುವಂತಾಗಬೇಕು ಎಂದು ಬಂಟ್ವಾಳ ಸಂಚಾರಿ ಠಾಣ ಪೊಲೀಸ್ ಉಪ ನಿರೀಕ್ಷಕರಾದ ಸುತೇಶ್ ಕೆ ಪಿ...