Recent Posts

Tuesday, November 26, 2024

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ಸರ್ವೀಸ್ ಬಸ್ ನಿಲ್ದಾಣದಲ್ಲಿ ಕೆಸರು ಮತ್ತು ನೀರು ತುಂಬಿ ನಡೆದಾಡಲು ಸಂಕಷ್ಟ ಪಡುವ ಪ್ರಯಾಣಿಕರು – ಕಹಳೆ ನ್ಯುಸ್

ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಿಸಿರೋಡಿನ ಸರ್ವೀಸ್ ಬಸ್ ನಿಲ್ದಾಣದಲ್ಲಿ ಕೆಸರು ಮತ್ತು ನೀರು ತುಂಬಿಕೊಂಡಿದ್ದ ಪ್ರಯಾಣಿಕರು ನಡೆದಾಡಲು ಸಂಕಷ್ಟ ಪಡುವ ಸ್ಥಿತಿ ದೃಶ್ಯ ಕಂಡು ಬಂದಿದೆ. ಮಂಗಳೂರಿಗೆ ಹೋಗುವ ಜನರಿಗೆ ನಿಲ್ಲಲು ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಸರು ತುಂಬಿಕೊಂಡಿದೆ. ಹಳೆಯ ತಾಲೂಕು ಕಚೇರಿಯ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ರಸ್ತೆಯ ಮಣ್ಣು ಮಳೆಯ ನೀರಿನ ಜೊತೆ ಸರ್ವೀಸ್ ರಸ್ತೆಗೆ ಬಂದು ನಿಂತಿದೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮೊಡಂಕಾಪು ಬಳಿ ಟ್ರಾನ್ಸ್ಫಾರ್ಮರ್ ಕಂಬಕ್ಕೆ ಬೆಂಕಿ-ಕಹಳೆ ನ್ಯೂಸ್

ಬಂಟ್ವಾಳ: ಬಿ.ಸಿ.ರೋಡು ಕೈಕಂಬದ ಮೊಡಂಕಾಪು ಬಳಿ ಮಂಗಳವಾರ ಸುರಿದ ಗಾಳಿ ಮಳೆಯ ಸಂದರ್ಭ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬಕ್ಕೆ ಶಾರ್ಟ್ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡು ಟ್ರಾನ್ಸ್ಫಾರ್ಮರ್‌ನ ಕಂಬ ಹಾಗೂ ಇದಕ್ಕೆ ಸಂಬAಧಪಟ್ಟ ವಿದ್ಯುತ್ ತಂತಿಗಳು ಸಂಪೂರ್ಣ ಸುಟ್ಟು ಹೋಗಿರುತ್ತದೆ. ಬೆಂಕಿಗಾಹುತಿಯಾದ ಸಂದರ್ಭ ಸ್ಥಳೀಯರು ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಿದರು. ಬೆಂಕಿ ನಂದಿಸಲು ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಗೂ ಬಂಟ್ವಾಳ ಅಗ್ನಿಶಾಮಕ ಅಧಿಕಾರಿ ರಾಜೇಶ್ ಹಾಗೂ ಸಿಬ್ಬಂದಿವರ್ಗ ಸಹಕರಿಸಿದರು....
ಬಂಟ್ವಾಳಸುದ್ದಿ

ಮಿತ್ತೂರು : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರ : ಜಖಂಗೊಂಡ ಕಾರು – ಕಹಳೆ ನ್ಯೂಸ್

ಬಂಟ್ವಾಳ: ಸಂಜೆ ವೇಳೆ ಸುರಿದ ಬಾರಿ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಮಾಣಿ ಮೈಸೂರು ರಸ್ತೆಯ ಮಿತ್ತೂರು ಸಮೀಪದ ಕುಕ್ಕರಬೆಟ್ಟು ಎಂಬಲ್ಲಿ ನಡೆದಿದೆ. ಮಂಗಳೂರು ಹಂಪನಕಟ್ಟೆ ನಿವಾಸಿಗಳು ಎಂದು ಹೇಳಲಾಗಿದ್ದು, ಇವರ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನಪ್ರಯಾಣಿಕರಿದ್ದು, ಮೈಸೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಚಲಿಸುತ್ತಿದ್ದಾಗಲೇ ಮರ ಮುರಿದು ಬಿದ್ದ ಕಾರಣ ಕಾರು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಉಪ್ಪಿನಂಗಡಿ : ಡ್ರೈನೇಜ್ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಅಶೋಕ್ ರೈ– ಕಹಳೆ ನ್ಯೂಸ್

ಪುತ್ತೂರು: ಉಪ್ಪಿನಂಗಡಿ ಪೇಟೆಯ ಹೃದಯ ಭಾಗದಲ್ಲಿ ಕಳೆದ 40 ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ಡ್ರೈನೇಜ್ ಸಮಸ್ಯೆಯನ್ನು ಶಾಸಕ ಅಶೋಕ್ ರೈ ಯವರು ಇತ್ಯರ್ಥಪಡಿಸಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ. ಇಂದು ಉಪ್ಪಿನಂಗಡಿಗೆ ಭೇಟಿ ನೀಡಿದ ಶಾಸಕರು ಕಾಮಗಾರಿ ವೀಕ್ಷಣೆ ಮಾಡಿದರು. ಮಳೆ ನೀರು, ಮತ್ತು ನಗರದ ಕೊಳಚೆ ನೀರು ಪ್ರತೀ ಮಳೆಗಾಲದಲ್ಲಿ ರಸ್ತೆಯ ಮೂಲಕ ಹರಿದು ಹೋಗುತ್ತಿತ್ತು. ಪ್ರತೀ ಮಳೆಗಾಲದಲ್ಲಿ ಈ ಪರಿಸರದ ಮನೆ ಮಂದಿ, ಅಂಗಡಿ ವ್ಯಾಪಾರಸ್ಥರು ನರಕಯಾತನೆ ಅನುಭವಿಸುವಂತಾಗಿತ್ತು. ರಾ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ರಿಕ್ಷಾ – ಬೈಕ್ ನಡುವೆ ಅಪಘಾತ : ರಸ್ತೆಗೆ ಎಸೆಯಲ್ಪಟ್ಟು ರಿಕ್ಷಾದಲ್ಲಿದ್ದ ಪ್ರಯಾಣಿಕ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ: ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕನೋರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಸಂಜೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಸಜೀಪ ನಿವಾಸಿ ಅಲ್ತಾಫ್ (18) ಮೃತಪಟ್ಟ ಯುವಕ. ಬಿಸಿರೋಡಿನಿಂದ ಬರುತ್ತಿದ್ದ ರಿಕ್ಷಾ ಹಾಗೂ ಪಾಣೆಮಂಗಳೂರು ಪೇಟೆಯಿಂದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ. ಪಲ್ಟಿಯಾಗುವ ಸಂದರ್ಭದಲ್ಲಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ-ಕಹಳೆ ನ್ಯೂಸ್

ಬಂಟ್ವಾಳ;  ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಪದವೀಧರ ಹಾಗೂ ಶಿಕ್ಷಕರ ಎರಡು ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆಲುವು ಪಡೆಯಬೇಕಾಗಿದೆ,ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಅತ್ಯಂತ ಶೃದ್ದೆಯಿಂದ ಮಾಡುವಂತೆ ತಿಳಿಸಿದರು. ವಿಧಾನಸಭೆಯಲ್ಲಿ ಕೆಲವೊಂದು ಮಹತ್ವದ ಕಾರ್ಯಗಳು ಜಾರಿಯಾಗಬೇಕಾದರೆ ಗೆಲುವು ಅತ್ಯಂತ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ದಿನೇಶ್ ಸುವರ್ಣ ರಾಯಿ ಆಯ್ಕೆ-ಕಹಳೆ ನ್ಯೂಸ್

ಬಂಟ್ವಾಳ : ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ 2024-25 ಸಾಲಿನ ನೂತನ ಅಧ್ಯಕ್ಷರಾಗಿ ದಿನೇಶ್ ಸುವರ್ಣ ರಾಯಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರು :ಪ್ರಥಮ ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ ಪಳ್ಳಿಕಂಡ, ದ್ವಿತೀಯ ಉಪಾಧ್ಯಕ್ಷರಾಗಿನಾಗೇಶ್ ಪೂಜಾರಿ ನೈಬೇಲು ಕಾರ್ಯದರ್ಶಿಯಾಗಿ ಚೇತನ್ ಮುಂಡಾಜೆ, ಜೊತೆ ಕಾರ್ಯದರ್ಶಿಯಾಗಿ ಸುನೀಲ್ ಸಾಲ್ಯಾನ್ ರಾಯಿ ಕೋಶಾಧಿಕಾರಿಯಾಗಿ ಗೀತಾ ಜಗದೀಶ್ ಕಂಜತ್ತೂರು ಸಾಂಸ್ಕೃತಿಕ ನಿರ್ದೇಶಕರಾಗಿ ಧನುಷ್ ಮಧ್ವ, ಕ್ರೀಡಾ ನಿರ್ದೇಶಕರಾಗಿ ಮಧುಸೂಧನ್ ಮಧ್ವ, ಆರೋಗ್ಯ ನಿರ್ದೇಶಕರಾಗಿ ಮಹೇಶ್ ಬೊಳ್ಳಾಯಿ,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಸ್ವಾಮಿ ಕೊರಗಜ್ಜ ಕಲಾಕೇಂದ್ರ ಕಲ್ಲುರ್ಟಿಯಡ್ಕ-ಉಕ್ಕುಡ ಇದರ ಆಶ್ರಯದಲ್ಲಿ ಸಂಗಮ ಯುವಕ ಮಂಡಲ ಪಡಿಬಾಗಿಲಿನಲ್ಲಿ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನೆ – ಕಹಳೆ ನ್ಯೂಸ್

ವಿಟ್ಲ : ಶ್ರೀ ಸ್ವಾಮಿ ಕೊರಗಜ್ಜ ಕಲಾಕೇಂದ್ರ ಕಲ್ಲುರ್ಟಿಯಡ್ಕ-ಉಕ್ಕುಡ ಇದರ ಆಶ್ರಯದಲ್ಲಿ ಸಂಗಮ ಯುವಕ ಮಂಡಲ ಪಡಿಬಾಗಿಲು ಇಲ್ಲಿನ ಕಟ್ಟಡದಲ್ಲಿ ಇಂದುಶ್ರೀ ಆ.ಓ.ಏ ಕಲ್ಲುರ್ಟಿಯಡ್ಕ ಇವರ ಸಂಯೋಜಕತ್ವದಲ್ಲಿ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉಕ್ಕುಡದ ಪುರಂದರದಾಸರೆAದೇ ಕರೆಯಲ್ಪಡುವ ಪ್ರಸಿದ್ಧ ಹಿರಿಯ ಭಜನೆಗಾರರಾದ ಶ್ರೀ ನಾರಾಯಣ ಶೆಟ್ಟಿಯವರ ದಿವ್ಯಹಸ್ತದಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಐತ್ತಪ್ಪನಾಯ್ಕ...
1 44 45 46 47 48 147
Page 46 of 147