Tuesday, November 26, 2024

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಉಪ್ಪಿನಂಗಡಿ : ಮಲಗಿದ್ದಲೇ ಹೃದಯಾಘಾತಕ್ಕೆ ಯುವಕ ಬಲಿ-ಕಹಳೆ ನ್ಯೂಸ್

ಉಪ್ಪಿನಂಗಡಿ: ಕೊರೊನಾದ ಬಳಿಕ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಬಲಿಯಾಗುವ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಅದೇ ರೀತಿ ಗಾರೆ ಕೆಲಸಕ್ಕೆ ಹೋಗುವ ಯುವಕನೊಬ್ಬ ಮಲಗಿದ್ದಲೇ ಹೃದಯಾಘಾತಕ್ಕೆ ಸಿಲುಕಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪ ನಡೆದಿದೆ. ನಿನ್ನಿಕಲ್ಲು ನಿವಾಸಿ ದಿ. ಗೋಪಾಲ ಗೌಡರ ಪುತ್ರ 27ರ ಹರೆಯದ ಜನಾರ್ದನ ನಿನ್ನಿಕಲ್ಲು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಇವರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇದ್ದರು. ಇವರ ತಾಯಿ ತೋಟದ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು –ಕಹಳೆ ನ್ಯೂಸ್

ಬಂಟ್ವಾಳ: ಬಿ.ಸಿ.ರೋಡು ನೇತ್ರಾವತಿ ಸೇತುವೆಯ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ. ನರಿಕೊಂಬು ಗ್ರಾಮದ ಪೊಯಿತ್ತಾಜೆ ನಿವಾಸಿ ಸುಬ್ಬ ಭಂಡಾರಿ(68) ಮೃತಪಟ್ಟ ವ್ಯಕ್ತಿ. ಅವರು ಬಿ.ಸಿ.ರೋಡಿನಲ್ಲಿ ನಡೆದ ಮದುವೆಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಅಪಘಾತದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೊಂಚ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಂಟ್ವಾಳ ‌ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚಯರ್ ಹಸ್ತಾಂತರ –ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ವಿಭಾಗದಿಂದ ಬಂಟ್ವಾಳ ತಾಲೂಕಿನ ಸುಜೀರು ಬದಿಗುಡ್ಡೆ ನಿವಾಸಿ ಶ್ರೀಮತಿ ಗಿರಿಜಾ ರವರಿಗೆ ನೀಡಿದ ವೀಲ್ ಚಯರನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ರಾಜೇಶ್ ,ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ , ಸೇವಾ ಪ್ರತಿನಿಧಿ ಮಲ್ಲಿಕಾ , ತುಂಬೆ ವಲಯ ಅಧ್ಯಕ್ಷೆ ಲೀಡಿಯಾ ಪಿಂಟೂ, ಪರಂಗಿಪೇಟೆ ಒಕ್ಕೂಟದ ಅಧ್ಯಕ್ಷರಾದ ಸುಕೇಶ್...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ನಾಯಿ ಬಿಸ್ಕೆಟ್ ತಯಾರಿಸುವ ಕಂಪೆನಿಯಿAದ ದುರ್ನಾತ ಬೀರಿ: ತಾಲೂಕು ಪಂಚಾಯತ್ ಇಒ ರಾಹುಲ್ ಕಾಂಬಳೆ ನೇತೃತ್ವದ ನಿಯೋಗ ಭೇಟಿ-ಕಹಳೆ ನ್ಯೂಸ್

ಬಂಟ್ವಾಳ: ಕೊಡ್ಮಾಣ್ ಶಾಲೆಯ ಅನತಿ ದೂರದಲ್ಲಿ ಮಾಂಸದ ತ್ಯಾಜ್ಯಗಳನ್ನು ತಂದು ನಾಯಿ ಬಿಸ್ಕೆಟ್ ತಯಾರಿಸುವ ಕಂಪೆನಿಯಿAದ ದುರ್ನಾತ ಬೀರಿ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಇಒ ರಾಹುಲ್ ಕಾಂಬಳೆ ನೇತೃತ್ವದ ನಿಯೋಗ ಭೇಟಿ ನೀಡಿ ಕಂಪೆನಿಯನ್ನು ಮುಚ್ಚುವಂತೆ ಆದೇಶಿಸಿದರು. ಕಂಪೆನಿಗೆ ಹಿಂದೆ ಮೇರಮಜಲು ಪಂಚಾಯತ್ ಪರವಾನಿಗೆ ಕೊಟ್ಟಿದ್ದು, ಆದರೆ ಕಳೆದ ಕೆಲವು ವರ್ಷಗಳಿಂದ ಪರವಾನಿಗೆ ನವೀಕರಣಗೊಳ್ಳದೇ ಇದ್ದರೂ ಕಂಪೆನಿಯು ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು. ಇದರಿಂದಾಗಿ...
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನ : ಓರ್ವನ ವಿರುದ್ದ ಪ್ರಕರಣ ದಾಖಲು –ಕಹಳೆ ನ್ಯೂಸ್

ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ವಿರುದ್ದ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬ್ಯಾರೇಜ್ ಕಮ್ ಡ್ಯಾಂ ನ ಎದುರುಭಾಗದಿಂದ ಅಕ್ರಮವಾಗಿ ಮರಳು ತೆಗೆಯುವ ಉದ್ದೇಶದಿಂದ ನದಿಯಲ್ಲಿ ನಿಲ್ಲಿಸಲಾಗಿದ್ದ ಒಂದು ಟಿಪ್ಪರ್ ಹಾಗೂ ಹಿಟಾಚಿಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನದಿ ಭಾಗದಲ್ಲಿ ಸುಮಾರು 7 ಟಿಪ್ಪರ್ ಲಾರಿ ಲೋಡ್ ಗಳಷ್ಟು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ: ಬೈಕ್‌ಗೆ ಕಾರ್ ಡಿಕ್ಕಿ ;ಬೈಕ್ ಸವಾರನಿಗೆ ಗಾಯ –ಕಹಳೆ ನ್ಯೂಸ್

ವಿಟ್ಲ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಪಲ್ಟಿಯಾಗಿ ಸವಾರ ಗಾಯಗೊಂಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಬೈಕ್ ಸವಾರ ಕೊಳ್ಳಾಡು ಗ್ರಾಮದ ಮಂಕುಡೆ ಶಾಲಾ ಬಳಿಯ ಕೆ.ಹರ್ಷವರ್ಧನ ರಾವ್ (58 ವ)ರವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಏ.28ರಂದು ಅಡುಗೆ ಕೆಲಸದ ನಿಮಿತ್ತ ತಾನು ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಕಬಕ ಕಡೆಗೆ ಹೊರಟು ಸಾಲೆತ್ತೂರು-ಕಬಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಬಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.03ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಕಲ್ಲಡ್ಕ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.03ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಮೇ.02ರಂದು ಬೆಳಿಗ್ಗೆ ಶ್ರೀ ಮಣಿಕಂಠ ಸನ್ನಿಧಾನದಲ್ಲಿ ಗಣಹೋಮ, ಸಂಜೆ ಶಾಸ್ತç ಕಲ್ಪೋಕ್ತ ಪೂಜೆ, ವಾಸ್ತುಹೋಮಾದಿ ಅಧಿವಾಸ ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.     ಮೇ.03ರಂದು ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ...
ದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ವೀರಕಂಬ : ವಿವಾಹ ಸುಮೂರ್ತದ ನವವಧುವಿನ ಮೊದಲ ಮತದಾನ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಮತ ಕೇಂದ್ರ ಸಂಖ್ಯೆ 203 ರಲ್ಲಿ ವೀರಕಂಬ ಗ್ರಾಮದ ಗಣೇಶ್ ನಿಲಯ ಕಮಲಾಕ್ಷ ಪೂಜಾರಿಯವರ ದ್ವಿತೀಯ ಪುತ್ರಿ ವಿನುತಾ ಇಂದು ತನ್ನ ವಿವಾಹ ಸುಮೂರ್ತದ ಮೊದಲು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ವಿರಕಂಬ ಮಜಿ ಶಾಲೆಯಲ್ಲಿ ಎರಡು ಮತ ಕೇಂದ್ರಗಳಿದ್ದು ಮಧ್ಯಾಹ್ನ ವಿಪರೀತ ಬಿಸಿಲು ಸೆಕೆ, ಹಾಗೂ ಇವತ್ತು ಬಹಳಷ್ಟು ಶುಭ ಕಾರ್ಯಕ್ರಮಗಳಿದ್ದು ಬೆಳಗ್ಗಿನಿಂದಲೇ...
1 49 50 51 52 53 147
Page 51 of 147