ಸ್ನೇಹಿತರ ಜೊತೆಯಲ್ಲಿ ಈಜಲು ತೆರಳಿ ನೀರು ಪಾಲಾದ ವ್ಯಕ್ತಿ – ಕಹಳೆ ನ್ಯೂಸ್
ಬಂಟ್ವಾಳ: ಸ್ನೇಹಿತರ ಜೊತೆಯಲ್ಲಿ ಈಜಲು ಬಂದ ಐವರ ಪೈಕಿ ವ್ಯಕ್ತಿಯೋರ್ವನು ನೇತ್ರಾವತಿ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಶಂಭೂರು ಗ್ರಾಮದ ದೇವಸ್ಥಾನವೊಂದರ ಸಮೀಪ ನದಿಯಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿ ಲೋಹಿತಾಕ್ಷ ಮೃತಪಟ್ಟ ವ್ಯಕ್ತಿ. ಬೆಳ್ತಂಗಡಿ ನಿವಾಸಿಗಳಾದ ವಿನ್ಸಿ, ಮ್ಯಾಕ್ಸಿ, ಪ್ರಮೋದ್, ದಯಾನಂದ ಎಂಬವರ ಜೊತೆಗೆ ನೇತ್ರಾವತಿ ನದಿಗೆ ಈಜಾಡಲು ಬಂದಿದ್ಧ ವೇಳೆ ಘಟನೆ ನಡೆದಿದೆ. ವಿನ್ಸಿ ಎಂಬವರ ಪತ್ನಿಯ ಮನೆ ಶಂಭೂರಿನಲ್ಲಿದ್ದು, ಇಲ್ಲಿಗೆ ಆಗಾಗ ಬಂದು ನೇತ್ರಾವತಿ ನದಿಯಲ್ಲಿ ಸ್ನಾನ...