Wednesday, November 27, 2024

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಾದಾಚಾರಿಗೆ ಸರಕಾರಿ ವಾಹನ ಡಿಕ್ಕಿ ; ಚಾಲಕ ಪರಾರಿ – ಕಹಳೆ ನ್ಯೂಸ್

ಬಂಟ್ವಾಳ : ಸರಕಾರಿ ಇಲಾಖೆಗೆ ಸೇರಿದ ವಾಹನವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಟ್ರಾಫಿಕ್ ಎಸ್.ಐ.ಸುತೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪುತ್ತೂರು ಅರಣ್ಯ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಮೃತಪಟ್ಟ ಪಾದಾಚಾರಿಯ ಬಗ್ಗೆ ವಿವರ ಲಭ್ಯವಾಗಿಲ್ಲ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ಮಾ.17ರಿಂದ ಮಾ.25ರವರೆಗೆ ಪಾಂಡವರಕಲ್ಲು ಶ್ರೀರಾಜನ್ ದೈವ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದೆರೆ ಗರೋಡಿಯ ವಾರ್ಷಿಕ ಜಾತ್ರೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಡಗ ಕಜೆಕಾರಿನ ಪಾಂಡವರಕಲ್ಲು ಶ್ರೀರಾಜನ್ ದೈವ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದೆರೆ ಗರೋಡಿಯ ವಾರ್ಷಿಕ ಜಾತ್ರೋತ್ಸವವು ಮಾ.17ರಿಂದ ಮಾ.25ರವರೆಗೆ ನಡೆಯಲಿದೆ. ಮಾ.17ರಂದು ಶ್ರೀ ಕ್ಷೇತ್ರದಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಲಿದ್ದು, ಮಾ.21ರಂದು ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದ್ಯರೆ ಗರೋಡಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ದೈವಸ್ಥಾನದಲ್ಲಿ ಶ್ರೀ ಧರ್ಮದೈವ ವಿಷ್ಣುಮೂರ್ತಿ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ರಾತ್ರಿ ಕಜೆಕಾರ್ ಗುತ್ತಿನಿಂದ ದೈವ ಕೊಡಮಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಶ್ರೀ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಹೆಚ್ಚಿನ ಸುದ್ದಿ

ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ; ಬಜರಂಗದಳ ಪುತ್ತೂರು ಜಿಲ್ಲಾ ವತಿಯಿಂದ ಬಿಸಿರೋಡಿನಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ಬಂಟ್ವಾಳ : ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ, ವಿಶ್ವಹಿಂದೂ ಪರಿಷತ್ ,ಬಜರಂಗದಳ ಪುತ್ತೂರು ಜಿಲ್ಲಾ ವತಿಯಿಂದ ಬಿಸಿರೋಡಿನಲ್ಲಿ ಬೃಹತ್ ಪ್ರತಿಭಟನೆ ನಡೆದು ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಹಿಂದೂ ಕಾರ್ಯಕರ್ತರನ್ನು ಬಂಟ್ವಾಳ ಪೋಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು , ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ಹಿಂದೂ ವಿರೋಧಿ ನೀತಿಯನ್ನು...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪೆರಾಜೆ ಗ್ರಾಮದ ಹಿಂದೂ ರುದ್ರ ಭೂಮಿ – ಮೋಕ್ಷಧಾಮ ಲೋಕಾರ್ಪಣೆ – ಕಹಳೆ ನ್ಯೂಸ್

ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಾಜೆ ಗ್ರಾಮದ ಮಡಲ ಹಿಂದೂ ರುದ್ರ ಭೂಮಿ – ಮೋಕ್ಷಧಾಮ ಲೋಕಾರ್ಪಣೆ ಯನ್ನು 4ರಂದು ಇಂದು ಮಡಲ ದಲ್ಲಿ ಮಾನ್ಯ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರು ದೀಪ ಪ್ರಜ್ವಲನೆಯ ಮೂಲಕ ಲೋಕರ್ಪಣೆಗೈದರು. ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕುಶಾಲ ಎಂ ಪೆರಾಜೆ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷರಾದ ಶ್ರೀ ಮಾಧವ ಕುಲಾಲ್ , ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ಗ್ರಾಮಾಭಿವೃದ್ಧಿ ಯೋಜನೆ ಉನ್ನತಿ ಸೌಧದಲ್ಲಿ ನಡೆದ ನವಜೀವನೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಬೆಳ್ತಂಗಡಿ ಮತ್ತು ಜನಜಾಗೃತಿ ವೇದಿಕೆ ಬಂಟ್ವಾಳ ಹಾಗೂ ನವಜೀವನ ಸಮಿತಿಗಳ ಆಶ್ರಯದಲ್ಲಿ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು. ಯೋಜನೆಯ ಮದ್ಯವರ್ಜನ ಶಿಬಿರಗಳಲ್ಲಿ ಪಾಲ್ಗೊಂಡು ಹೊಸಜೀವನ ನಡೆಸುತ್ತಿರುವ ಸದಸ್ಯರಿಗಾಗಿ ನವಜೀವನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂದರ್ಭ ಆರೋಗ್ಯ ತಪಾಸಣೆ ಹಾಗೂ ಕ್ರೀಡಾಸ್ಪರ್ಧೆಗಳು ನಡೆದವು....
ದಕ್ಷಿಣ ಕನ್ನಡಬಂಟ್ವಾಳಬೆಳ್ತಂಗಡಿಸುದ್ದಿ

ಬಂಟ್ವಾಳ: ಸ್ಕಿಡ್ ಆಗಿ ರಸ್ತೆ ಬದಿಯ ಗುಂಡಿಗೆ ಬಿದ್ದ ಕಾರು : ತಂದೆಯ ಮೇಲೆ ದೂರು ನೀಡಿದ ಮಗ– ಕಹಳೆ ನ್ಯೂಸ್

ಬಂಟ್ವಾಳ: ಕಾರು ಅಪಘಾತ ಸಂಭವಿಸಿದ ಪ್ರಕರಣವೊಂದರಲ್ಲಿ ಕಾರು ಚಾಲಕ ತಂದೆಯ ಮೇಲೆ ಮಗನೇ ದೂರು ನೀಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಂದಾರು ನರಮಜೆ ನಿವಾಸಿ ಹನೀಫ್ ಎಂಬವರು ಆತನ ತಂದೆಯಾದ ಹಮೀದ್ ಎಂಬವರ ಮೇಲೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ ವಿವರ ಹಮೀದ್ ಅವರು ಬೆಳ್ತಂಗಡಿಯಿಂದ ಉಳ್ಳಾಲ ದರ್ಗಾಕ್ಕೆ ಹೋಗುವರಿದ್ದು, ಕಾರಿನಲ್ಲಿ ಪತ್ನಿ ಜಮೀಳಾ, ಮಕ್ಕಳಾದ ಮೊಹಮ್ಮದ್ ಅನಿಝ್, ಹಮೀದ್, ಅಜ್ಮಿಯಾ ಹಾಗೂ...
ದಕ್ಷಿಣ ಕನ್ನಡಬಂಟ್ವಾಳಬೆಳ್ತಂಗಡಿಸುದ್ದಿ

ಧೂಮಳಿಕೆ : ಅಕ್ರಮ ಜಾನುವಾರು ವಧೆ : ಅಡ್ಡೆಗೆ ಪೋಲೀಸರು ದಾಳಿ : ಆರೋಪಿಗಳು ಪರಾರಿ – ಕಹಳೆ ನ್ಯೂಸ್

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಧೂಮಳಿಕೆ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುವ ಅಡ್ಡೆಗೆ ಪುಂಜಾಲಕಟ್ಟೆ ಪೋಲೀಸರು ದಾಳಿ ನಡೆಸಿದ್ದು, ಆರೋಪಿಗಗಳು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಮಾಂಸ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಇಲ್ಯಾಸ್ ಧೂಮಳಿಕೆ ಯಾನೆ ಕುಂಟ ಇಲ್ಯಾಸ್ ಮತ್ತು ಇಲ್ಯಾಸ್ ಬಂಗೇರಕೆರೆ ಎಂಬವರು ಇಲ್ಯಾಸ್ ಧೂಮಳಿಕೆ ಎಂಬವರ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾಗ, ಪುಂಜಾಲಕಟ್ಟೆ ಪೊಲೀಸ್‌...
ಬಂಟ್ವಾಳಸುದ್ದಿ

ಇಂದಿನಿಂದ ಮಾ.12ರವರೆಗೆ ಶ್ರೀ ಭಯಂಕೇಶ್ವರ ಸದಾಶಿವ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಶ್ರೀಗಣಪತಿ, ಶ್ರೀ ದುರ್ಗಾ ಸಾನಿಧ್ಯಗಳ ಪುನಃಪ್ರತಿಷ್ಠೆಯೊಂದಿಗೆ ಭಯಂಕೇಶ್ವರ ಸದಾಶಿವ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಾ.3ರಿಂದ ಮೊದಲ್ಗೊಂಡು ಮಾ.12ರವರೆಗೆ ನಡೆಯಲಿದೆ ಎಂದು ವ್ಯವಸ್ಥಾಪನಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಎರಕಳ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊAಡಿದ್ದು, ಮಾ.5ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ದೊಂಪದಬಲಿ ಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಮಧ್ಯಾಹ್ನ...
1 63 64 65 66 67 147
Page 65 of 147