Sunday, November 24, 2024

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು : ಮಹಿಳೆ ಮೃತ್ಯು – ಚಾಲಕನ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಬಂಟ್ವಾಳ: ಬಿಸಿರೋಡು- ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳೆತ್ತರದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು,ಚಾಲಕ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಕೊಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆಯಾಗಿದ್ದಾರೆ. ಚಾಲಕ ರೂಪೇಶ್ (40) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೂಪೇಶ್ ಅವರ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪೊಳಲಿ ಸೇತುವೆ ಬಂದ್ : ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು – ಕಹಳೆ ನ್ಯೂಸ್

ಪೊಳಲಿ -ಅಡ್ಡೂರು ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಬಿರುಕು ಬಿಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಂತೆ ಆ ಸೇತುವೆಯಲ್ಲಿ ಘನ ವಾಹನಗಳು ಸಂಚಾರಿದAತೆ ನಿರ್ಬಂಧ ಹೇರಳಲಾಗಿತ್ತು. ಈಗಾಗಲೇ ಈ ಸೇತುವೆ ಸಾಮರ್ಥ್ಯ ಧಾರಣಾ ಯಂತ್ರ ಬಂದು ಎಲ್ಲ ಪರಿಶೀಲನೆ ಮಾಡಿದೆಯಾದರೂ, ಎರಡು ತಿಂಗಳಾದರೂ ಈ ಸೇತುವೆಯ ಕುರಿತು ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳದ ಕಾರಣ ಅಮ್ಮುಂಜೆ , ಕರಿಯಂಗಳ ,ಬಡಗಬೆಳ್ಳೂರು, ತೆಂಕಬೆಳ್ಳೂರು ಹಾಗೂ ಸುತ್ತಮುತ್ತಲಿನ ನಾಗರಿಕರು ಸೇರಿ ಮಂಗಳವಾರದAದು...
ದಕ್ಷಿಣ ಕನ್ನಡಬಂಟ್ವಾಳಬೆಳ್ತಂಗಡಿಸುದ್ದಿ

ಶ್ರೀ ರಾಮ ಶಿಶುಮಂದಿರದಲ್ಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರ ಅಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ-ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಅಲೆಕ್ಕಿ ಮುಗೇರಡ್ಕ ದ ಶ್ರೀ ರಾಮ ಶಿಶುಮಂದಿರದಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರ ಅಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ ಸಡಗರದಿಂದ ನಡೆಯಿತು. ಪುರೋಹಿತರು ಶಾರದಾ ಪೂಜೆ, ಹಾಗೂ ಮಾತೃ ಮಂಡಳಿಯವರಿAದ ಭಜನಾ ಕಾರ್ಯಕ್ರಮ ಮತ್ತು ವಾಹನ ಪೂಜೆ, ಹಾಗೂ ಉಪಹಾರದ ವ್ಯವಸ್ಥೆಯಲ್ಲಿ ನಡೆಯಿತು. ಉಪಹಾರವನ್ನು ಭರಥೇಶ್ ಜಾಲ್ನಡೇ, ದಿನೇಶ್ ಕೆಲೆಂಜಮಾರು ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ರಾಮ ಶಿಶು ಮಂದಿರದ ಮಕ್ಕಳು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶಾರದಾ ಸೇವಾ ಪ್ರತಿಷ್ಠಾನದಿಂದ ರಮೇಶ್ ಕಲ್ಲಡ್ಕ ರಿಗೆ “ಶಾಂತಶ್ರೀ ಪ್ರಶಸ್ತಿ” ಪ್ರದಾನ-ಕಹಳೆ ನ್ಯೂಸ್

ಬಂಟ್ವಾಳ : ದೇವರ ಪ್ರಾರ್ಥನೆಯ ಮೂಲಕ ಮನಸ್ಸಿನ ಕ್ಲೇಶಗಳು ದೂರವಾದರೆ ಅದುವೆ ನಮ್ಮಬದುಕಿಗೆ ನಿಜವಾದ ಅಲಂಕಾರ ಎಂದು ಸುಳ್ಯ ರೋಟರಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ನಳಿನಾಕ್ಷಿ ವಿ.ಆಚಾರ್ಯ ಹೇಳಿದರು. ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಶಾರದಾ ಪೂಜಾ ಉತ್ಸವ ಸಮಿತಿಯ ನೇತೃತ್ಬದಲ್ಲಿ ಕಲ್ಲಡ್ಕ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಶಾಂತಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹಬ್ಬದ ಸಂತೋಷವನ್ನು ಹಂಚಿ ಸಾರ್ವಜನಿಕವಾಗಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ಉಪವಿಭಾಗ ಕಚೇರಿ ಸೇರಿದಂತೆ ವ್ಯಾಪ್ತಿಗೆ ಬರುವ ಬಂಟ್ವಾಳ ನಗರ ಪೋಲೀಸ್ ಠಾಣೆ, ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಆಯುಧ ಪೂಜೆ-ಕಹಳೆ ನ್ಯೂಸ್

ಬಂಟ್ವಾಳ: ನವರಾತ್ರಿಯ ವಿಜಯದಶಮಿಯ ದಿನವಾದ ಇಂದು ಬಂಟ್ವಾಳ ಉಪವಿಭಾಗ ಕಚೇರಿ ಸೇರಿದಂತೆ ವ್ಯಾಪ್ತಿಗೆ ಬರುವ ಬಂಟ್ವಾಳ ನಗರ ಪೋಲೀಸ್ ಠಾಣೆ, ಗ್ರಾಮಾಂತರ ಪೋಲೀಸ್ ಠಾಣೆ,ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆ, ಪುಂಜಾಲಕಟ್ಟೆ ಪೋಲೀಸ್ ಠಾಣೆ ಹಾಗೂ ವಿಟ್ಲ ಪೋಲೀಸ್ ಠಾಣೆಯಲ್ಲಿ ಆಯುಧ ಪೂಜೆ ನಡೆಯಿತು. ಬಿಸಿರೋಡಿನ ಪೋಲಿಸ್ ಲೈನ್ ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಅವರ ಪೌರೋಹಿತ್ಯದಲ್ಲಿ ಡಿ.ವೈ‌.ಎಸ್.ಪಿ.ಕಚೇರಿ ಹಾಗೂ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ವೈಧಿಕ ಪೂಜಾ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಅಯೋಧ್ಯಾ ಫ್ರೆಂಡ್ಸ್, ಪೆರ್ನೆ ಇದರ ಆಶ್ರಯದಲ್ಲಿ ನ.02ರಂದು 6ನೇ ವರ್ಷದ ಸಾರ್ವಜನಿಕ ಕ್ರೀಡಾಕೂಟ – ಕಹಳೆ ನ್ಯೂಸ್

ಉಪ್ಪಿನಂಗಡಿ : ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಅಯೋಧ್ಯಾ ಫ್ರೆಂಡ್ಸ್, ಪೆರ್ನೆ ಇದರ ಆಶ್ರಯದಲ್ಲಿ ನ.02ರಂದು ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆಯುವ 6ನೇ ವರ್ಷದ ಸಾರ್ವಜನಿಕ ಕ್ರೀಡಾಕೂಟ ನಡೆಯಲಿದೆ. ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ|| ರಾಮಕೃಷ್ಣ ಭಟ್ ಹಾಗೂ ಯಮುನಾ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನ.02ರಂದು ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಕ್ರೀಡಾಕೂಟ ನಡೆಯಲಿದ್ದು, ಬೆಳಗ್ಗೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಹುಲಿಗಳು ಸಮಾಜದಲ್ಲಿರುವ ಕೆಟ್ಟದ್ದನ್ನು ವಿರೋಧಿಸಿ ಗರ್ಜಿಸುವ ಹುಲಿಗಳಾಗಬೇಕು… ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ –ಕಹಳೆ ನ್ಯೂಸ್

ಕಲ್ಲಡ್ಕ : ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಹುಲಿಗಳು ಸಮಾಜದಲ್ಲಿರುವ ಕೆಟ್ಟದ್ದನ್ನು ವಿರೋಧಿಸಿ ಗರ್ಜಿಸುವ ಹುಲಿಗಳಾಗಬೇಕು, ಆ ಮೂಲಕ ಹಿಂದೂ ಧರ್ಮದ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯ ಆಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು. ಅವರು ಕಲ್ಲಡ್ಕ ಕೆ ಟಿ ಹೋಟೆಲ್ ಲಕ್ಷ್ಮಿ ಗಣೇಶ್ ಇದರ ಸಹಕಾರದೊಂದಿಗೆ ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪೊಳಲಿ ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ-ಕಹಳೆ ನ್ಯೂಸ್

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಲಲಿತಾ ಪಂಚಮಿಯ ದಿನವಾದ ಸೋಮವಾರ ರಾತ್ರಿ ತಾಯಿಗೆ ಹರಕೆ ರೂಪದಲ್ಲಿ ಸಂದಾಯವಾದ ಸುಮಾರು 20 ಸಾವಿರ ಸೀರೆಗಳನ್ನು ಮಹಿಳಾ ಭಕ್ತರಿಗೆ ವಿತರಿಸಲಾಯಿತು. ಕಳೆದ ಹಲವು ವರ್ಷಗಳಿಂದ ಲಲಿತಾ ಪಂಚಮಿಯ ದಿನ ಭಕ್ತರಿಗೆ ಸೀರೆಗಳನ್ನು ಹಂಚುತ್ತಿದ್ದು, ಕಳೆದ ವರ್ಷ ಸುಮಾರು 10 ಸಾವಿರದಷ್ಟು ಸೀರೆಗಳನ್ನು ವಿತರಿಸಲಾಗಿತ್ತು. ಈ ಸಂದರ್ಭ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ ತಂತ್ರಿ, ಅನುವಂಶಿಕ ಆಡಳಿತ ಮೊಕ್ತೇಸರ...
1 6 7 8 9 10 147
Page 8 of 147