Recent Posts

Tuesday, November 26, 2024

ಬಂಟ್ವಾಳ

ಬಂಟ್ವಾಳಸುದ್ದಿ

ಬೈಕ್ ಸ್ಕಿಡ್ – ಸವಾರನಿಗೆ ಗಾಯ -ಕಹಳೆ ನ್ಯೂಸ್

ಬೈಕ್ ಸ್ಕಿಡ್ ಆಗಿ ಸವಾರ ಗಂಭೀರ ಗಾಯಗೊಂಡ. ಘಟನೆ ವಿಟ್ಲದ ಮುಳಿಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೇಪು ಸಮೀಪದ ಮರಕ್ಕಿನಿ ನಿವಾಸಿ ಜಯಕುಮಾರರವರು ಘಟನೆಯಿಂದಾಗಿಗಂಭೀರ ಗಾಯಗೊಂಡವರೆಂದು ತಿಳಿದು ಬಂದಿದೆ‌. ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದು ಗಂಭೀರ ಗಾಉಗೊಂಡಿದ್ದ ಜಯಕುಮಾರ್ ರವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕತೆದೊಯ್ಯಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ....
ಬಂಟ್ವಾಳಸುದ್ದಿ

ಅಕ್ರಮ ಜಾನುವಾರು ಸಾಗಾಟದ ವೇಳೆ ಕಾರು ಪಲ್ಟಿ – ಜಾನುವಾರುಗಳ ರಕ್ಷಣೆ -ಕಹಳೆ ನ್ಯೂಸ್

ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ವಿಟ್ಲ ಸಮೀಪದ ಕಂಬಳಬೆಟ್ಟು ಮಸೀದಿ ಬಳಿ ನಡೆದಿದೆ. ಕಾರುನಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿರುವುದಾಗಿ ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ....
ಬಂಟ್ವಾಳಸುದ್ದಿ

ನೇರಳಕಟ್ಟೆ ಭಜನಾ ಮಂದಿರದ ಮೇಲೆ ಗುಡ್ಡೆಯಲ್ಲಿ ಆಕಸ್ಮಿಕ ಬೆಂಕಿ..! –ಕಹಳೆ ನ್ಯೂಸ್

ನೇರಳಕಟ್ಟೆ ಭಜನಾ ಮಂದಿರದ ಮೇಲೆ ಗುಡ್ಡೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಗುಡ್ಡೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಜನರು ಆತಂಕಗೀಡಾಗಿದ್ದು, ಆಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಗ್ನಿ ಶಾಮಕ ದಳ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸರಕಾರಿ ಕಚೇರಿಯೊಳಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ-ಕಹಳೆ ನ್ಯೂಸ್

ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊರ್ವ ಸರಕಾರಿ ಕಚೇರಿಯೊಳಗೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬಿಸಿರೋಡಿನಲ್ಲಿ ನಡೆದಿದ್ದು, ಆತನನ್ನು ಮಂಗಳೂರು ‌ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಅದಕ್ಕೂ ಮೊದಲು ಆತನನ್ನು ಸಿ.ಡಿ.ಪಿ.ಒ.ಇಲಾಖೆಯ ಸಿಬ್ಬಂದಿ ಗಳು ಸೇರಿ ಆತನನ್ನು ಬಂಟ್ವಾಳ ‌ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ‌ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ.ಮಹಾರಾಷ್ಟ್ರ ಮೂಲದ ಪ್ರಕಾಶ್ ಚೌಗಲೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ ಎಂದು ಹೇಳಲಾಗಿದೆ....
ಬಂಟ್ವಾಳರಾಜಕೀಯಸುದ್ದಿ

ಹಿಂದೂ ಮಕ್ಕಳಿಗೆ ಇಸ್ಲಾಂ ಪ್ರವಚನ ವಿಚಾರ; ನಿಜಾಂಶ ಅರಿಯದೆ ಸದನದಲ್ಲಿ ಪ್ರಸ್ತಾಪಿಸಿದ ಉಳ್ಳಾಲ ಶಾಸಕರು; ಶಾಸಕ ಸಂಜೀವ ಮಠಂದೂರು ಆಕ್ರೋಶ -ಕಹಳೆ ನ್ಯೂಸ್

ವಿಟ್ಲದ ಅಡ್ಯನಡ್ಕದಲ್ಲಿ ಶಾಲಾ ಮಕ್ಕಳಿಗೆ ಇಸ್ಲಾಂ ಮತ ಪ್ರವಚನ ಮಾಡುತ್ತಿದ್ದಾಗ ಹಿಂದೂ ಸಂಘಟನೆ ದಾಳಿ ನಡೆಸಿದ ವಿಚಾರಕ್ಕೆ ಸಂಭಂಧಪಟ್ಟಂತೆ ಉಳ್ಳಾಲ ಶಾಸಕ ಯುಟಿ ಖಾದರ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರು ಪ್ರತಿಕ್ರಿಯೆ ನೀಡಿದ್ದಾರೆ. ಶಿವರಾತ್ರಿಯಂದು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಆ ಶಾಲೆಯ ಮುಖ್ಯೋಪಾಧ್ಯಯರೇ ಕರೆಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಮಾಹಿತಿ ನಿಡ್ತಾರೆ, ಖಡ್ಡಾಯವಾಗಿ ಹೋಗಬೇಕೆಂದು ತಿಳಿಸಿ ಶಾಲೆಯಲ್ಲಿ ಯಾವುದೇ ಕ್ಲಾಸ್ ತೆಗೆದುಕೊಳ್ಳದೇ ಶಾಲೆಯಿಂದ ದೂರಿವಿರುವ...
ಕ್ರೀಡೆಬಂಟ್ವಾಳಸುದ್ದಿ

ರಾಜ್ಯಮಟ್ಟದ ಮೊದಲ ಬುಡೋಕನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ವಿಜೇತರಾದ ವಿಟ್ಲ ಶಾಲಾ ವಿದ್ಯಾರ್ಥಿಗಳು –ಕಹಳೆ ನ್ಯೂಸ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಮೊದಲ ಬುಡೋಕನ್ ಕರಾಟೆ ಚಾಂಪಿಯನ್‍ಶಿಪ್ ನಡೆದಿದೆ. ವಿಟ್ಲದ ಕಳೆದ 30 ವರ್ಷಗಳಿಂದ ವಿಠಲ ಸುವರ್ಣ ರಂಗ ಮಂದಿರದಲ್ಲಿ ತರಬೇತಿ ನೀಡುತ್ತಿರುವ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ‘ಬುಡೋಕನ್ ಕರಾಟೆ ಚಾಂಪಿಯನ್‍ಶಿಪ್’ ಭಾಗವಹಿಸಿದ್ದಾರೆ. ವಿಟ್ಲದ ವಿವಿಧ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅನೇಕ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ವಿಟ್ಲ ಜೇಸೀಸ್ ಶಾಲೆಯ ವಿದ್ಯಾರ್ಥಿಗಳಾದ ಧ್ರುವ ಕಟಾ, ಕುಮಿಟೆ ಪ್ರಥಮ ಸ್ಥಾನ, ಸಾನ್ವಿ...
ಬಂಟ್ವಾಳಸುದ್ದಿ

ರಾಜ್ಯಮಟ್ಟದ ಓಫನ್ ಕರಾಟೆ ಸ್ಪರ್ಧೆಯಲ್ಲಿ ಸಾಧನೆಗೈದ ಸಹೋದರರು –ಕಹಳೆ ನ್ಯೂಸ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಓಫನ್ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರಿನ ಇಬ್ಬರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರಿಶೋನ್ ಲಸ್ರಾದೊ ಕುಮಿಟೆ ವಿಭಾಗದಲ್ಲಿ ತೃತೀಯ ಮತ್ತು ರಿಯೋನ್ ಲಸ್ರಾದೋ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ನಿವಾಸಿಗಳಾದ ರೋಶನ್ ಲಸ್ರಾದೋ ಮತ್ತು ಸುಶಾಂತಿ ರೋಡ್ರಿಗಸ್ ದಂಪತಿಗಳ ಪುತ್ರರಾಗಿದ್ದು, ಪುತ್ತೂರು ಬೆಂಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.ಇವರು ವಿಟ್ಲದ ಮಾಧವ ಅಳಿಕೆ ಮತ್ತು...
ಬಂಟ್ವಾಳಸುದ್ದಿ

ಸಾಲೆತ್ತೂರುನಲ್ಲಿ ಬೆಂಕಿಗಾಹುತಿಯಾದ ಲಾರಿ – ಅಪಾರ ನಷ್ಟ– ಕಹಳೆ ನ್ಯೂಸ್

ಸಾಲೆತ್ತೂರು ಸಮೀಪದ ಮೆದು ಎಂಬಲ್ಲಿನ ಪೆಟ್ರೋಲ್ ಬಂಕ್ ಎದುರುಗಡೆ ನಿಲ್ಲಿಸಿದ್ದ ಬಾರೀ ಗಾತ್ರದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಲಾರಿಯ ಮುಂದಿನ ಬಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಪೆಟ್ರೋಲ್ ಬಂಕಿನ ಎದುರು ಈ ಘಟನೆ ನಡೆದಿದ್ದು, ಈ ಸಂದರ್ಬದಲ್ಲಿ ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳುಸ್ಥಳಕ್ಕೆ ಆಗಮಿಸಿದ್ದಾರೆ ಕಳೆದ 5 ತಿಂಗಳುಗಳ ಹಿಂದೆ ಈ ಹೊಸ ಲಾರಿಯನ್ನು ಖರೀದಿಸಿದ್ದಲ್ಲದೇ...
1 87 88 89 90 91 147
Page 89 of 147