Recent Posts

Monday, November 25, 2024

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಜೆಪಿ ಬಂಟ್ವಾಳ ಮಂಡಲದ ಬಿ.ಸಿ.ರೋಡಿನ ಕಚೇರಿಯಲ್ಲಿ “ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು” ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ: ಬಿಜೆಪಿ ಬಂಟ್ವಾಳ ಮಂಡಲದ ಬಿ.ಸಿ.ರೋಡಿನ ಕಚೇರಿಯಲ್ಲಿ "ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು" ಕಾರ್ಯಕ್ರಮ ಮಂಡಲ ಉಪಾಧ್ಯಕ್ಷರಾದ ಚಿದಾನಂದ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಂಟ್ವಾಳ ಬೂಡಾದ ಅಧ್ಯಕ್ಷರಾದ ದೇವದಾಸ್ ಶೆಟ್ಟಿಯವರು ಕಾಂಗ್ರೆಸ್ ಪಕ್ಷ ಹೇರಿದ ತುರ್ತುಸ್ಥಿತಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಯಾವ ರೀತಿ ಆಯಿತು ಎಂಬ ಬಗ್ಗೆ ಉಪನ್ಯಾಸ ನೀಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಾಗಿರುವ ಕಾರ್ಯಗಳ ಮಾಹಿತಿ ನೀಡಿದರು....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಶಾಲೆಯ ಸ್ಥಾಪನೆ, ಬೆಳವಣಿಗೆಯ ಬಗ್ಗೆ ತಿಳಿಸುತ್ತಾ, “42 ವರ್ಷಗಳ ಹಿಂದೆ ಬಿತ್ತಿದ ಶಿಕ್ಷಣದ ಬೀಜ ಇಂದು ಬೃಹದಾಕಾರವಾಗಿ ಬೆಳೆದು ನಿಂತ ಶ್ರೀರಾಮ ವಿದ್ಯಾಕೇಂದ್ರದಲ್ಲಿ 3500ಕ್ಕೂ ಹೆಚ್ಚು...
ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಬಂಟ್ವಾಳ – ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕಿ ಮೃತ್ಯು..!– ಕಹಳೆ ನ್ಯೂಸ್

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಹನುಮಾನ್ ನಗರದ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ ಆಚಾರ್ಯ(6)ಮೃತ ಬಾಲಕಿ. ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದ ಆರಾಧ್ಯ ಆಚಾರ್ಯ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದಳು, ಈಕೆಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಜ್ವರ ಏಕಾಏಕಿ ಉಲ್ಬಣಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾಳೆ....
ಬಂಟ್ವಾಳಸಂತಾಪಸುದ್ದಿ

ನಿವೃತ್ತ ಶಿಕ್ಷಕಿ, ನೃತ್ಯ ನಿರ್ದೇಶಕಿ ಗುಣವತಿ ಎಂ ನಿಧನ – ಕಹಳೆ ನ್ಯೂಸ್

ಮೂಡುಬಿದಿರೆ : ಆಚಾರ್ಯ ಕೇರಿ ನಿವಾಸಿ, ನಿವೃತ್ತ ಶಿಕ್ಷಕಿ, ನೃತ್ಯ ನಿರ್ದೇಶಕಿ, ಗಾಯಕಿ ಗುಣವತಿ ಎಂ. (83) ಅವರು ಉಪ್ಪಿನಂಗಡಿಯಲ್ಲಿರುವ ಪುತ್ರಿಯ ಮನೆಯಲ್ಲಿ ಜೂ. 22ರಂದು ನಿಧನ ಹೊಂದಿದರು. ಮೃತರು ಪುತ್ರಿಯನ್ನು ಅಗಲಿದ್ದಾರೆ. 1960ರ ದಶಕದಲ್ಲಿ ಶಿಕ್ಷಕಿ ವೃತ್ತಿ ಆರಂಭಿಸಿದ್ದ ಅವರು ಹೊಸಬೆಟ್ಟು ಗ್ರಾಮದ ಹೆಗ್ಡೆಬೈಲುನಲ್ಲಿ ಹೊಸ ಶಾಲೆ ಸ್ಥಾಪನೆ, ಹೊಸಕಟ್ಟಡ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬೆಳುವಾಯಿ ಮೈನ್, ಜ್ಯೋತಿನಗರ, ಮೂಡುಬಿದಿರೆ ಥರ್ಡ್ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶಿವಾಜಿ ಬಳಗ (.ರಿ) ಶ್ರೀರಾಮ ನಗರ ಮಧ್ವ ವತಿಯಿಂದ ಜು. 03ರಂದು ಕೆಸರ್‌ದ ಗೊಬ್ಬು – 2022 ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ : ಕುಕ್ಕೆರೋಡಿ ಗದ್ದೆಯಲ್ಲಿ ಜು03ರಂದು ತುಳುವರ ಅತೀ ನೆಚ್ಚಿನ ‘ಕೆಸರ್‌ದ ಗೊಬ್ಬು – 2022’ ಕ್ರೀಡೋತ್ಸವ ನಡೆಯಲಿದೆ. ಬೆಳಗ್ಗೆ 08:30ಕ್ಕೆ ಕ್ರೀಡೋತ್ಸವಕ್ಕೆ ಕಂಬಳ ಕೋಣಗಳು ವಿಶೇಷ ಮೆರುಗು ನೀಡಲಿದೆ. ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರಾರ್ಥಮಿಕ ವಿಭಾಗ ಹಾಗೂ ಪ್ರೌಡ ಶಾಲಾ ಮಕ್ಕಳಿಗೆ ಓಟ, ಹಾಳೆ ಓಟ, ಉಪ್ಪು ಮುಡಿ ಓಟ, ಮೂರು ಕಾಲಿನ ಓಟ, ಪುರುಷರಿಗೆ, 100 ಮೀಟರ್ ಓಟ, ಹಾಳೆ ಓಟ,...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ – ಸ್ವಾಗತ ಹಾಗೂ ಎಸ್.ಎಸ್.ಎಲ್.ಸಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ: 2022-23 ಶೈಕ್ಷಣಿಕ ವರ್ಷಕ್ಕೆ ಹೊಸತಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ವಿಶೇಷ ವಿಜೃಂಭಣೆಯಿAದ ಸ್ವಾಗತಿಸಲಾಯಿತು. ಗಣ್ಯ ಅತಿಥಿಗಳು ದೀಪ ಪ್ರಜ್ವಲನೆಮಾಡಿ ಘೃತಾಹುತಿಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ! ಪ್ರಭಾಕರ ಭಟ್ ಕಲ್ಲಡ್ಕ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಲೆ ಪ್ರಾರಂಭದ ಇತಿಹಾಸ ತಿಳಿಸುತ್ತಾ ಸಂಸ್ಕಾರದ ಶ್ರೇಷ್ಠತೆಗೆ ಒತ್ತುಕೊಟ್ಟು ಗುರುಕುಲ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಪ್ರವೀಣ್ ಶೆಟ್ಟಿ ಮಾಲಕತ್ವದ ಸರ್ವಂ ಸೇಫ್ಟಿ ಇಕ್ವಿಪ್ಮೆಂಟ್ ಚೆನ್ನೈ ಇವರಿಂದ ವಿದ್ಯಾದರ್ ರೈ ಅಮೈ ಇವರ ನೇತೃತ್ವದಲ್ಲಿ ಕಡೇಶಿವಾಲಯ ದ. ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆಗೆ ಸುಮಾರು 1 ಲಕ್ಷದ 10 ಸಾವಿರ ಬೆಲೆಯ ಪೀಠೋಪಕರಣಗಳ ಹಸ್ತಾಂತರ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಪ್ರವೀಣ್ ಶೆಟ್ಟಿ ಮಾಲಕತ್ವದ ಸರ್ವಂ ಸೇಫ್ಟಿ ಇಕ್ವಿಪ್ಮೆಂಟ್ ಚೆನ್ನೈ ಇವರಿಂದ ಶ್ರೀಯುತ ವಿದ್ಯಾದರ್ ರೈ ಅಮೈ ಇವರ ನೇತೃತ್ವದಲ್ಲಿ ಕಡೇಶಿವಾಲಯ ದ. ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆಗೆ ರೂ. ಒಂದು ಲಕ್ಷದ ಹತ್ತು ಸಾವಿರ ಬೆಲೆಯ ಪೀಠೋಪಕರಣಗಳನ್ನು ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಯುತ ವಿದ್ಯಾಧರ್ ರೈ ,ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಬಾಬು ಪೂಜಾರಿ, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀಯುತ ಹರಿಶ್ಚಂದ್ರ ಹಾಗೂ...
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲದಲ್ಲಿ ಸಂಘಟನೆಯ ಇತ್ತಂಡಗಳ ನಡುವೆ ಮಾರಾಮಾರಿ ; ಬಂಧಿತರ ಸಂಖ್ಯೆ ೪ಕ್ಕೆ ಏರಿಕೆ – ಕಹಳೆ ನ್ಯೂಸ್

ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಸಂಬಂಧ ಓರ್ವನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಮತ್ತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಇತ್ತಂಡಗಳೂ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಟ್ಟು ೧೯ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶಶಿಕುಮಾರ್ ಎಂಬಾತನನ್ನು ಇನ್ಸ್ ಪೆಕ್ಟರ್...
1 94 95 96 97 98 147
Page 96 of 147