ಬೆಳ್ತಂಗಡಿ ಘಟಕಕ್ಕೆ ಬೇಕು ಹೊಸ ವಾಹನ, ಧರ್ಮಸ್ಥಳಕ್ಕೇ ಪ್ರತ್ಯೇಕ ಘಟಕ-ಕಹಳೆ ನ್ಯೂಸ್
ಬೆಳ್ತಂಗಡಿ: ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನಲ್ಲಿ ಅಗ್ನಿ ಅವಘಡಗಳಿಗೆ ಲೆಕ್ಕವಿಲ್ಲ. ಆದರೂ ತಾಲೂಕಿನಲ್ಲಿ ಏಕಮಾತ್ರ ಅಗ್ನಿಶಾಮಕ ಘಟಕವಿದ್ದು, ಅದರಲ್ಲೂ ವಾಹನದ ಆಯಸ್ಸು ಮೀರಿದ ಕಾರಣ ರಸ್ತೆಗಿಳಿಯುತ್ತಿಲ್ಲ. ಈ ಮಧ್ಯೆ ಬಹುತೇಕ ವರ್ಷವಿಡೀ ಭಕ್ತರ ದಟ್ಟಣೆ ಹೊಂದಿರುವ ಧರ್ಮಸ್ಥಳದಲ್ಲಿ ಸುಸಜ್ಜಿತ ಅಗ್ನಿಶಾಮಕ ಘಟಕ ನಿರ್ಮಾಣವಾಗಬೇಕಿದೆ ಎಂಬ ಬೇಡಿಕೆ ಇದೆ. ಧರ್ಮಸ್ಥಳ ಗ್ರಾಮದಲ್ಲೇ ಸುಮಾರು 15,000ಕ್ಕೂ ಮಿಕ್ಕಿ ಜನಸಂಖ್ಯೆಯಿದ್ದು, ಪ್ರತಿ ವರ್ಷ 2.50 ಕೋಟಿಗೂ ಮಿಕ್ಕಿ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ....