ಬೆಳ್ತಂಗಡಿಯ ಮನೆ ಅಂಗಳದಲ್ಲೇ ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಭಟ್ ಬರ್ಬರ ಹತ್ಯೆ – ಕಹಳೆ ನ್ಯೂಸ್
ಬೆಳ್ತಂಗಡಿ, ಆ.21 : ಮನೆ ಅಂಗಳದಲ್ಲಿಯೇ ನಿವೃತ್ತ ಶಿಕ್ಷಕನನ್ನು ಮಾರಕಾಸ್ತçಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದ ಎಸ್‌ಪಿಬಿ ಕಂಪೌಂಡ್ ನಲ್ಲಿ ನಡೆದಿದೆ. ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಭಟ್(73) ಹತ್ಯೆಯಾದವರು. ಬಾಲಕೃಷ್ಣ ಅವರು ಕೊಲ್ಪಾಡಿ ಮತ್ತು ಕೊಯ್ಯೂರು ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಂಗಳವಾರ ಮಧ್ಯಾಹ್ನದ ನಂತರ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಯಾರೂ, ಕೊಲೆ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಇನ್ನು...