Sunday, November 24, 2024

ಬೆಳ್ತಂಗಡಿ

ಬೆಳ್ತಂಗಡಿ

ತನ್ನ ಸ್ವಂತ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ಮದ್ದಡ್ಕ ಸಮೀಪ ತನ್ನ ಸ್ವಂತ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಮದ್ದ ನಿವಾಸಿ 28ವರ್ಷದ ಮಾಝಿನ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಯವಕನನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು, ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಝಿನ್ ಎಂಜಿನಿಯರ್ ಆಗಿದ್ದು, ಮದ್ದಡ್ಕದಲ್ಲಿ ಕಚೇರಿಯ ಉದ್ಘಾಟನೆಗೆ ತೆರಲುತ್ತಿದ್ದ ವೇಳೆಯಲ್ಲಿ ಮಾಲಾಡಿ ಬಳಿ...
ಬೆಳ್ತಂಗಡಿ

ಉಜಿರೆ ಬಸ್‍ನಲ್ಲಿ ಹೃದಯಾಘಾತ ; ಸಿಬ್ಬಂದಿ ಮತ್ತು ಸಹಪ್ರಯಾಣಿಕರ ನಿರ್ಲಕ್ಷ್ಯಕ್ಕೆ ಬಲಿಯಾಯಿತು ವ್ಯಕ್ತಿಯ ಜೀವ-ಕಹಳೆ ನ್ಯೂಸ್

ಬೆಳ್ತಂಗಡಿ : ಬಸ್ಸಿನಲ್ಲೇ ಹೃದಯಾಘಾತವಾಗಿದ್ದರೂ ಬಸ್ಸಿನಿಂದ ಇಳಿಸಿ ಮುಂದೆ ಸಾಗಿದ ಬಸ್‍ನ ಚಾಲಕ ನಿರ್ವಾಹಕ ಮತ್ತು ಸಹಪ್ರಯಾಣಿಕರ ಅಮಾನವೀಯತೆಗೆ ಒಂದು ಜೀವ ಬಲಿಯಾದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಮಗಳನ್ನು ಭೇಟಿಯಾಗಲು ಹರಿಯಾಣದಿಂದ ಉಜಿರೆಗೆ ಆಗಮಿಸಿದ್ದ ವ್ಯಕ್ತಿ ವಾಪಸ್ಸು ತೆರಳಲು ಉಜಿರೆಯಲ್ಲಿ ಬಸ್ಸಿನಲ್ಲಿ ಕೂತ ಸಂದರ್ಭ ಏಕಾಏಕಿ ಕುಸಿದು ಬಿದ್ದಿದ್ದಾರೆ. ಬಸ್ಸಿನಲ್ಲಿದ್ದ ಸಹಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಇವರನ್ನು ಹಾಗೆಯೇ ಬಸ್ಸಿನಿಂದ ಕೆಳಗೆ ಇಳಿಸಿ ಉಜಿರೆಯ ಬಸ್ಟ್ಯಾಂಡಿನಲ್ಲಿ...
ಬೆಳ್ತಂಗಡಿ

ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ರಸ್ತೆ ದುರಸ್ತಿ; ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ-ಕಹಳೆ ನ್ಯೂಸ್

ಬೆಳ್ತಂಗಡಿ : ಹತ್ತಾರು ಮಂದಿ ನಿತ್ಯ ಅವಲಂಬಿಸುವ ಗ್ರಾಮ ಪಂಚಾಯತ್ ರಸ್ತೆಯನ್ನು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ಹಾರೆ, ಪಿಕ್ಕಾಸು ಹಿಡಿದು ಮೂರು ತಿಂಗಳುಗಳ ಅವಧಿಯಲ್ಲಿ ರಸ್ತೆ ದುರಸ್ತಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕೋಡಿ ನಾಣ್ಯಪ್ಪ ಗೌಡರು. ಮಚ್ಚಿನ ಗ್ರಾಮದ ನೇರೊಳ್‍ಪಲ್ಕೆ ಕುಕ್ಕಿಲ, ಮಾಯಿಲೋಡಿಗೆ ಸಾಗುವ ಮಣ್ಣಿನ ರಸ್ತೆ ತೀರಾ ಹದಗೆಟ್ಟಿದ್ದು, ನಾಣ್ಯಪ್ಪ ಗೌಡರು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ರಸ್ತೆಗೆ ವಾಲಿಕೊಂಡಿದ್ದ ಬಿದಿರು ಮೆಳೆಗಳನ್ನು ಸವರಿಸಿದ್ದಾರೆ....
ಬೆಳ್ತಂಗಡಿ

ಔಷಧ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಉಜಿರೆ ಕಜೆಕಾರ್ ಮೆಡಿಕಲ್ಸ್ ನ ನವೀನ್ ಚಂದ್ರ ಆಯ್ಕೆ- ಕಹಳೆ ನ್ಯೂಸ್

ಬೆಳ್ತಂಗಡಿ : ಉಜಿರೆಯಲ್ಲಿ ಮಾರ್ಚ್ 15ರಂದು ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಸಭೆ ನಡೆದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಉಜಿರೆ ಕಜೆಕಾರ್ ಮೆಡಿಕಲ್ಸ್ ನ ನವೀನ್ ಚಂದ್ರ ಆಯ್ಕೆಯಾಗಿದ್ದಾರೆ. ಅಲ್ಲದೆ, ಉಜಿರೆ ಸುರಕ್ಷಾ ಮೆಡಿಕಲ್ಸ್‍ನ ಶ್ರೀಧರ್ ಕೆ.ವಿ.ಯವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರೆ, ಉಳಿದಂತೆ ಕೋಶಾಧಿಕಾರಿಯಾಗಿ ಬೆಳ್ತಂಗಡಿ ಅಮರ್ ಡ್ರಗ್ ಹೌಸ್‍ನ ಗಣಪತಿ ಭಟ್, ಉಪಾಧ್ಯಕ್ಷರಾಗಿ ಬೆಳ್ತಂಗಡಿ ಅಶ್ವಿನಿ ಮೆಡಿಕಲ್ಸ್ ನ ಎಂ.ಚಂದ್ರಶೇಖರ್ ಆಯ್ಕೆಯಾಗಿರುತ್ತಾರೆ. ಹಾಗೆಯೇ...
ಬೆಳ್ತಂಗಡಿ

ಇಂದು ಬೆಳಗ್ಗೆ ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ 6 ಮಂಗಗಳ ಮೃತದೇಹ ಪತ್ತೆ ; ಸ್ಥಳೀಯರಲ್ಲಿ ಆತಂಕ-ಕಹಳೆ ನ್ಯೂಸ್

ಬೆಳ್ತಂಗಡಿ : ಇಂದು ಬೆಳಗ್ಗೆ ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆಬದಿ 6 ಮಂಗಗಳ ಮೃತದೇಹ ಪತ್ತೆಯಾಗಿದೆ. ಈಗಾಗಲೇ ಹಲವೆಡೆ ಮಂಗನ ಕಾಯಿಲೆಯ ಆತಂಕವಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಒಂದು ಮರಿ ಮಂಗ ಸಹಿತ 6 ಮಂಗಗಳ ಮೃತ ದೇಹ ರಸ್ತೆ ಬದಿ ಪತ್ತೆಯಾಗಿರುವುದನ್ನು ದಾರಿಹೋಕರು ನೋಡಿದ್ದು, ಕೂಡಲೇ ಅರಣ್ಯ ಇಲಾಖೆ ಆರೋಗ್ಯ ಇಲಾಖೆ ಮತ್ತು ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸುತ್ತಮುತ್ತ ಆತಂಕ ಸೃಷ್ಟಿಯಾಗಿದೆ...
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯ ಬಂಧನ-ಕಹಳೆ ನ್ಯೂಸ್

ಬೆಳ್ತಂಗಡಿ : ಯುವಕ ಮಹಮ್ಮದ್ ಇರ್ಫಾನ್ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ ಬುಧವಾರ ನಡೆದಿದೆ. ಯುವಕನನ್ನು ಬಂಧಿಸಿ ಪೋಕ್ಸೋ  ಪ್ರಕರಣ ದಾಖಲಿಸಲಾಗಿದ್ದು, ಮಿತ್ತ ಬಾಗಿಲಿನಲ್ಲಿ ಎಸೆಸೆಲ್ಸಿ ಓದುತ್ತಿದ್ದ ಬಾಲಕಿಗೆ ಇನ್ ಸ್ಟಾಗ್ರಾಂ ನಲ್ಲಿ ಆರೋಪಿ ಪರಿಚಿತನಾಗಿದ್ದ ಬುಧವಾರ ಯುವತಿ ಅಜ್ಜಿ ಮನೆ ಧರ್ಮಸ್ಥಳಕ್ಕೆ ಸರಕಾರಿ ಬಸ್ಸಿನಲ್ಲಿ ತೆರಳುತ್ತಿದ್ದಾಗ ಅದೇ ಬಸ್ಸಿನಲ್ಲಿದ್ದ ಆರೋಪಿ ಆಕೆಯ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ....
ಬೆಳ್ತಂಗಡಿ

ಮೂಡುಬಿದಿರೆಯಲ್ಲಿ ತಂದೆ ಚಲಾಯಿಸುತ್ತಿದ್ದ ಲಾರಿಯಡಿಗೆ ಸಿಲುಕಿ ಬಾಲಕ ದಾರುಣ ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ಮೂಡುಬಿದಿರೆಯಲ್ಲಿ ನಿನ್ನೆ ಸಂಜೆ ತಂದೆ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕ, ಉಜಿರೆ ಅತ್ತಾಜೆ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್. ಉಜಿರೆ ನಿವಾಸಿಯಾಗಿರುವ ಅತ್ತಾಜೆ ಇಬ್ರಾಹಿಂ ಹಾಗೂ ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ ಮುರ್ಷಿದ್ ಮೊದಲನೆಯವನಾಗಿದ್ದ. ಇಬ್ರಾಹಿಂ ಮೂಡುಬಿದಿರೆಯ ಕಲ್ಲಿನಕೋರೆಗೆ ಹೋಗುವಾಗ ಬಾಲಕನೂ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬದುಕು ಕಟ್ಟೋಣ ತಂಡದಿಂದ ಮಾ.14ಕ್ಕೆ ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ – ಕಹಳೆ ನ್ಯೂಸ್

ಉಜಿರೆ : ಉಜಿರೆ ಜನಾರ್ದನ ಸ್ವಾಮಿ ಸೇವಾ ಸಮಿತಿಯ ನೇತೃತ್ವದಲ್ಲಿ ಪ್ರಾರಂಭಗೊಂಡ ಬದುಕು ಕಟ್ಟೋಣ ತಂಡ ಇಲ್ಲಿಯವರೆಗೂ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ, ನಿರ್ಗತಿಕರ ಬಾಳಿಗೆ ದಾರಿದೀಪವಾಗಿದೆ. ಇದೀಗ ಬದುಕು ಕಟ್ಟೋಣ ತಂಡದ ವತಿಯಿಂದ ಮಾ.೧೪ರಂದು ಬೃಹತ್ ರಕ್ತದಾನ ಶಿಬಿರ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದ್ದು, ಮಂಗಳೂರಿನ ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಹಾಗೂ ಎ.ಜೆ ಹಾಸ್ಪೆಟಲ್ ಬ್ಲಡ್ ಬ್ಯಾಂಕ್ ಸಹಭಾಗಿತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಂಡಿದೆ. ಇದರ ಉದ್ಘಾಟನೆಯನ್ನು ಶ್ರೀ...
1 44 45 46 47 48 58
Page 46 of 58