ಸಂಸ್ಕಾರ ಮೌಲ್ಯದಿಂದ ಹಿಂದೂ ರಾಷ್ಟ್ರಸದೃಢ : ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ – ಕಹಳೆ ನ್ಯೂಸ್
ಬೆಳ್ತಂಗಡಿ: ಸನಾತನ ಧರ್ಮವನ್ನು ಸಮೃದ್ಧಿಗೊಳಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ. ಆದರೆ ರಾಷ್ಟ್ರದಲ್ಲಿ ರಾಷ್ಟ್ರೀಯತೆ ಕೊರತೆ ಜತೆಗೆ ವೈಷಮ್ಯ ಭಾವವು ದೇಶದ ಬಲಾಡ್ಯತೆಗೆ ಹೊಡೆತ ಬೀಳಲಿದೆ. ಹೀಗಾಗಿ ಸಮರ್ಥ ಭಾರತ ಕಟ್ಟುವ ನೆಲೆಯಲ್ಲಿ ಶ್ರೀ ರಾಮಕ್ಷೇತ್ರ ಧರ್ಮ ಜಾಗೃತಿಯಿಂದ ಸಂಸ್ಕಾರ ಮೌಲ್ಯ ಬಿಂಬಿಸುವ ಕಾರ್ಯಕ್ಕೆ ಮುನ್ನುಡಿಯಿಟ್ಟಿದೆ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಶ್ರೀ ರಾಮ ಕ್ಷೇತ್ರದಲ್ಲಿ ಮಂಗಳವಾರ ನಡೆದ ಜಗದ್ಗುರು ಪೀಠದ ಪೀಠಾಧೀಶ...