Saturday, November 23, 2024

ಬೆಳ್ತಂಗಡಿ

ಬೆಳ್ತಂಗಡಿ

ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಬೆಳ್ತಂಗಡಿಯ ಪ್ರತಿಭೆ ಪ್ರತೀಕ್ಷಾ-ಕಹಳೆ ನ್ಯೂಸ್

ಬೆಳ್ತಂಗಡಿ : ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡುವ ಮೂಲಕ ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದ ಪ್ರತೀಕ್ಷಾ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮಂಗಳೂರು Abbakka Little Champs ನಲ್ಲಿ ಪ್ರತೀಕ್ಷಾ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡುವ ಮೂಲಕ ವಿಜೇತೆಯಾಗಿದ್ದು, ಈ ಬಾರಿ ಡಿ.ಕೆ.ಡಿ.ಯಲ್ಲಿ ತಮ್ಮ ಪ್ರದರ್ಶನದ ಮೂಲಕ ತೀರ್ಪುಗಾರರ ಮನಗೆದ್ದಿದ್ದಾರೆ. ತೀರ್ಪುಗಾರರಾದ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್, ನಟಿ, ನಿರ್ಮಾಪಕಿ ರಕ್ಷಿತಾ...
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ 11 ಕೆ.ವಿ ಕೊಲ್ಲಿ ಫೀಡರ್ ನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ-ಕಹಳೆ ನ್ಯೂಸ್

ಬೆಳ್ತಂಗಡಿ: ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ಮಿಸಲಾದ ನೂತನ 11ಕೆ ವಿ ಕೊಲ್ಲಿ ಫೀಡರ್ ನ್ನು ಶಾಸಕ ಹರೀಶ್ ಪೂಂಜ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್, ನಗರ ಪಂಚಾಯತ್ ಅಧ್ಯಕ್ಷ ರಜನಿ ಕುಡ್ವ ,ಉಪಾಧ್ಯಕ್ಷ ಜಯಾನಂದ ಗೌಡ, ನಗರ ಪಂಚಾಯತ್ ಸದಸ್ಯರಾದ ಲೋಕೇಶ್, ಶರತ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ವೇದಾವತಿ, ಸ.ಕಾ.ಅಭಿಯಂತರ ಶಿವಶಂಕರ್ ಉಪಸ್ಥಿತರಿದ್ದರು....
ಬೆಳ್ತಂಗಡಿ

ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ನಡೆಯುತ್ತಿರುವ 101 ಕೋಟಿ ರೂಪಾಯಿಗಳ ಸೇವಾಕಾರ್ಯ ಚಟುವಟಿಕೆಗಳನ್ನು ವಿವರಿಸಿದ ಎಲ್.ಐ.ಸಿಯ ರೀಜನಲ್ ಮ್ಯಾನೇಜರ್ ಎಮ್. ಜಗನ್ನಾಥ್ – ಕಹಳೆ ನ್ಯೂಸ್

ಸೌತಡ್ಕ : ಸೇವಾಭಾರತೀಯ ಅಂಗಸಂಸ್ಥೆಯಾದ ಸೇವಾಧಾಮದಲ್ಲಿ ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಸೋಲಾರ್ ಪ್ಯಾನಲ್ ಹಾಗೂ ವಾಟರ್ ಹೀಟರ್ ಉದ್ಘಾಟನ ಸಮಾರಂಭವು ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕರ್ನಾಟಕದ ಎಲ್.ಐ.ಸಿಯ ರೀಜನಲ್ ಮ್ಯಾನೇಜರ್ ಎಮ್.ಜಗನ್ನಾಥ್ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಎಮ್. ಜಗನ್ನಾಥ್ ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ನಡೆಯುತ್ತಿರುವ 101 ಕೋಟಿ ರೂಪಾಯಿಗಳ ಸೇವಾಕಾರ್ಯ ಚಟುವಟಿಕೆಗಳನ್ನು ವಿವರಿಸಿದರು....
ಬೆಳ್ತಂಗಡಿ

ಧರ್ಮಸ್ಥಳದಲ್ಲಿ ಅಯೋಧ್ಯಾ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪತ್ರಿಕಾ ಘೋಷ್ಠಿ; ಕ್ಷೇತ್ರದ ಕಡೆಯಿಂದ 25ಲಕ್ಷ ರೂ. ಸಮರ್ಪಣೆ ಘೋಷಿಸಿದ ಡಾ. ವೀರೇಂದ್ರ ಹೆಗ್ಗಡೆಯವರು- ಕಹಳೆ ನ್ಯೂಸ್

ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆ ರಾಮ ಮಂದಿರ ಇದರ ನಿಧಿ ಸಮರ್ಪಣಾ ಅಭಿಯಾನದ ಪತ್ರಿಕಾ ಘೋಷ್ಠಿಯು ಇಂದು ಧರ್ಮಸ್ಥಳ ಕ್ಷೇತ್ರದ ಮಹೋತ್ಸವ ಸಭಾ ಭವನದಲ್ಲಿ ನಡೆಯಿತು. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ವಿಶ್ವಸ್ಥರಾದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯವರು ಹಾಗೂ ಧರ್ಮಸ್ಥಳದ ಧರ್ಮಧರ್ಶಿಗಳಾದ ಡಾ. ವೀರೇಂದ್ರ ಹೆಗ್ಡೆ ಯವರು ಮಾಧ್ಯಮ ಮಿತ್ರರೊಂದಿಗೆ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ ಪತ್ರಿಕಾ ಘೋಷ್ಠಿ ನೆರವೇರಿಸಿದರು....
ಬೆಳ್ತಂಗಡಿ

ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಜ್ರ ಹಾಗೂ ರತ್ನಾ ಭರಣಗಳ ಮಹಾ ಮೇಳ-ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಜನ ಮನ್ನಣೆಗಳಿಸಿರುವ ಹಾಗೂ 4 ದಶಕಗಳಿಂದ ಸುಧೀರ್ಘ ಸೇವೆ ಸಲ್ಲಿಸುತ್ತಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಜನವರಿ 8 ರಿಂದ 17 ರವರೆಗೆ ವಜ್ರ ಹಾಗೂ ರತ್ನಾ ಭರಣಗಳ ಮಹಾ ಮೇಳ ನಡೆಯುತ್ತಿದೆ.  ಇದೀಗ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಿವಿಧ ವಿನ್ಯಾಸಗಳಲ್ಲಿ ಉತ್ಕøಷ್ಟ ವಜ್ರಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದ್ದು. ಸಾಂಪ್ರದಾಯಿಕ ಹಾಗೂ ನೂತನ ಶೈಲಿಯ ಆಭರಣಗಳ ಪ್ರದರ್ಶನ ಲಭ್ಯವಿದೆ. ಇನ್ನು ವಜ್ರಗಳ ಮೌಲ್ಯದ ಮೇಲೆ 25% ರಷ್ಟು...
ಬಂಟ್ವಾಳಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಬಂಟ್ವಾಳದ ಜನಸೇವಕ ಸಮಾವೇಶದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಫುಲ್ ಮಿಂಚಿಂಗ್..! ; ಕರಾವಳಿಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಹಾಡಿ ಹೊಗಳಿದ ಸಚಿವ ಈಶ್ವರಪ್ಪ – ಕಹಳೆ ನ್ಯೂಸ್

ಬಂಟ್ವಾಳ : ಬಂಟರ ಭವನದಲ್ಲಿ ನಡೆದ ಜನ ಸೇವಕ‌ ಸಮಾವೇಶದಲ್ಲಿ ರಾಜ್ಯದ ಸಚಿವರಾದ ಈಶ್ವರಪ್ಪ ಭಾಗವಹಿಸಿದ್ದರು.   ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಈಶ್ವರಪ್ಪ ಕರಾವಳಿಯ ಶಾಸಕರನ್ನು ಹಾಡಿಹೊಗಳಿದ್ದರೆ, ಅದರಲ್ಲೂ, ಬೆಳ್ತಂಗಡಿ ತಾಲೂಕಿನ ಶಾಸಕ‌ ಹರೀಶ್ ಪೂಂಜ ಹೆಸರು ಉಲ್ಲೇಖಿಸಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಶ್ಲಾಘಿಸಿದ್ದಾರೆ....
ಬೆಳ್ತಂಗಡಿ

ಕುಡಿದ ಮತ್ತಿನಲ್ಲಿ ಪತ್ನಿಯನ್ನು ಮರದ ತುಂಡಿನಿಂದ ಹುಬ್ಬಿನ ಮೇಲೆ ಹೊಡೆದು ಕೊಂದ ಪತಿ-ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಗಂಡನೆ ಹೆಂಡತಿಯನ್ನು ಕೊಂದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿ ಬಾಗಿಲಿನ ಕುಟ್ಟಿಚ್ಛಾರು ಮನೆ ಎಂಬಲ್ಲಿ ನಡೆದಿದ್ದು, ಆರೋಪಿ ಜಾನ್ಸನ್ ಎಂದು ಗುರುತಿಸಲಾಗಿದೆ. ಆರೋಪಿ ಜಾನ್ಸನ್ನು ಕೇರಳ ಮೂಲದ ಇರುಟ್ಟಿ ಎಂಬಲ್ಲಿಯ ತನ್ನ ಪತ್ನಿ ಸೌಮ್ಯಾ ಜಾನ್ಸನ್‍ನನ್ನು ಕೊಲೆ ಮಾಡಿದ್ದಾನೆ ಎಂದು ಆಕೆಯ ಸಹೋದರ ಸನೋಜ್ ಫ್ರಾನ್ಸಿಸ್ ಕುತ್ರೊಟ್ಟು ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ....
ಬೆಳ್ತಂಗಡಿ

ಬೆಳ್ತಂಗಡಿ: ಕುಪ್ಪೆಟ್ಟಿ- ಬಂದಾರು ಪ್ರಯಾಣಿಸುವ ಸಾರ್ವಜನಿಕರ ಗಮನಕ್ಕೆ: ಮುಂದಿನ 20 ದಿನಗಳವರೆಗೆ ರಸ್ತೆಯನ್ನು ಸಂಪೂರ್ಣ ಬಂದ್-ಕಹಳೆ ನ್ಯೂಸ್

ಕುಪ್ಪೆಟ್ಟಿ : ಸಾರ್ವಜನಿಕರ ಗಮನಕ್ಕೆ ಕುಪ್ಪೆಟ್ಟಿಯಿಂದ ಉರುವಾಲು ಪದವಿನವರೆಗೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಕುಪ್ಪೆಟ್ಟಿಯಿಂದ ಉರುವಲುಪದವು ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಇಂದಿನಿಂದ ಮುಂದಿನ 20 ದಿನಗಳವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಟೆಂಡರ್ ನವರು ಪ್ರಕಟಣೆ ತಿಳಿಸಿದ್ದಾರೆ. ಆದ್ದರಿಂದ ಉಪ್ಪಿನಂಗಡಿ ಪ್ರಯಾಣಿಸುವ ಪ್ರಯಾಣಿಕರು, ಪದವು-ಅಂಡೆತ್ತಡ್ಕ-ಇಳಂತಿಳ ಮಾರ್ಗವಾಗಿ ಸಂಚರಿಸಬೇಕಾಗಿ. ಇನ್ನು ಬೆಳ್ತಂಗಡಿ ಪ್ರಯಾಣಿಸುವ ಸಾರ್ವಜನಿಕರು ಪದ್ಮುಂಜ-ಬೊಲ್ಲರಮಜಲು-ಕಣಿಯೂರು-ಪಿಲಿಗೂಡು ಮಾರ್ಗವಾಗಿ ಸಂಚರಿಸಬೇಕಾಗಿ. ಕಾಮಗಾರಿ ಉದ್ದೇಶದಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಮಾದ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ....
1 48 49 50 51 52 58
Page 50 of 58