Saturday, November 23, 2024

ಬೆಳ್ತಂಗಡಿ

ಪುತ್ತೂರುಬೆಂಗಳೂರುಬೆಳ್ತಂಗಡಿಮಡಿಕೇರಿವಾಣಿಜ್ಯಸುದ್ದಿ

ಚಿನ್ನಾಭರಣ ಪ್ರೀಯರಿಗೆ ಗುಡ್ ನ್ಯೂಸ್ ; ಅಗಸ್ಟ್ 17 ರಿಂದ 20ರವರೆಗೆ ಮುಳಿಯ ಜುವೆಲ್ಸ್ ನಲ್ಲಿ ಚಿನ್ನಾಭರಣಗಳ ಉಚಿತ ಸೇವಾ ಶಿಬಿರ – ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ಕೋರ್ಟು ರಸ್ತೆಯಲ್ಲಿರುವ, ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‍ನಲ್ಲಿ ದಿನಾಂಕ 17 ಅಗಸ್ಟ್‍ನಿಂದ 20ರವರೆಗೆ ಚಿನ್ನಾಭರಣಗಳ ಉಚಿತ ಸೇವಾ ಶಿಬಿರ ನಡೆಯಲಿರುವುದು. ನುರಿತ ಕುಶಲ ಕರ್ಮಿಗಳಿಂದ ತುಂಡಾದ ಆಭರಣಗಳ ಜೋಡಣೆ ಹಾಗೂ ವ್ಯವಸ್ಥಿತ ರೀತಿಯ ರಿಪೇರಿ ಹಾಗೂ ಹಳೆಯ ಆಭರಣಗಳನ್ನು ಉಚಿತವಾಗಿ ತೊಳೆದು ಪಾಲಿಶ್ ಮಾಡಿ ಕೊಡಲಾಗುವುದು, ಮತ್ತು ನಿಮ್ಮ ಅಮೂಲ್ಯ ಆಭರಣಗಳ ಸಂರಕ್ಷಣೆ ಬಗ್ಗೆ ಉಚಿತ ಸಲಹೆ ಮತ್ತು ಮಾಹಿತಿ ನೀಡಲಾಗುವುದು. ಈ ಸೇವೆಯೂ...
ಬೆಳ್ತಂಗಡಿ

ತುಳುನಾಡು ಓಕ್ಕೂಟ ಕೇಂದ್ರ ಸಮಿತಿಗೆ ಆಯ್ಕೆಯಾದ ಶೇಖರ್ ಗೌಡತ್ತಿಗೆ ಹಾಗೂ ವಿನ್ಸೆಂಟ್ ಲೊಬೋ ಹಿರಿಯಾಜೆ- ಕಹಳೆ ನ್ಯೂಸ್

ಬೆಳ್ತಂಗಡಿ : ತುಳುನಾಡು ಓಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಶೇಖರ್ ಗೌಡತ್ತಿಗೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ವಿನ್ಸೆಂಟ್ ಲೊಬೋ ಹಿರಿಯಾಜೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾದ ಶೈಲೇಶ್ ಆರ್.ಜೆ ಮಾತನಾಡಿ “೨೦೧೩ರಲ್ಲಿ ಪ್ರಾರಂಭಗೊ0ಡ ನಮ್ಮ ಸಂಘಟನೆ ತುಳುನಾಡಿನ ಜನರ ಅಚಾರ-ವಿಚಾರ ಹಾಗೂ ತುಳು ಭಾಷೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ, ತುಳುವರ ನೋವು ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ ಜೊತೆ ಜೊತೆಗೆ ಎತ್ತಿನ ಹೊಳೆ ಯೋಜನೆ, ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ ಹಾಗೂ...
ಬೆಳ್ತಂಗಡಿ

ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಉಚಿತ ಸಸಿ ವಿತರಣಾ ಕಾರ್ಯಕ್ರಮ : ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ (ರಿ), ಲ್ಯಾಂಪ್ಸ್ ಸೊಸೈಟಿ ಹಾಗೂ ತೋಟಗಾರಿಕೆ ಇಲಾಖೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಆಸರೆ ಯೋಜನೆಯಡಿಯಲ್ಲಿ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಉಚಿತ ಸಸಿ ವಿತರಣಾ ಕಾರ್ಯಕ್ರಮ ಭಾರತೀಯ ಜನತಾ ಪಕ್ಷದ ಪಂಡಿತ್ ದೀನದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ಕಾರ್ಯಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ನಾಯಕ್, ಶಾಸಕರು ಕರ್ನಾಟಕ...
ಬೆಳ್ತಂಗಡಿಸುದ್ದಿ

ಬೆಳ್ತಂಗಡಿಯಲ್ಲಿ ಉದಯಿಸಿದೆ‌ ದೃಶ್ಯಮಾದ್ಯಮ ವರದಿಗಾರರ ಒಕ್ಕೂಟ ” ಮಿಡಿಯಾ ಕ್ಲಬ್ ” ; ಸತೀಶ್ ಪೆರ್ಲೆ ಅಧ್ಯಕ್ಷ, ಶ್ರೀಕಾಂತ್ ಶೆಟ್ಟಿ ಕಾರ್ಯದರ್ಶಿ, ಶರತ್ ಕೋಶಾಧಿಕಾರಿ – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಕೇಬಲ್ ವಾಹಿನಿ‌ ಹಾಗೂ ಎಲ್ಲಾ ದೃಶ್ಯಮಾಧ್ಯಮದ ವರದಿಗಾರರ ಒಕ್ಕೂಟ" ಮೀಡಿಯಾ ಕ್ಲಬ್ " ಶೀಘ್ರದಲ್ಲೇ ಪ್ರಾರಂಭಗೊಳ್ಳಲ್ಲಿದ್ದು, ಕ್ಲಬ್ ನ ಪದಾಧಿಕಾರಿಗಳನ್ನು ಈಗಾಗಲೇ ಆಯ್ಕೆಮಾಡಲಾಗಿದೆ. ಅಧ್ಯಕ್ಷರಾಗಿ ಸತೀಶ್ ಪೆರ್ಲೆ, ಕಾರ್ಯದರ್ಶಿಯಾಗಿ ಶ್ರೀಕಾಂತ್ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಶರತ್ ಇವರನ್ನು ನೇಮಿಸಲಾಗಿದ್ದು, ಮೀಡಿಯಾ ಕ್ಲಬ್ ಸದ್ಯದಲ್ಲಿ ಉದ್ಘಾಟನೆಗೊಳ್ಳಲಿದೆ....
ಬೆಳ್ತಂಗಡಿ

ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಉಲಾಯಿ-ಪಿದಾಯಿ ಇಸ್ಪಿಟ್ ಜುಗಾರಿ ಆಟ 14 ಜನ ಅಂದರ್-ಕಹಳೆ ನ್ಯೂಸ್

ದಿನಾಂಕ 11-07-2020 ರಂದು 00.30 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ರಾತ್ರಿ ಸುಮಾರು 01.30 ಗಂಟೆ ಸಮಯಕ್ಕೆ ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶ ತಲುಪಿ ನೋಡಿದಾಗ ಅರಣ್ಯ ಪ್ರದೇಶದಲ್ಲಿ ಟರ್ಪಾಲ್‌ನ್ನು ಕಾಡು ಮರದ ಕೊಂಬೆಗೆ ಕಟ್ಟಿ ನೆಲದ ಮೇಲೆ ಪ್ಲಾಸ್ಟಿಕ್ ಹಾಸಿ ಜನರು ಸುತ್ತಲೂ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ ; ಮನೆ ನಿರ್ಮಾಣಕ್ಕೆ 2ನೇ ಕಂತು 5 ಕೋ.ರೂ. ಶೀಘ್ರ ಬಿಡುಗಡೆ – ಕಹಳೆ ನ್ಯೂಸ್

ಬೆಳ್ತಂಗಡಿ: ಕಳೆದ ಬಾರಿ ಪ್ರವಾಹದಿಂದ ತಾಲೂಕಿನಲ್ಲಿ ಅತೀ ಹೆಚ್ಚು ಮನೆಗಳು ಹಾನಿಗೀಡಾಗಿದ್ದವು. ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಜಿಪಿಎಸ್‌ ಹಾಗೂ ತಾಂತ್ರಿಕ ತೊಂದರೆ ಉಂಟಾಗಿರುವುದನ್ನು ಸರಿಪಡಿಸಿ ಎರಡನೇ ಕಂತು 5 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದರು. ದ.ಕ. ಜಿಲ್ಲಾಧಿಕಾರಿಯಾದ ಬಳಿಕ ಮೊದಲನೇ ಬಾರಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಮಿತ್ತಬಾಗಿಲು ಕಾಳಜಿ ಕೇಂದ್ರದಲ್ಲಿ ಮಾಧ್ಯಮದೊಂದಿಗೆ...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಬೆಳ್ತಂಗಡಿಸುದ್ದಿಸುಳ್ಯ

ಪುತ್ತೂರಿನಲ್ಲಿ 6, ಮಂಗಳೂರಿನಲ್ಲಿ 81 ರವಿವಾರ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 132 ಮಂದಿಗೆ ಕೊರೋನಾ ಪಾಸಿಟಿವ್.! ; 6 ಮಂದಿ ಸಾವು – ಕಹಳೆ ನ್ಯೂಸ್

ಮಂಗಳೂರು : ಜಿಲ್ಲೆಯಲ್ಲಿ ರವಿವಾರ ಕೋವಿಡ್ ಸೋಂಕಿಗೆ 6 ಮಂದಿ ಸಾವನ್ನಪ್ಪಿದ್ದು, 132 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಸೋಂಕಿಗೆ ಇಂದು ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ, ಇದುವರೆಗೆ ಕೋವಿಡ್ ಸೋಂಕಿಗೆ ಒಟ್ಟು 220 ಮಂದಿ ಸಾವನ್ನಪ್ಪಿದ್ದಾರೆ. ಇಂದಿನ 132 ಹೊಸ ಪ್ರಕರಣಗಳಲ್ಲಿ ಮಂಗಳೂರಿನಲ್ಲಿ 81 ಮಂದಿ, ಬಂಟ್ವಾಳದ 22 ಮಂದಿ, ಬೆಳ್ತಂಗಡಿಯ 4 ಮಂದಿ, ಪುತ್ತೂರಿನಲ್ಲಿ 6 ಮಂದಿ, ಸುಳ್ಯದಲ್ಲಿ 3 ಮಂದಿ...
ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

ಶಾಸಕ‌ ಹರೀಶ್ ಪೂಂಜಗೆ ಕೊರೊನಾ ಪಾಸಿಟಿವ್ ; ಸಿ.ಎಂ. ಯಡಿಯೂರಪ್ಪರನ್ನು ಭೇಟಿಯಾಗಿದ್ದೇ ಮುಳುವಾಯಿತಾ ‘ಶ್ರಮಿಕ’ನಿಗೆ..? – ಕಹಳೆ ನ್ಯೂಸ್

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇತ್ತೀಚೆಗಷ್ಟೇ ಸಿ.ಎಂ. ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಸಿ.ಎಂ. ಅವರ ವರದಿ ಬರುವ ಕೆಲ ದಿನಗಳ ಹಿಂದೆಯಷ್ಟೇ ಹರೀಶ್ ಪೂಂಜಾ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಇದೀಗ ಪೂಂಜಾಗೂ ಸೋಂಕು ದೃಢಪಟ್ಟಿದ್ದು, ಸಿ.ಎಂ. ಭೇಟಿಯೇ ಮುಳುವಾಯಿತೇ ಎಂಬ ಮಾತುಗಳು ಕೇಳಿಬರುತ್ತಿದೆ....
1 52 53 54 55 56 58
Page 54 of 58