ಇಂದು ಮೈರೋಳ್ತಡ್ಕದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ- ಕಹಳೆ ನ್ಯೂಸ್
ಮೈರೋಳ್ತಡ್ಕ: ಬೆಳ್ತಂಗಡಿ ತಾಲೂಕಿನ ಫ್ರೆಂಡ್ಸ್ ಮೈರೋಳ್ತಡ್ಕ ಇದರ ವತಿಯಿಂದ ಇಂದು 7ಗಂಟೆಗೆ ದ್ವಿತೀಯ ವರ್ಷದ MVL-2021 ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕದ ಕ್ರೀಡಾಂಗಣದಲ್ಲಿ ವಲಯ ಮಟ್ಟದ 8ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ನೆರವೇರಲಿದೆ. ಈ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಆಗಮಿಸಲಿದ್ದಾರೆ. ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದಪ್ಪ ಪೂಜಾರಿ ಬೊಲೋಡಿ, ಅಧ್ಯಕ್ಷತೆಯಲ್ಲಿ...