Breaking News : ಬೆಳ್ತಂಗಡಿ ತಾಲೂಕಿನ ಕುಪ್ಪೇಟಿಯಲ್ಲಿ ಟ್ರಾನ್ಸಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಮೃತ್ಯು – ಕಹಳೆ ನ್ಯೂಸ್
ಜೂ 27: ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಬೆಳ್ತಂಗಡಿ ಮೆಸ್ಕಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಬಿಜಾಪುರ ಮೂಲದ, ಬಸವರಾಜ್ ಎಂಬವರು ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಕುಪ್ಪೇಟಿಯಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಬಳಿ ಅರ್ತ್ ಫಾಲ್ಟ್ ನ್ನು ದುರಸ್ತಿಗೊಳಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಳೆದ ವರ್ಷ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲೂ ಇದೇ ರೀತಿಯ...