ಸರ್ಕಾರಿ ಜಮೀನಿಗೆ ತಂತಿಬೇಲಿ ಅಳವಡಿಕೆ: ಕಂದಾಯ ಅಧಿಕಾರಿಗಳಿಂದ ತೆರವು-ಕಹಳೆ ನ್ಯೂಸ್
ಕುಂದಾಪುರ: ಆಜ್ರಿ ಗ್ರಾ.ಪಂ ವ್ಯಾಪ್ತಿಯ ಬಾಂಡ್ಯ ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗ ಖಾಸಗಿ ವ್ಯಕ್ತಿಯೋರ್ವರು ಸರ್ಕಾರಿ ಜಾಗಕ್ಕೆ ತಂತಿಬೇಲಿ ಅಳವಡಿಸಿದ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆ ವಂಡ್ಸೆ ಹೋಬಳಿ ಕಂದಾಯ ಇಲಾಖೆ ಕಾರ್ಯಚರಣೆ ನಡೆಸಿ ತಂತಿಬೇಲಿಯನ್ನು ತೆರವುಗೊಳಿಸಿ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದ ಘಟನೆ ಗುರುವಾರ ನಡೆದಿದೆ. ಕಳೆದ ವಾರಗಳ ಹಿಂದೆ ಬಾಂಡ್ಯ ಸರ್ಕಾರಿ ಶಾಲೆಯ ಹಿಂಭಾಗ ಕೊಡ್ಲಾಡಿ ಗ್ರಾಮದ ಸರ್ವೇ ನಂಬರ್ 118/* ರಲ್ಲಿ ಸುಮಾರು 10...