ಕುಂದಾಪುರ: ಗದ್ದೆ ಕೆಲಸಕ್ಕೆ ಹೋಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ – ಕಹಳೆ ನ್ಯೂಸ್
ಕುಂದಾಪುರ: ಗದ್ದೆ ಕೆಲಸಕ್ಕೆ ಹೋಗಿದ್ದ ಯುವಕನೋರ್ವನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಕೂರ್ಸಿ ಎಂಬಲ್ಲಿ ನಡೆದಿದೆ. ಕೂರ್ಸಿ ನಿವಾಸಿ ಕಾರ್ತಿಕ್ ಆಚಾರ್ (26) ಮೃತ ಯುವಕ. ನಿನ್ನೆ ಮಧ್ಯಾಹ್ನ ಊಟದ ಬಳಿಕ ಗದ್ದೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ ಕಾರ್ತಿಕ್ ವಾಪಸ್ ಮನೆಗೆ ಬಾರದೇ ಇದ್ದುದರಿಂದ ಸಂಜೆಯ ವೇಳೆ ಸಹೋದರರು ಗದ್ದೆ, ತೋಟದ ಬಳಿ ಹೋಗಿ ಹುಡುಕಾಡಿದ್ದಾರೆ. ಈ ವೇಳೆ ಗದ್ದೆಯ ಬಳಿಯಿರುವ...