ವಿಚಿತ್ರ ರೋಗ ಬಾಧೆಯಿಂದ ನರಳುತ್ತಿರುವ ಪುತ್ರನ ಸ್ಥಿತಿ ನೆನೆದು ತಾಯಿಯ ಕಣ್ಣೀರ ರೋದನ;ಔಷಧಕ್ಕೋಸ್ಕರ ತಾಯಿ ಖರ್ಚು ಮಾಡಿ ಸೋತು ಸುಣ್ಣ-ಕಹಳೆ ನ್ಯೂಸ್
ಕುಂದಾಪುರ:ಮೈತುಂಬಾ ಗುಳ್ಳೆ,ಚರ್ಮ ಸುಟ್ಟು ಹೋದಂತಿದೆ.ವಿಪರೀತ ಯಾತನೆ.ವೈದ್ಯರು ದೇಹದಲ್ಲಿ ಹೆಚ್ಚಿರುವ ನಂಜಿನ ಕಾರಣಕ್ಕೆ ಹೀಗಾಗುತ್ತಿದೆ ಎಂದು ಹೇಳುತ್ತಾರೆ. ಆದರೆ ಇನ್ನೂ ಕಾಯಿಲೆ ಯಾವುದೆಂದು ಖಚಿತವಾಗಿಲ್ಲ, ಮನೆಗೆ ಆಧಾರವಾಗಿದ್ದ ಇವರೀಗ ಹಾಸಿಗೆ ಹಿಡಿದಿದ್ದಾರೆ. ವಿಚಿತ್ರ ರೋಗ ಬಾಧೆಯಿಂದ ನರಳುತ್ತಿರುವ ಪುತ್ರನ ಸ್ಥಿತಿ ನೆನೆದು ತಾಯಿಯ ಕಣ್ಣೀರ ರೋದನ ಮುಗಿಲು ಮುಟ್ಟಿದೆ.ತಾಲ್ಲೂಕಿನ ತಲ್ಲೂರು ಗ್ರಾಮದ ಉಪ್ಪಿನಕುದ್ರುವಿನ ಕುಟುಂಬವೊಂದರ ದುರಂತ ಕಥಾನಕವಿದು. ಉಪ್ಪಿನಕುದ್ರುವಿನ ನಿತ್ಯಾನಂದ (38)ಎಂಬವರು ಈ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಾರೆ,ಬಾಲ್ಯದ ದಿನಗಳಿಂದಲೂ ಶ್ರಮಜೀವಿ.ತಂದೆ ಪರಮೇಶ್ವರ,...