ಕುಂದಾಪುರ:ಕಂಡ್ಲೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಛಾಯಾಗ್ರಾಹಕನ ಮೃತದೇಹ ಕುಂದಾಪುರ ಆನಗಳ್ಳಿ ನದಿ ತೀರದಲ್ಲಿ ಪತ್ತೆ -ಕಹಳೆ ನ್ಯೂಸ್
ಕುಂದಾಪುರ: ಗಂಡ ಹೆಂಡತಿ ನಡುವೆ ನಡೆದ ಗಲಾಟೆ ಪೊಲೀಸ್ ಮೆಟ್ಟಿಲೇರಿದ ಪರಿಣಾಮ ಮನನೊಂದು ಪತಿ ಮನೆಯವರ ಎದುರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಡ್ಲೂರು ಎಂಬಲ್ಲಿ ನಡೆದಿದೆ. ನದಿಗೆ ಹಾರಿ ನಾಪತ್ತೆಯಾಗಿರುವವರನ್ನು ಕಾಳಾವರ ಜನತಾ ಕಾಲನಿ ನಿವಾಸಿ ಹರೀಶ್ (44) ಎಂದು ಗುರುತಿಸಲಾಗಿದ್ದು, ಇವರು ವೃತ್ತಿಯಲ್ಲಿ ಪೋಟೋಗ್ರಾಫರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹರೀಶ್ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇತ್ತಿಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ...