ಮಂಜೇಶ್ವರದ ಉಪ್ಪಳ ಪತ್ವಾಡಿ ಪ್ರಕರಣ ತನಿಖೆಯಲ್ಲಿ ಬಯಲುಲಾದ ಸ್ಫೋಟಕ ಮಾಹಿತಿ ಬೆನ್ನಹತ್ತಿದ ಸಿಸಿಬಿ ಪೊಲೀಸರ ದಾಳಿ ; ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಮಂಜೇಶ್ವರದ ಹಸನ್ ಆಶೀರ್, ಕಾಸರಗೋಡು ವರ್ಕಾಡಿಯ ಮಹಮ್ಮದ್ ನೌಶಾದ್ ಸೇರಿದಂತೆ ಐವರ ಬಂಧನ – ಕಹಳೆ ನ್ಯೂಸ್
ಮಂಗಳೂರು : ನಿಷೇಧಿತ ಎಂಡಿಎಂಎ ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ 70 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬಂಧಿತ ವ್ಯಕ್ತಿಗಳನ್ನು ಶಿವಮೊಗ್ಗ ಟಿಪ್ಪು ನಗರದ ಅಬ್ದುಲ್ ಶಾಕೀರ್ (24) ಎಂದು ಗುರುತಿಸಲಾಗಿದೆ. ಬಿ.ಎಸ್.ನಗರ,ಮಂಜೇಶ್ವ ರ, ಉದ್ಯಾವರ ನಿವಾಸಿ ಹಸನ್ ಆಶೀರ್ (34); ಕಣ್ಣೂರಿನ ಪಯ್ಯನೂರಿನ ಪೆರಿಂಗಂ ನಿವಾಸಿ ರಿಯಾಝ್ ಎ.ಕೆ (31); ಕಾಸರಗೋಡು ವರ್ಕಾಡಿ ಪಾವೂರು ಕೆದಂಬಾಡಿ ಮನೆ ನಿವಾಸಿ ಮಹಮ್ಮದ್ ನೌಶಾದ್...