Sunday, January 19, 2025

ಮಂಜೇಶ್ವರ

ಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನಲ್ಲಿ ಮಂಕಿಫಾಕ್ಸ್ ಲಕ್ಷಣ..? – ಕಹಳೆ ನ್ಯೂಸ್

ಮಂಗಳೂರು, ಜು 18 : ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನೋರ್ವನಿಗೆ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನನ್ನು ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮಾತ್ರವಲ್ಲದೆ ಯುವಕನನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು ನಿಗಾ ಇರಿಸಲಾಗಿದೆ. ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ಪ್ರಕರಣ ಜು.12 ರಂದು ದಾಖಲಾಗಿತ್ತು. ವಿದೇಶದಿಂದ ಶನಿವಾರ ಮಂಗಳೂರು...
ಕಾಸರಗೋಡುಕ್ರೈಮ್ಮಂಜೇಶ್ವರಸುದ್ದಿ

ಕರಾವಳಿ ಜಿಲ್ಲೆಯ ಶಾಲೆಯೊಂದರಿಂದ ಆತಂಕಕಾರಿ ಘಟನೆ ವರದಿ ; ಒಂದು ಶಾಲೆಯ 7 ಮಂದಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಕಹಳೆ ನ್ಯೂಸ್

ಕಾಸರಗೋಡು : ಒಂದೇ ಶಾಲೆಯ 7 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕರಾವಳಿ ಜಿಲ್ಲೆ ಕಾಸರಗೋಡಿನ ಬೇಕಲ ಎಂಬಲ್ಲಿ ನಡೆದಿದೆ. ಈ ಕುರಿತು ಡಿವೈಎಸ್‌ಪಿ ಸಿ.ಕೆ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡಿದೆ. ಮೂವರು ವಿದ್ಯಾರ್ಥಿಗಳು ನೀಡಿದ ದೂರಿನಂತೆ ನಾಲ್ವರ ವಿರುದ್ಧ ಬೇಕಲ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಮ್ಮ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ....
ಕಾಸರಗೋಡುಬದಿಯಡ್ಕಮಂಜೇಶ್ವರಸಂತಾಪಸುದ್ದಿ

265ರಷ್ಟು ಮನೆಗಳನ್ನು ನಿರ್ಮಿಸಿ ಕೊಡುಗಡೆ ನೀಡಿದ್ದ ಕಾಸರಗೋಡಿನ ಕೊಡುಗೈ ದಾನಿ, ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್ ನಿಧನ – ಕಹಳೆ ನ್ಯೂಸ್

ಕಾಸರಗೋಡು, ಜ 22 : ಕೊಡುಗೈ ದಾನಿ, ಸಮಾಜ ಸೇವಕ, ಸಾಯಿರಾಂ ಗೋಪಾಲಕೃಷ್ಣ ಭಟ್(85) ಅವರು ಶನಿವಾರ ಮಧ್ಯಾಹ್ನ ಕಿಳಿಂಗಾರಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸಾಯಿರಾಂ ಗೋಪಾಲಕೃಷ್ಣ ಅವರು ಜಾತಿ, ಮತ, ಭೇದ ವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ 265ರಷ್ಟು ನಿರ್ಮಿಸಿ ನೀಡುವ  ಮೂಲಕ ಸೇವೆ ನೀಡಿದ್ದರು. ಬಡ ಕುಟುಂಬಗಳಿಗೆ ಮನೆ, ಸ್ವ ಉದ್ಯೋಗಕ್ಕೆ ಸಹಾಯ ನೀಡುತ್ತಿದ್ದರು. ಈಗಾಗಲೇ ಅಲ್ಲದೆ ಅದೆಷ್ಟೋ ಕುಟುಂಬಗಳಿಗೆ ಆರ್ಥಿವಾಗಿಯೂ ಸಹಕಾರ ನೀಡಿದ್ದರು. ಶ್ರೀ ಸತ್ಯ ಸಾಯಿಬಾಬಾ...
ಉಡುಪಿಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

Breaking News : ಉಗ್ರರು ನುಸುಳಿರುವ ಶಂಕೆ ; ಕೇರಳ-ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್‌..! ಗಡಿಗಳಲ್ಲೂ ಬಿಗಿ ಭದ್ರತೆ – ಕಹಳೆ ನ್ಯೂಸ್

ಮಂಗಳೂರು: ಶ್ರೀಲಂಕಾದಿಂದ ಶಂಕಿತ ಉಗ್ರರು ಒಳನುಸುಳಿರುವ ಶಂಕೆಯಾಗಿದ್ದು, ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್​ನ್ನ ಘೋಷಿಸಲಾಗಿದೆ. ಶ್ರೀಲಂಕಾದಿಂದ 2 ಯಾಂತ್ರೀಕೃತ ಬೋಟ್​ನಲ್ಲಿ ಕೇರಳ ಮತ್ತು ಕರಾವಳಿಗೆ ಶಂಕಿತ ಉಗ್ರರು ಬಂದಿಳಿದಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಶಂಕಿತರು ಕೇರಳದ ಅಲಪ್ಲುಳ ಬಂದರಿಗೆ ತಲುಪಿರುವ ಮಾಹಿತಿಯನ್ನ ಗುಪ್ತಚರ ಇಲಾಖೆಗೆ ರವಾನಿಸಿದೆ. ಪಾಕಿಸ್ತಾನಕ್ಕೆ ತೆರಳಲು ಕರಾವಳಿ ಭಾಗಕ್ಕೆ, 12 ಮಂದಿ ಶ್ರೀಲಂಕಾದ ಶಂಕಿತ ಉಗ್ರರು ಬಂದಿರೋ ಶಂಕೆಯಿದೆ ಎನ್ನಲಾಗಿದೆ. ಕೇರಳ ಅಥವಾ...
ಕಾಸರಗೋಡುದಕ್ಷಿಣ ಕನ್ನಡಬೆಂಗಳೂರುಮಂಜೇಶ್ವರರಾಜ್ಯಸುದ್ದಿ

ಕರ್ನಾಟಕದ ಗಡಿನಾಡಿನ ಹೋರಾಟಗಾರರಾದ ಕಯ್ಯಾರ ಕಿಞ್ಞಣ್ಣ ರೈ ಹಾಗೂ ಜಯದೇವಿ ತಾಯಿ ಲಿಗಾಡೆರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದ ಗಡಿನಾಡಿನ ಹೋರಾಟಗಾರರಾದ ಕಯ್ಯಾರ ಕಿಞ್ಞಣ್ಣ ರೈ ಹಾಗೂ ಜಯದೇವಿ ತಾಯಿ ಲಿಗಾಡೆರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಆರ್ಥಿಕ ವರ್ಷದ ಪ್ರಥಮ ಪ್ರಾಧಿಕಾರ ಸಭೆಯಲ್ಲಿ ಹಲವಾರು ಕನ್ನಡಪರ ಕನ್ನಡ ನಾಡು-ನುಡಿ ಸಂಸ್ಕೃತಿ ಪರ ಯೋಜನೆಗಳನ್ನು...
ಕಾಸರಗೋಡುದಕ್ಷಿಣ ಕನ್ನಡಪುತ್ತೂರುಮಂಜೇಶ್ವರಸುದ್ದಿಸುಳ್ಯ

ದಕ್ಷಿಣ ಕನ್ನಡ ಜಿಲ್ಲೆಗೆ ಝಿಕಾ ವೈರಸ್ ಆತಂಕ | ಕೇರಳ ಗಡಿಭಾಗದಲ್ಲಿ ಭಾರೀ ಕಟ್ಟೆಚ್ಚರ ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 10 ಚೆಕ್‌ಪೋಸ್ಟ್‌ – ಕಹಳೆ ನ್ಯೂಸ್

ಮಂಗಳೂರು, ಜುಲೈ 13: ಕೊರೊನಾ ಮಹಾಮಾರಿಯ ನಡುವೆ ಇದೀಗ ಝಿಕಾ ವೈರಸ್ ಆತಂಕ ಶುರುವಾಗಿದೆ. ಕೇರಳದಲ್ಲಿ ಈ ವೈರಸ್‌ನ ಅಟ್ಟಹಾಸ ಶುರುವಾಗಿರುವುದರಿಂದ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ಕೇರಳದ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಕೊರೊನಾ ಮಹಾಮಾರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಇದೀಗ ಕೇರಳದಲ್ಲಿ ಝಿಕಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಸದ್ಯ ಕೇರಳದಲ್ಲಿ ಝಿಕಾ ವೈರಸ್...
ಕಾಸರಗೋಡುಮಂಜೇಶ್ವರಸುದ್ದಿ

ನಾಳೆ ಹೊರಬೀಳಲಿದೆ ಕೇರಳ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಭವಿಷ್ಯ ; ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಮತ್ತು ಕಾಸರಗೋಡಿನಲ್ಲಿ ಕೆ. ಶ್ರೀಕಾಂತ್ ಗೆಲುವು ಬಹುತೇಕ ಖಚಿತ – ಕಹಳೆ ನ್ಯೂಸ್

ಕಾಸರಗೋಡು, ಮೇ 01  : ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಸಂಜೆಯೊಳಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ. ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ನಡೆಯಲಿದೆ.   ಮಂಜೇಶ್ವರ - ಕುಂಬಳೆ ಹಯರ್ ಸೆಕಂಡರಿ ಶಾಲೆ, ಕಾಸರಗೋಡು - ಕಾಸರಗೋಡು ಸರಕಾರಿ ಕಾಲೇಜು, ಉದುಮ - ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾಞಂಗಾಡ್ - ನೆಹರೂ ಕಾಲೇಜು ಪಡನ್ನಕಾಡ್‌, ತೃಕ್ಕರಿಪುರ - ತೃಕ್ಕರಿಪುರ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ...
ಕಾಸರಗೋಡುಮಂಜೇಶ್ವರಸುದ್ದಿ

Shocking News : ಕಾಸರಗೋಡು ಜಿಲ್ಲೆಯಲ್ಲಿ ಇಂದು ( ಎಪ್ರಿಲ್ 26 ) ಒಂದೇ ದಿನ 1,086 ಮಂದಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಕಾಸರಗೋಡು, ಎ.26 : ಜಿಲ್ಲೆಯಲ್ಲಿ ಸೋಮವಾರ 1,086 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ 44, 170 ಮಂದಿಗೆ ಸೋಂಕು ದೃಢಪಟ್ಟಿದೆ.   ಈ ನಡುವೆ ಸೋಮವಾರ 424 ಮಂದಿ ಗುಣಮುಖರಾಗಿದ್ದಾರೆ. 12 ಆರೋಗ್ಯ ಸಿಬ್ಬಂದಿಗಳಿಗೂ ಸೋಂಕು ಪತ್ತೆಯಾಗಿದ್ದು, 1,034 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಸದ್ಯ 8,608 ಮಂದಿ ಚಿಕಿತ್ಸೆಯಲ್ಲಿದ್ದಾರೆ. 35, 209 ಮಂದಿ ನಿಗಾದಲ್ಲಿದ್ದು, ಒಟ್ಟು 11, 321 ಮಂದಿ ನಿಗಾದಲ್ಲಿದ್ದಾರೆ....
1 2 3 4
Page 2 of 4