Saturday, April 12, 2025

ಮೂಡಬಿದಿರೆ

ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

SSLC Result | ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ಮೂಡುಬಿದಿರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಸ್ವಸ್ತಿ ಜೈನ್ – ಕಹಳೆ ನ್ಯೂಸ್

ಮೂಡುಬಿದಿರೆ: 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಸ್ವಸ್ತಿ ಜೈನ್ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಸಂಸ್ಕೃತ :125 , ಇಂಗ್ಲಿಷ್ :100, ಕನ್ನಡ :100, ಗಣಿತ:100, ವಿಜ್ಞಾನ:100, ಸಮಾಜ ವಿಜ್ಞಾನ:100. ಒಟ್ಟು 625 ಅಂಕ ಗಳಿಸಿರುತ್ತಾರೆ. ಮೂಡುಬಿದಿರೆಯ ಸಂತೋಷ್ ಜೈನ್, ಸೌಜನ್ಯ ಜೈನ್ ದಂಪತಿಗಳ ಪುತ್ರಿಯಾಗಿರುವ ಸ್ವಸ್ತಿ ಜೈನ್ ಚಿತ್ರಕಲೆ,...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

SSLC Result | ಮೂಡಬಿದ್ರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಐವರು ವಿದ್ಯಾರ್ಥಿಗಳಿಗೆ 625ಕ್ಕೆ 625 – ಕಹಳೆ ನ್ಯೂಸ್

ಮಂಗಳೂರು: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮೂಡಬಿದ್ರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಇಂದಿರಾ ಅರುಣ್, ಈರಯ್ಯ ಶ್ರೀಶೈಲ್, ಕಲ್ಲೇಶ್ವರ್ ಪುಂಡಲಿಕ್ ನಾಯ್ಕ್, ಸುದೇಶ್ ದತ್ತಾತ್ರೇಯ, ಶ್ರೇಯಾ ಆರ್.ಶೆಟ್ಟಿ ಈ ಐವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಉತೀರ್ಣರಾಗಿದ್ದಾರೆ....
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸುವಂತೆ ಅಗ್ರಹಿಸಿ ಮೂಡಬಿದರೆ ಜೈನ ಸಮಾಜಭಾಂದವರ ವತಿಯಿಂದ ಮನವಿ – ಕಹಳೆ ನ್ಯೂಸ್

ಮೂಡುಬಿದಿರೆ: ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು ಮಾತ್ರವಲ್ಲದೆ ಅಪರಾಧಿಕ ಒಳಸಂಚು ಮಾಡಿ ಭಾರತದ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸಿ , ವಿಚಾರಣೆಗೆ ಒಳಪಡಿಸಿ ಶೀಘ್ರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮೂಡಬಿದರೆ ಜೈನ ಸಮಾಜದವರು ಶ್ರೀ ಯತಿರಾಜ್ ಶೆಟ್ಟಿ ಮೂಲಕ ಮೂಡಬಿದ್ರೆಯ ಠಾಣಾಧಿಕಾರಿ ಶ್ರೀ ಸುದೀಪ್ ಎಂ.ವಿ.ಇವರಲ್ಲಿ ದೂರನ್ನು ದಾಖಲಿಸಿದರು. ಈ ಸಂದರ್ಭದಲ್ಲಿ...
ಮೂಡಬಿದಿರೆಸುದ್ದಿ

ರಸ್ತೆ ಪಕ್ಕದಲ್ಲಿ ತುಂಡರಿಸಿದ ರೀತಿಯಲ್ಲಿ ದನದ ತಲೆ ಪತ್ತೆ- ಕಹಳೆ ನ್ಯೂಸ್

ಮೂಡುಬಿದಿರೆ: ತುಂಡರಿಸಿದ ರೀತಿಯಲ್ಲಿ ದನದ ತಲೆ ಪತ್ತೆಯಾದ ಘಟನೆ ಮಹಾವೀರ ಕಾಲೇಜು ಸಮೀಪದ ಕೊಡಂಗಲ್ಲು ಕೀರ್ತಿನಗರ ಕ್ರಾಸ್ ಬಳಿ ನಡೆದಿದೆ. ಮುಂಡದಿಂದ ಬೇರ್ಪಟ್ಟಿದ್ದ ಹಸುವಿನ ತಲೆಬುರುಡೆಯನ್ನು ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಪಕ್ಕದಲ್ಲಿ ಬಿಟ್ಟು ಹೋಗಿದ್ದು, ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೆÇಲೀಸರು ತಲೆಬುರುಡೆಯನ್ನು ಹೊರತೆಗೆಯುವ ವ್ಯವಸ್ಥೆ ಮಾಡಿದರು. ಈ ಘಟನೆಗೆ ಪ್ರತಿಕ್ರಿಯಿಸಿದ ಮೂಡುಬಿದಿರೆಯ ಹಿಂದೂ ಜಾಗರಣ ವೇದಿಕೆ...
ಕ್ರೀಡೆಮೂಡಬಿದಿರೆಸುದ್ದಿ

ದಕ್ಷಿಣ ಕನ್ನಡ ಮೂಡಬಿದಿರೆ 81ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸಮಾಪನ – ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ, ಪಂಜಾಬ್‌ನ ಲವ್ಲಿ ಪ್ರೊಪೆಷನಲ್ ರನ್ನರ್ ಅಫ್- ಕಹಳೆ ನ್ಯೂಸ್

ಮೂಡುಬಿದಿರೆ: ಮಂಗಳೂರು ವಿವಿಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ 81ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯು 6 ಚಿನ್ನ, 6-ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ 105 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. 42 ಅಂಕಗಳನ್ನು ಗಳಿಸಿರುವ ಪಂಜಾಬ್ ಪಾಗ್ವಾರ್‌ನ ಲವ್ಲಿ ಪ್ರೊಫೆಷನಲ್...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡಬಿದಿರೆಯಲ್ಲಿ 81ನೇ ಅಖಿಲ ಭಾರತ ಪುರುಷರ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಆರಂಭ – ಕಹಳೆ ನ್ಯೂಸ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ 81ನೇ ಅಖಿಲ ಭಾರತ ಪುರುಷರ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಜ. 4 ರಿಂದ 7 ರವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ. ಇಂದು ಸಂಜೆ 300 ಕ್ರೀಡಾ ತಂಡಗಳು ಹಾಗೂ 150 ಸಾಂಸ್ಕøತಿಕ ಕಲಾ ತಂಡಗಳಿಂದ ಆಕರ್ಷಕ ಮೆರವಣಿಗೆಯೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದ್ದು, ಕ್ರೀಡಾಕೂಟದಲ್ಲಿ ದೇಶದ 300ಕ್ಕೂ ಅಧಿಕ ವಿಶ್ವವಿದ್ಯಾಲಯಗಳ...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಭವನದಲ್ಲಿ ಕಾನೂನು ಸೇವಾ ಶಿಬಿರ : ಮೂಡಬಿದಿರೆಯ ಕಾನೂನು ಸೇವಾ ಪ್ರಾಧಿಕಾರದ ಸದುಪಯೋಗಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಕರೆ – ಕಹಳೆ ನ್ಯೂಸ್

ಸಮಸ್ಯೆ ಅಥವಾ ದೌರ್ಜನ್ಯಗಳನ್ನು ಮೌನವಾಗಿಯೇ ಎದುರಿಸುವುದು ಯಾವುದೇ ಸಮಾಜದ ಒಳ್ಳೆಯ ಲಕ್ಷಣವಲ್ಲ, ಇಂತಹ ಸ್ಥಿತಿಗಳಲ್ಲಿ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಹೇಳಿದರು. ಡಿ.30ರ ಗುರುವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡಬಿದ್ರಿ ವಕೀಲರ ಸಂಘ ಹಾಗೂ ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಮೂಡಬಿದ್ರಿಯ...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಯಕ್ಷದೇವ ಮಿತ್ರ ಕಲಾ ಮಂಡಳಿ ವತಿಯಿಂದ ಎಸ್.ಕೆ.ಎಫ್ ಬೊಯ್ದರ್ ಆಂಡ್ ಡ್ರೈಯರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಮೋದ್ ಕುಮಾರ್ ಅವರಿಗೆ ಸನ್ಮಾನ- ಕಹಳೆ ನ್ಯೂಸ್

ಮೂಡಬಿದಿರೆ: ಶ್ರೀಯಕ್ಷದೇವ ಮಿತ್ರ ಕಲಾ ಮಂಡಳಿಯ 24ನೇ ವರುಷದ ಸಂದರ್ಭ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಬೆಳುವಾಯಿ ಬನ್ನಡ್ ಎಸ್.ಕೆ.ಎಫ್ ಬೊಯ್ದರ್ ಆಂಡ್ ಡ್ರೈಯರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ಯಕ್ಷದೇವ ಮಿತ್ರ ಕಲಾ ಮಂಡಳಿ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಯಕ್ಷದೇವ ಮಿತ್ರ ಕಲಾ ಮಂಡಳಿಯ ಸ್ಥಾಪಕಾಧ್ಯಕ್ಷ ಎಂ. ದೇವಾನಂದ ಭಟ್ ಬೆಳುವಾಯಿ 25ನೇ ವರುಷಾಚರಣೆಯ ವಿಶೇಷ ಸಂದರ್ಭವನ್ನು ಮುಂದೆ 25 ಶಾಲಾ ಕಾಲೇಜುಗಳಲ್ಲಿ...
1 16 17 18 19 20 25
Page 18 of 25
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ