ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಕ್ರಿಸ್‍ಮಸ್ ಆಚರಣೆ- ಕಹಳೆ ನ್ಯೂಸ್
ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ವಿಜ್ಞಾನ ಕಾಲೇಜು, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್‍ಮಸ್ ಸಂಭ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆ ಪುರಸಭೆ ಸದಸ್ಯ ಜೊಸ್ಸಿ ಮೆನೇಜಸ್ ಮಾತನಾಡಿ, ಕ್ರಿಸ್ಮಸ್ ದೀಪಾವಳಿಯಂತೆ ಬೆಳಕಿನ ಹಬ್ಬ. ನಮ್ಮ ಬದುಕು ಇನ್ನೊಬ್ಬರ ಜೀವನಕ್ಕೆ ಬೆಳಕಾಗಬೇಕು ಎನ್ನುವುದನ್ನು ಕ್ರಿಸ್‍ಮಸ್ ಸಾರುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಸೇವೆಯೊಂದಿಗೆ ಬದುಕುವ ಸಂದೇಶವನ್ನು ಕ್ರಿಸ್ಮಸ್ ನೀಡುತ್ತದೆ. ಮಾನವೀಯ ಮೌಲ್ಯಗಳನ್ನು ಅರಿತು ಸರ್ವರಿಗೂ ಒಳಿತು ಮಾಡಬೇಕೆನ್ನುವುದನ್ನು...