ನಾರಾಯಣಗುರುಗಳು ಧಾರ್ಮಿಕ ಶೋಷಣೆಯ ಬಲಿಷ್ಠ ಕೋಟೆಯನ್ನು ಸದ್ದಿಲ್ಲದೆ ಬೇಧಿಸಿದರು : ಸಂತೋಷ್ ಕುಮಾರ್- ಕಹಳೆ ನ್ಯೂಸ್
ಬಂಟ್ವಾಳ : ಸಹಸ್ರಾರು ವರ್ಷಗಳಿಂದ ದೇವಸ್ಥಾನಗಳಿಗೆ ಪ್ರವೇಶ ನೀಡದೆ ಮೂಢನಂಬಿಕೆ, ಕಂದಾಚಾರದ ಮೂಲಕ ಧಾರ್ಮಿಕ ಶೋಷಣೆ ಮಾಡುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳು ಪರಂಪರಾಗತವಾಗಿ ರಕ್ಷಿಸಿಕೊಂಡು ಬಂದ ಬಲಿಷ್ಠವಾದ ಕೋಟೆಯನ್ನು ನಾರಾಯಣಗುರುಗಳು ಸದ್ದಿಲ್ಲದೆ ಭೇದಿಸಿದರು ಎಂದು ಪೂಂಜಲಕಟ್ಟೆ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ತಿಳಿಸಿದರು. ಅವರು ಯುವವಾಹಿನಿ ಬಂಟ್ಟಾಳ ಘಟಕದ ಸಾಂಸ್ಕೃತಿಕ ನಿರ್ದೇಶಕ ಧನುಷ್ ಮದ್ವ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 38 ಮಾಲಿಕೆಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ...